ಗುರುವಾರ , ಮೇ 13, 2021
34 °C

ಮಾಸಾಶನಕ್ಕಾಗಿ ಅಂಗವಿಕಲರ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಧುಗಿರಿ: ಐದು ತಿಂಗಳಿನಿಂದ ಸ್ಥಗಿತಗೊಂಡಿರುವ ಅಂಗವಿಕಲರ ಮಾಸಾಶನವನ್ನು ಬಿಡುಗಡೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪಂಡಿತ್ ಪುಟ್ಟರಾಜ ಗವಾಯಿ ತಾಲ್ಲೂಕು ಅಂಗವಿಕಲರ ಒಕ್ಕೂಟದ ಕಾರ್ಯಕರ್ತರು ಬುಧವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.ಪುರಸಭೆ ಆವರಣದಿಂದ ಹೊರಟು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಒಕ್ಕೂಟದ ಕಾರ್ಯಕರ್ತರು ತಾಲ್ಲೂಕು ಕಚೇರಿ ಮುಂಭಾಗ ಸಭೆ ನಡೆಸಿದರು.ತಾಲ್ಲೂಕಿನಲ್ಲಿ ಹೆಚ್ಚು ಜನ ಅಂಗವಿಕಲರಿದ್ದು, ಇದಕ್ಕೆ ಫ್ಲೋರೈಡ್‌ಯುಕ್ತ ನೀರು ಸೇವನೆ ಪ್ರಮುಖ ಕಾರಣವಾಗಿದೆ. ಆದ್ದರಿಂದ ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲಿ ಫ್ಲೋರೈಡ್ ಮುಕ್ತ ನೀರನ್ನು ಒದಗಿಸಬೇಕು. ಅಂಗವಿಕಲರ ಅಧಿನಿಯಮ 1995ರಡಿ ಶೇ. 3ರಷ್ಟು ಅನುದಾನ ಮೀಸಲಿಟ್ಟು ಅಂಗವಿಕಲರ ಕ್ಷೇಮಾಭಿವೃದ್ಧಿಗೆ ಖರ್ಚು ಮಾಡುವಂತೆ ಇಲಾಖೆ ಮುಖ್ಯಸ್ಧರಿಗೆ ಆದೇಶ ನೀಡಬೇಕು.

 

ತಾಲ್ಲೂಕಿನ ಅಂಗವಿಕರಿಗೆ ಅರಿವು ಮೂಡಿಸಲು ಕಾರ್ಯಾಗಾರ ಹಮ್ಮಿಕೊಳ್ಳಬೇಕು. ವಸತಿ ವ್ಯವಸ್ಥೆ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಸಂಘದ ಅಧ್ಯಕ್ಷ ಹಳೇಹಟ್ಟಿ ರಂಗನಾಥ್, ಮುಖಂಡರಾದ ಹನುಮಂತರಾಯಪ್ಪ, ಬಾಲಕೃಷ್ಣ, ಪಿ.ಟಿ.ವೆಂಕಟೇಶ್, ಪೋಲೇನಹಳ್ಳಿ ವೆಂಕಟೇಶ್, ಕೆಂಪಮ್ಮ ಇತರರು ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.