ಮಿಗ್ -21 ವಿಮಾನ ಪತನ

7

ಮಿಗ್ -21 ವಿಮಾನ ಪತನ

Published:
Updated:

ಜೈಪುರ (ಪಿಟಿಐ): ಭಾರತೀಯ ವಾಯು ಪಡೆಯ ಮಿಗ್-21 ಯುದ್ಧ ವಿಮಾನ ರಾಜಸ್ತಾನದ ಬರ್ಮರ್ ಜಿಲ್ಲೆಯಲ್ಲಿ ಅಪಘಾತಕ್ಕೀಡಾಗಿದ್ದು, ಚಾಲಕ ಅಪಾಯದಿಂದ ಪಾರಾಗಿದ್ದಾನೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.ಮಿಗ್-21 ವಿಮಾನವೂ ನಿತ್ಯದಂತೆ ಹಾರಾಟ ಮುಗಿಸಿ ವಾಯು ನೆಲೆಯಲ್ಲಿ ಇಳಿಯುವ ವೇಳೆ ಪತನಗೊಂಡಿದೆ ಎಂದು ಐಎಎಫ್ ಮೂಲಗಳು ತಿಳಿಸಿವೆ. ಯುದ್ಧ ವಿಮಾನ ಪತನದ ಬಗ್ಗೆ ತನಿಖೆಗೆ ಆದೇಶ ಮಾಡಲಾಗಿದೆ.ಈ ವರ್ಷದಲ್ಲಿ ಆರು ಮಿಗ್-21 ಯುದ್ಧ ವಿಮಾನಗಳು ಅಪಘಾತಕ್ಕೀಡಾಗಿದ್ದು, ಪದೇ ಪದೇ ಪತನವಾಗುತ್ತಿರುವ ಕಾರಣ ಇದರ ಬಳಕೆಯನ್ನು ಹಂತ ಹಂತವಾಗಿ ಕಡಿಮೆ ಮಾಡಲು ನಿರ್ಧರಿಸಲಾಗಿದೆ ಎಂದು ಐಎಎಫ್ ಮೂಲಗಳು ತಿಳಿಸಿವೆ.ಮುಂದಿನ ವರ್ಷದಿಂದ ತರಬೇತಿ ಹೊಂದಿರುವ ಪೈಲಟ್‌ಗಳು ಮಾತ್ರ ಈ ವಿಮಾನವನ್ನು ಚಾಲನೆ ಮಾಡಲಿದ್ದಾರೆ ಎಂದು ರಕ್ಷಣಾ ಇಲಾಖೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಸ್.ಡಿ. ಗೋಸ್ವಾಮಿ ಹೇಳಿದ್ದಾರೆ. ಈಗ ಭಾರತದ ವಾಯು ಪಡೆಯಲ್ಲಿ 976 ಮಿಗ್-21 ವಿಮಾನಗಳು ಇದ್ದು, 1960ರಿಂದ ಸೇವೆ ಸಲ್ಲಿಸುತ್ತಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry