ಗುರುವಾರ , ಮೇ 19, 2022
21 °C

ಮಾರ್ಚ್ 6ಕ್ಕೆ ಬಂಗಾಳಿಯ ಯಾಮಿನಿ-ವರುಣ್ ವಿವಾಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬರೇಲಿ (ಪಿಟಿಐ): ಬಿಜೆಪಿ ಸಂಸದ ವರುಣ್ ಗಾಂಧಿ ಬಂಗಾಳದ ಹುಡುಗಿ ಯಾಮಿನಿಯೊಂದಿಗೆ ವಾರಾಣಸಿಯಲ್ಲಿ ಮಾರ್ಚ್ 6 ರಂದು ಮದುವೆಯಾಗಲಿದ್ದಾರೆ. ‘ಬಂಗಾಳದ ಯಾಮಿನಿಯವರನ್ನು ವರುಣ್ (30) ಮದುವೆಯಾಗಲಿದ್ದಾರೆ’ ಎಂದು  ವರುಣ್ ತಾಯಿ ಮೇನಕಾ ಗಾಂಧಿ ಬುಧವಾರ ರಾತ್ರಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಫೆ.1 ರಂದು ಇಲ್ಲಿ ನಡೆದ ಅಪಘಾತದಲ್ಲಿ ಹಲವು ಐಟಿಬಿಪಿ ಆಕಾಂಕ್ಷಿಗಳು ಮೃತಪಟ್ಟಿದ್ದು ಆ ಬಗ್ಗೆ ಪರಿಸ್ಥಿತಿ ಅರಿಯಲು ಇಲ್ಲಿಗೆ ಭೇಟಿ ನೀಡಿದ್ದ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಸಮಾರಂಭಕ್ಕೆ ಅಹ್ವಾನಿಸಲಾಗುವುದೇ ಎಂಬ ಪ್ರಶ್ನೆಗೆ ಕುಟುಂಬದ ಎಲ್ಲಾ ಸದಸ್ಯರು ಭಾಗವಹಿಸಲಿದ್ದಾರೆ  ಎಂದರು.‘ಸೋನಿಯಾ ಗಾಂಧಿ ಮತ್ತು ರಾಹುಲ್ ಸೇರಿದಂತೆ ಗಾಂಧಿ ಕುಟುಂಬದ ಎಲ್ಲಾ ಸದಸ್ಯರನ್ನು ಮದುವೆ ಸಮಾರಂಭಕ್ಕೆ ಆಹ್ವಾನಿಸಲಾಗುವುದು’ ಎಂದು ದಿ.ಇಂದಿರಾ ಗಾಂಧಿಯವರ ಸೊಸೆ ಮೇನಕಾ ತಿಳಿಸಿದ್ದಾರೆ. ಮದುವೆ ನಂತರ ದೆಹಲಿ ಮತ್ತು ವರುಣ್ ಅವರ ಲೋಕಸಭಾ ಕ್ಷೇತ್ರವಾದ ಫಿಲಿಬಿಟ್‌ನಲ್ಲಿ ಆರತಕ್ಷತೆ ನಡೆಯಲಿದೆ ಎಂದು ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.