ಶನಿವಾರ, ಏಪ್ರಿಲ್ 17, 2021
30 °C

ಮಿಂಚಿದ ಕೀಚಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೃತ್ಯಕುಟೀರದ ಕಲಾವಿದರು ಬುಧವಾರ (ಜು.4) ಎ.ಡಿ.ಎ. ರಂಗಮಂದಿರದಲ್ಲಿ ಅಭಿನಯಿಸಿದ ಕೀಚಕ ನೃತ್ಯನಾಟಕ ಪ್ರೇಕ್ಷಕರನ್ನು ಮನಸೂರೆಗೊಳಿಸಿತು.

ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದು, ಪ್ರವೃತ್ತಿಯಲ್ಲಿ ಕಲಾವಿದರಾಗಿರುವ ಎಸ್. ನಾಗಭೂಷಣ್ ಅವರು ಈ ನಾಟಕವನ್ನು ನೃತ್ಯರೂಪಕ್ಕೆ ತಂದಿದ್ದಾರೆ. ಜಿ.ಪಿ. ರಾಜರತ್ನಂ ನಾಟಕ ರಚಿಸಿದ್ದಾರೆ.ನೃತ್ಯನಾಟಕದ ಚೊಚ್ಚಲ ಪ್ರದರ್ಶನ ಇದಾಗಿತ್ತು. ಇಸ್ಮಾಯಿಲ್ ಗೋನಾಳ್ ಅವರ ಸಂಗೀತ ಸಂಯೊಜನೆ ಹಾಗೂ ದೀಪಾಭಟ್ ನಿರ್ದೇಶನದಲ್ಲಿ ನೃತ್ಯಕುಟೀರದ ಕಲಾವಿದರು ಪ್ರದರ್ಶಿಸಿದ ಕೀಚಕ ನೃತ್ಯರೂಪಕ ಅಮೋಘವಾಗಿ ಮೂಡಿಬಂತು.ಪ್ರೇಕ್ಷಕರ ಕರತಾಡನದ ಪ್ರೋತ್ಸಾಹಕ್ಕೆ ಪಾತ್ರವಾಯಿತು. ಕಲಾವಿದರ ಉನ್ನತ ಮಟ್ಟದ ಅಭಿನಯ, ವೇಷಭೂಷಣ, ರಂಗಸಜ್ಜಿಕೆ, ಬೆಳಕು ವಿನ್ಯಾಸ ಹಾಗೂ ಹಿನ್ನೆಲೆಯಲ್ಲಿ ಮೂಡಿಬಂದ ವಿವಿಧ ದೃಶ್ಯಾವಳಿಗಳು ನಾಟಕದ ಯಶಸ್ಸಿಗೆ ಪೂರಕವಾಗಿತ್ತು.ಕೀಚಕ ಪಾತ್ರದಲ್ಲಿ ನಾಗರಾಜ್ ರಾಜ್, ಭೀಮನಾಗಿ ಪವನ್ ಕುಮಾರ್, ಸುದೀಷ್ಣೆಯಾಗಿ ಅರ್ಚನಾ ಶ್ಯಾಮ್, ಸೈರಂದ್ರಿಯಾಗಿ ಭವಾನಿ, ಉತ್ತರೆಯಾಗಿ ಅಂಬಿಕಾ ಜನರನ್ನು ರಂಜಿಸುವಲ್ಲಿ ಯಶಸ್ವಿಯಾದರು.ರಂಗಭೂಮಿ ಹಿರಿಯ ಕಲಾವಿದೆ ಭಾರ್ಗವಿ ನಾರಾಯಣ್ ಹಾಗೂ ಕೂಚಿಪೂಡಿ ನೃತ್ಯಗಾರ್ತಿ ವಿದುಷಿ ವೀಣಾಮೂರ್ತಿ ವಿಜಯ್ ಅತಿಥಿಗಳಾಗಿ ಆಗಮಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.