ಶನಿವಾರ, ಮೇ 28, 2022
30 °C

ಮಾಲೂರು: ಶೇ 97.70 ಕೆರೆಗಳಲ್ಲಿ ಒತ್ತುವರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ:  ಜಿಲ್ಲೆಯಲ್ಲಿ ಕೆರೆಗಳ ಒತ್ತುವರಿ ಪ್ರಮಾಣದ ಲೆಕ್ಕದಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಮಾಲೂರು ತಾಲ್ಲೂಕಿನ ವಿಶೇಷವೆಂದರೆ ಇಲ್ಲಿನ ಒಟ್ಟಾರೆ ಕೆರೆಗಳ ಪೈಕಿ ಶೇ 97.45ರಷ್ಟರಲ್ಲಿ ನೂರಾರು ಗ್ರಾಮಸ್ಥರು ಒತ್ತುವರಿ ಮಾಡಿಕೊಂಡಿದ್ದಾರೆ.ಅಂದರೆ ತಾಲ್ಲೂಕಿನ 393 ಕೆರೆಗಳ ಪೈಕಿ 384 ಕೆರೆಗಳಲ್ಲಿ ಒತ್ತುವರಿ ನಡೆದಿದೆ. ತಾಲ್ಲೂಕಿನ ಕೇವಲ 9 ಕೆರೆಗಳು ಮಾತ್ರ ಈಗಲೂ ಉಳಿದಿವೆ. ತಾಲ್ಲೂಕಿನಾದ್ಯಂತ 40 ಹೆಕ್ಟೇರ್ ವ್ಯಾಪ್ತಿಯಲ್ಲಿರುವ 239 ಕೆರೆಗಳಿವೆ. 5724.23 ಹೆಕ್ಟೇರ್‌ನಷ್ಟು ಕೆರೆಯ ಅಂಗಳದ ವಿಸ್ತೀರ್ಣವಿದೆ. ಒಟ್ಟಾರೆ 393 ಕೆರೆಗಳಲ್ಲಿ 618 ಎಕರೆಯಷ್ಟು ಒತ್ತುವರಿಯಾಗಿದೆ. ತಾಲ್ಲೂಕಿನ ಎಲ್ಲ ಹೋಬಳಿಗಳಲ್ಲೂ ಕೆರೆ ಒತ್ತುವರಿ ನಡೆದಿರುವುದು ಗಮನಾರ್ಹ.ಒಂದು ಕೆರೆಯನ್ನೇ ಹಲವು ಮಂದಿ ಒತ್ತುವರಿ ಮಾಡಿರುವುದು ಹೆಚ್ಚು ಕಂಡುಬರುತ್ತದೆ. ಒತ್ತುವರಿದಾರರ ಹೆಸರುಗಳೂ ಕೂಡ ತಾಲ್ಲೂಕು ಆಡಳಿತದ ಬಳಿ ಲಭ್ಯವಿದೆ. ಆದರೆ ಇದುವರೆಗೆ ಕ್ರಮ ಕೈಗೊಂಡ ನಿದರ್ಶನಗಳೂ ಇಲ್ಲ.ತಾಲ್ಲೂಕಿನಲ್ಲಿ ಒತ್ತುವರಿಗೆ ಒಳಗಾಗದೇ ಇರುವ ಕೆರೆಗಳು:

ಹಳೇಪಾಳ್ಯ ಕೆರೆ,ಅಣ್ಣಿಗಾನಹಳ್ಳಿ ಕೆರೆ,ಓಬಟ್ಟಿ ಕೆರೆ, ಕರಡಗುರ್ಕಿ ಕೆರೆ, ವೀರಕಪುತ್ರ ಕೆರೆ, ಬಸಾಪುರ ಕೆರೆ, ಆಗಲಕೋಟೆ ಕೆರೆ, ಮಾದಮಂಗಲ ಕೆರೆ, ಕೆಂಪಸಂದ್ರ ಕೆರೆಗಳಲ್ಲಿ ಒತ್ತುವರಿ ನಡೆದಿಲ್ಲ ಎಂದು 2012ರ ಜನವರಿಯಲ್ಲಿ ಅಲ್ಲಿನ ತಹಶೀಲ್ದಾರರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದ್ದಾರೆ.ಚಿಕ್ಕ ಪ್ರಮಾಣ: ತಾಲ್ಲೂಕಿನ ಕೆರೆಗಳನ್ನು ಹಲವು ಮಂದಿ ಅತಿ ಚಿಕ್ಕ ಪ್ರಮಾಣದಲ್ಲಿ ಒತ್ತುವರಿ ಮಾಡಿದ್ದಾರೆ. ಟೇಕಲ್ ಹೋಬಳಿಯ ದಾಸರಹಳ್ಳಿಕೆರೆಯನ್ನು 0.3 ಎಕರೆಯಷ್ಟು ಒತ್ತುವರಿ ಮಾಡಿರುವವರೂ ಇದ್ದಾರೆ. 5ಕ್ಕಿಂತ ಹೆಚ್ಚು ಎಕರೆ ಕೆರೆ ಪ್ರದೇಶವನ್ನು ಒತ್ತುವರಿ ಮಾಡಿದ ನಿದರ್ಶನಗಳು ಇಲ್ಲಿ ಕಂಡು ಬರುವುದಿಲ್ಲ. ಜಿಲ್ಲೆಯ ಇತರೆ ತಾಲ್ಲೂಕುಗಳಲ್ಲಿ ಕಂಡು ಬರುವ ರೀತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಕೆರೆಗಳನ್ನು ಒತ್ತುವರಿ ಮಾಡಿದ ನಿದರ್ಶನಗಳೂ ಇಲ್ಲಿ ಇಲ್ಲದಿರುವುದು ಇನ್ನೊಂದು ವಿಶೇಷ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.