ಸೋಮವಾರ, ಜನವರಿ 20, 2020
19 °C

ಮಾಸಾಶನ ಆದೇಶ ಪತ್ರ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಮಖಂಡಿ: ಅರ್ಹ ವಯೋವೃದ್ಧರಿಗೆ, ವಿಧವೆಯರಿಗೆ, ಅಂಗವಿಕಲರಿಗೆ ಮಾಸಾ­ಶನ ಸಿಕ್ಕಿಲ್ಲ ಎಂಬ ದೂರು ಹಿಂದಿನ ಸರ್ಕಾರದ ಅವಧಿಯಲ್ಲಿ ಕೇಳಿ ಬಂದಿ­ದ್ದವು. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಇಡೀ ರಾಜ್ಯದಾದ್ಯಂತ ಗ್ರಾಮ ಮಟ್ಟದಲ್ಲಿ ಸಮೀಕ್ಷೆ ಕೈಗೊಂಡು ಮಾಸಾಶನ ಮಂಜೂರು ಮಾಡಲಾ­ಗುತ್ತಿದೆ ಎಂದು ಸಚಿವೆ ಉಮಾಶ್ರೀ ಹೇಳಿದರು.ತಾಲ್ಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಕಂದಾಯ ಇಲಾಖೆ ಶನಿವಾರ ಏರ್ಪ­ಡಿಸಿದ್ದ ತೇರದಾಳ ಹೋಬಳಿ ಮಟ್ಟದ ಪಿಂಚಣಿ ಅದಾಲತ್‌ ಕಾರ್ಯಕ್ರಮ ಉದ್ಘಾಟಿಸಿ ಹಾಗೂ ಅರ್ಹ ಫಲಾನುಭವಿಗಳಿಗೆ ಮಸಾಶನ ಮಂಜೂರಾತಿ ಆದೇಶ ಪತ್ರ ಮತ್ತು ಪರಿಹಾರಧನ ಚೆಕ್‌ ವಿತರಿಸಿ ಅವರು ಮಾತನಾಡಿದರು.2013ರ ಜುಲೈ ತಿಂಗಳಿನಿಂದ ಈ ವರೆಗೆ ತೇರದಾಳ ಹೋಬಳಿ ಮಟ್ಟದಲ್ಲಿ 2500 ಕ್ಕಿಂತ ಹೆಚ್ಚು ಅರ್ಹ ಫಲಾ­ನುಭವಿಗಳನ್ನು ಸಮೀಕ್ಷೆ ಮೂಲಕ ಗುರುತಿಸಿ ಮಾಸಾಶನ ಮಂಜೂರಾತಿ ಪತ್ರ ವಿತರಿಸಿ ಜನರ ಸಂಕಷ್ಟಕ್ಕೆ ಸರ್ಕಾರ ನೆರವಾಗಿದೆ ಎಂದರು.ಬಡವರಿಗೋಸ್ಕರ ಅಧಿಕಾರಕ್ಕೆ ಬಂದಿ­ರುವ ಮುಖ್ಯಮಂತ್ರಿ ಸಿದ್ದ­ರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಬಡವರಿಗೆ ಮೊದಲ ಆದ್ಯತೆ ನೀಡು­ತ್ತಿದೆ. ಹಾಗಂತ ಶ್ರೀಮಂತರ ವಿರೋಧಿ ಅಲ್ಲ. ರೈತರ, ನೇಕಾರರ ಕೋಟ್ಯಂತರ ರೂಪಾಯಿ ಸಾಲಮನ್ನಾ ಮಾಡಲಾಗಿದೆ. ಪ್ರತಿ ಲೀಟರ್‌ ಹಾಲಿನ ಪ್ರೋತ್ಸಾಹಧನವನ್ನು ₨ 4ಕ್ಕೆ ಹೆಚ್ಚಿಸಲಾಗಿದೆ ಎಂದರು.ತಹಶೀಲ್ದಾರ್‌ ರವೀಂದ್ರ ಕರಲಿಂಗ­ಣ್ಣವರ ಪ್ರಾಸ್ತಾವಿಕವಾಗಿ ಮಾತನಾ­ಡಿದರು. ತಾಲ್ಲೂಕು ಪಂಚಾ­ಯಿ್ತ ಸದಸ್ಯ ಸಂಗಣ್ಣ ಪೂಜಾರಿ, ಪಶು­ವೈದ್ಯ ಡಾ.ಆರ್.ಡಿ. ಕುಲಕರ್ಣಿ, ಗ್ರೇಡ್‌ – 2 ತಹಶೀಲ್ದಾರ್‌ ಢವಳಗಿ ಇದ್ದರು.

ಪ್ರತಿಕ್ರಿಯಿಸಿ (+)