ಗುರುವಾರ , ಮೇ 6, 2021
23 °C
ಪ್ರಜಾವಾಣಿ ಫಲಶ್ರುತಿ

ಮಿನಿ ವಿಧಾನಸೌಧ ಪ್ರಾಂಗಣ: ಶೆಡ್ ನಿರ್ಮಾಣ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಮನಾಬಾದ್: ಇಲ್ಲಿನ ಮಿನಿ ವಿಧಾನಸೌಧ ಪ್ರಾಂಗಣದಲ್ಲಿ ವಿವಿಧ ಸೌಕರ್ಯ ಕೊರತೆ ಕುರಿತಂತೆ ಸೋಮವಾರ `ಪ್ರಜಾವಾಣಿ' ಪತ್ರಿಕೆಯಲ್ಲಿ ಪ್ರಕಟಗೊಂಡ ವಿಶೇಷ ವರದಿಯಿಂದ ಎಚ್ಚೆತ್ತುಕೊಂಡ ತಾಲ್ಲೂಕು ಆಡಳಿತ ಪಹಣಿ ವಿತರಣಾ ಕೇಂದ್ರಕ್ಕೆ ಹೊಂದಿಕೊಂಡಂತೆ ಶೆಡ್ ನಿರ್ಮಾಣ ಕಾರ್ಯ ಸೋಮವಾರ ಸಂಜೆ ಭರದಿಂದ ಸಾಗಿತ್ತು.ಹುಮನಾಬಾದ್ ತಾಲ್ಲೂಕು ಕೇಂದ್ರ ಮಿನಿವಿಧಾನಸೌಧ ಕಟ್ಟಡ ನಿರ್ಮಾಣಗೊಂಡು ಹಲವು ವರ್ಷ ಗತಿಸಿದರೂ ಪಹಣಿ ವಿತರಣಾ ಕೇಂದ್ರಕ್ಕೆ ಹೊಂದಿಕೊಂಡು ನೆರಳು ಹಾಗೂ ಮಳೆಯಿಂದ ಬಚಾವ್ ಆಗಲು ಶೆಡ್ ನಿರ್ಮಾಣ, ಕುಳಿತುಕೊಳ್ಳುವುದಕ್ಕೆ ಆಸನ, ಕುಡಿಯುವ ನೀರಿನ ಸೌಲಭ್ಯ  ಇಲ್ಲದಿರುವುದು ಹಾಗೂ ಇದ್ದೂ ಇಲ್ಲದಂತಿರುವ ಸಾಮೂಹಿಕ ಶೌಚಾಲಯ ಕುರಿತು ಪ್ರಕಟಗೊಂಡ ವರದಿಯಿಂದ ಎಚ್ಚೆತ್ತುಕೊಂಡ ತಾಲ್ಲೂಕು ಆಡಳಿತ ಮೊದಲ ಹಂತದಲ್ಲಿ ಪಹಣಿ ಕೇಂದ್ರ ಪಕ್ಕ ಶೆಡ್ ನಿರ್ಮಾಣ ಕಾರ್ಯ ಆರಂಭಿಸಿದ್ದು ಕಂಡು ಬಂದಿತು.ತಾಲ್ಲೂಕು ಆಡಳಿತ ಕ್ರಮದ ಕುರಿತು ಪಹಣಿ ಪಡೆಯಲು ಬಂದ ವಿದ್ಯಾಸಾಗರ, ನರಸಪ್ಪ, ಶಿವಪುತ್ರಪ್ಪ, ಶಾಮರಾವ ಸಂತಸ ವ್ಯಕ್ತಪಡಿಸಿದ್ದಾರೆ.ಜಿಲ್ಲಾಧಿಕಾರಿ ಅವರಿಂದ ಅಗತ್ಯ ನೆರವು ಪಡೆದು ಇನ್ನುಳಿದ ಸೌಲಭ್ಯಗಳನ್ನು ಸಾಧ್ಯವಾದಷ್ಟು ಶೀಘ್ರ ಆರಂಭಿಸಿ, ಜನತೆಗೆ  ಉತ್ತಮ ಸೇವೆ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಹಸೀಲ್ದಾರ ಬಾಲರಾಜ ದೇವರಖಾದ್ರ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.