ಗುರುವಾರ , ಮೇ 13, 2021
35 °C
ಆಸೀಸ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಮಿಂಚಿದ ಕಾರ್ತಿಕ್, ಉಮೇಶ್ ಯಾದವ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರ್ಡಿಫ್ (ಪಿಟಿಐ): ದಿನೇಶ್ ಕಾರ್ತಿಕ್ (ಅಜೇಯ 146)  ಸಿಡಿಸಿದ ಭರ್ಜರಿ ಶತಕ ಮತ್ತು ಉಮೇಶ್ ಯಾದವ್ ತೋರಿದ ಸಮರ್ಥ ಬೌಲಿಂಗ್ ನೆರವಿನಿಂದ ಭಾರತ ತಂಡ ಅಭ್ಯಾಸ ಕ್ರಿಕೆಟ್ ಪಂದ್ಯದಲ್ಲಿ ಆಸ್ಟ್ರೆಲಿಯಾ ವಿರುದ್ಧ 243 ರನ್‌ಗಳ ಭಾರಿ ಅಂತರದ ಜಯ ಸಾಧಿಸಿತು.



ಸೋಫಿಯಾ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಮಂಗಳವಾರ ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 308 ರನ್ ಪೇರಿಸಿದರೆ, ಎದುರಾಳಿ ತಂಡ 23.3 ಓವರ್‌ಗಳಲ್ಲಿ ಕೇವಲ 65 ರನ್‌ಗಳಿಗೆ ಆಲೌಟಾಯಿತು. ಉಮೇಶ್ ಯಾದವ್ (18ಕ್ಕೆ5) ಮತ್ತು ಇಶಾಂತ್ ಶರ್ಮ (11ಕ್ಕೆ 3) ಅವರ ಮಾರಕ ಬೌಲಿಂಗ್ ಆಸೀಸ್ ಪತನಕ್ಕೆ ಕಾರಣವಾಯಿತು.



ಟಾಸ್ ಗೆದ್ದ ದೋನಿ ಬ್ಯಾಟಿಂಗ್ ಆಯ್ದುಕೊಂಡರು. ಭಾರತ ತಂಡದ ಆರಂಭ ಆಘಾತಕಾರಿಯಾಗಿತ್ತು. 55 ರನ್ ಗಳಿಸುವಷ್ಟರಲ್ಲಿ 5 ವಿಕೆಟ್‌ಗಳ ಉರುಳಿದ್ದವು. ಆದರೆ ಕಾರ್ತಿಕ್ (ಅಜೇಯ 146, 140 ಎಸೆತ, 17 ಬೌಂ, 1 ಸಿಕ್ಸರ್) ಮತ್ತು ದೋನಿ (91, 77 ಎ, 6 ಬೌಂ, 4 ಸಿ.) ಆರನೇ ವಿಕೆಟ್‌ಗೆ 211 ರನ್ ಸೇರಿಸಿದ ಕಾರಣ ಸವಾಲಿನ ಮೊತ್ತ ಪೇರಿಸಿತು.



ಈ ಗುರಿ ಬೆನ್ನಟ್ಟಿದ ಆಸೀಸ್ ತಂಡದ ಬ್ಯಾಟ್ಸ್‌ಮನ್‌ಗಳು ಪೂರ್ಣ ವೈಫಲ್ಯ ಅನುಭವಿಸಿದರು. ಹ್ಯೂಸ್ (14) ಮತ್ತು ಆ್ಯಡಮ್ ವೋಗ್ಸ್ (23) ಮಾತ್ರ ಎರಡಂಕಿಯ ಮೊತ್ತ ತಲುಪಿದರು. ಉಮೇಶ್ ಅವರ ಮಾರಕ ಬೌಲಿಂಗ್ ದಾಳಿಯ ಮುಂದೆ ಎದುರಾಳಿ ತಂಡದ ದಿಕ್ಕುತಪ್ಪಿತು.



ಸ್ಕೋರ್ ವಿವರ

ಭಾರತ: 50 ಓವರ್‌ಗಳಲ್ಲಿ 6 ವಿಕೆಟ್‌ಗೆ 308

ಮುರಳಿ ವಿಜಯ್ ಎಲ್‌ಬಿಡಬ್ಲ್ಯು ಬಿ ಮಿಷೆಲ್ ಸ್ಟಾರ್ಕ್  01

ಧವನ್ ಸಿ ಮೆಕೇ ಬಿ ಮಿಷೆಲ್ ಜಾನ್ಸನ್  17

ಕೊಹ್ಲಿ ಸಿ ವೇಡ್ ಬಿ ಮಿಷೆಲ್ ಸ್ಟಾರ್ಕ್  09

ರೋಹಿತ್ ಶರ್ಮ ಬಿ ಕ್ಲಿಂಟ್ ಮೆಕೇ  10

ಸುರೇಶ್ ರೈನಾ ಬಿ ಕ್ಲಿಂಟ್ ಮೆಕೇ  00

ದಿನೇಶ್ ಕಾರ್ತಿಕ್ ಔಟಾಗದೆ  146

ದೋನಿ ಸಿ ಜಾನ್ಸನ್ ಬಿ ಫಾಕ್ನರ್  91

ರವೀಂದ್ರ ಜಡೇಜ ಔಟಾಗದೆ  14

ಇತರೆ (ಬೈ-4, ಲೆಗ್‌ಬೈ-2, ವೈಡ್-13, ನೋಬಾಲ್-1) 20



ವಿಕೆಟ್ ಪತನ: 1-4 (ವಿಜಯ್; 2.1), 2-15 (ಕೊಹ್ಲಿ; 4.3), 3-39 (ರೋಹಿತ್; 9.2), 4-39 (ರೈನಾ; 9.6), 5-55 (ಧವನ್; 16.1), 6-266 (ದೋನಿ; 46.3)



ಬೌಲಿಂಗ್: ಮಿಷೆಲ್ ಸ್ಟಾರ್ಕ್ 10-0-73-2, ಕ್ಲಿಂಟ್ ಮೆಕೇ 10-0-39-2, ಮಿಷೆಲ್ ಜಾನ್ಸನ್ 10-0-51-2, ಜೇಮ್ಸ ಫಾಕ್ನರ್ 10-0-68-1, ಶೇನ್ ವಾಟ್ಸನ್ 5-0-23-0, ಮಿಷೆಲ್ ಮಾರ್ಷ್ 5-0-47-0



ಆಸ್ಟ್ರೇಲಿಯಾ: 23.3 ಓವರ್‌ಗಳಲ್ಲಿ 65

ಮ್ಯಾಥ್ಯೂ ವೇಡ್ ಬಿ ಉಮೇಶ್ ಯಾದವ್ 05

ಡೇವಿಡ್ ವಾರ್ನರ್ ಸಿ ಅಶ್ವಿನ್ ಬಿ ಉಮೇಶ್ ಯಾದವ್  00

ಫಿಲ್ ಹ್ಯೂಸ್ ಬಿ ಉಮೇಶ್ ಯಾದವ್  14

ಜಾರ್ಜ್ ಬೈಲಿ ಬಿ ಉಮೇಶ್ ಯಾದವ್  01

ಆ್ಯಡಮ್ ವೋಗ್ಸ್ ಬಿ ಆರ್. ಅಶ್ವಿನ್  23

ಮಿಷೆಲ್ ಮಾರ್ಷ್ ಸಿ ದೋನಿ ಬಿ ಉಮೇಶ್ ಯಾದವ್  00

ಶೇನ್ ವಾಟ್ಸನ್ ಬಿ ಇಶಾಂತ್ ಶರ್ಮ  04

ಜೇಮ್ಸ ಫಾಕ್ನರ್ ಎಲ್‌ಬಿಡಬ್ಲ್ಯು ಬಿ ಇಶಾಂತ್ ಶರ್ಮ  07

ಮಿಷೆಲ್ ಜಾನ್ಸನ್ ಬಿ ಇಶಾಂತ್ ಶರ್ಮ  02

ಮಿಷೆಲ್ ಸ್ಟಾರ್ಕ್ ರನೌಟ್  00

ಕ್ಲಿಂಟ್ ಮೆಕೇ ಔಟಾಗದೆ  04



ಇತರೆ: (ಬೈ-3, ಲೆಗ್‌ಬೈ-1, ವೈಡ್-1)  05

ವಿಕೆಟ್ ಪತನ: 1-6 (ವೇಡ್; 1.2), 2-7 (ವಾರ್ನರ್; 3.4), 3-9 (ಬೈಲಿ; 5.5), 4-28 (ಹ್ಯೂಸ್; 9.3), 5-28 (ಮಾರ್ಷ್; 9.4), 6-34 (ವಾಟ್ಸನ್; 11.4), 7-50 (ಫಾಕ್ನರ್; 17.5), 8-54 (ಜಾನ್ಸನ್; 19.6), 9-60 (ಸ್ಟಾರ್ಕ್; 21.3), 10-65 (ವೋಗ್ಸ್; 23.3)



ಬೌಲಿಂಗ್: ಭುವನೇಶ್ವರ್ ಕುಮಾರ್ 8-1-18-0, ಉಮೇಶ್ ಯಾದವ್ 5-0-18-5, ಇಶಾಂತ್ ಶರ್ಮ 5-0-11-3, ರವೀಂದ್ರ ಜಡೇಜ 4-0-10-0, ಆರ್. ಅಶ್ವಿನ್ 1.3-0-4-1

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.