ಗುರುವಾರ , ಏಪ್ರಿಲ್ 22, 2021
29 °C

ಮೀನುಗಾರಿಕೆ ಇಲಾಖೆ ಕಟ್ಟಡಕ್ಕೆ ಬೆಂಕಿ: ಕಡತ ಭಸ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಕಂಪ್ಯೂಟರ್ ಕೊಠಡಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಕಡತಗಳು ಸಂಪೂರ್ಣ ಸುಟ್ಟು ಭಸ್ಮವಾಗಿ ಅಂದಾಜು ನಾಲ್ಕು ಲಕ್ಷ ರೂಪಾಯಿ ಹಾನಿ ಆಗಿರುವ ಘಟನೆ ನಗರದ ಬೈತಖೋಲ ಅಲಿಗದ್ದಾದಲ್ಲಿರುವ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕರ ಕಚೇರಿಯಲ್ಲಿ ಶನಿವಾರ ಬೆಳಗಿನ ಜಾವ 4ಗಂಟೆ ಸುಮಾರಿಗೆ ನಡೆದಿದೆ.ಕಂಪ್ಯೂಟರ್ ಕೊಠಡಿಯ ಪಕ್ಕದಲ್ಲೇ ಇದ್ದ ಸ್ಟೋರ್‌ರೂಮ್‌ಗೆ ಕ್ಷಣದಲ್ಲೇ ಬೆಂಕಿ ವ್ಯಾಪ್ತಿಸಿಕೊಂಡಿದ್ದರಿಂದ ಅವಶ್ಯಕ ಕಡತಗಳು ಬೆಂಕಿಗೆ ಆಹುತಿಯಾಗಿವೆ. ಘಟನೆಯಲ್ಲಿ ಒಟ್ಟು ಏಳು ಕಪಾಟು, ನಾಲ್ಕು ಕಂಪ್ಯೂಟರ್ ಮತ್ತು ಯುಪಿಎಸ್, ಝರಾಕ್ಸ್ ಯಂತ್ರ, ಫ್ಯಾಕ್ಸ್, ಪ್ರಿಂಟರ್ ಮತ್ತು ಎಸಿ ಸುಟ್ಟು ಕರಕಲಾಗಿವೆ. ಬೆಂಕಿಯ ಕೆನ್ನಾಲಗೆಗೆ ಕಚೇರಿಯ ಮೇಲ್ಛಾವಣಿ ಭಾಗಶಃ ಸುಟ್ಟುಹೋಗಿದೆ. ಮೀನುಗಾರಿಕೆ ದೋಣಿಗಳ ನೊಂದಣಿ ಅರ್ಜಿ, ಡಿಸೇಲ್ ಸಬ್ಸಿಡಿಗೆ ಸಂಬಂಧಿಸಿದ ಪಾಸ್‌ಬುಕ್, ಮತ್ಸ್ಯಆಶ್ರಯ ಯೋಜನೆಗಳ ಮಾಹಿತಿ, ಮೀನು ಹಿಡುವಳಿಯ ವಿವರಗಳು ಹೀಗೆ ಮೀನುಗಾರಿಕೆ ಸಂಬಂಧಿಸಿದ ಎಲ್ಲ ಕಡತಗಳು ಸುಟ್ಟು ಹೋಗಿವೆ.ಮೊದಲು ಕಡತಗಳಿಗೆ ಹತ್ತಿಕೊಂಡ ಬೆಂಕಿ ಕ್ರಮೇಣ ಮೇಲ್ಛಾವಣಿಯ ಜಂತಿಗಳಿಗೆ ವ್ಯಾಪ್ತಿಸಿ ದೊಡ್ಡ ಬೆಂಕಿ ಹೊರಗೆ ಕಾಣಿಸಿಕೊಂಡಿದೆ. ಬೆಂಕಿ ನೋಡಿದ ವ್ಯಕ್ತಿಯೊಬ್ಬರು ತಕ್ಷಣವೇ ನಗರಠಾಣೆಗೆ ಸುದ್ದಿ ಮುಟ್ಟಿಸಿದ್ದಾರೆ.ನಗರಠಾಣೆಯವರ ವಿಷಯನ್ನು ಅಗ್ನಿಶಾಮಕ ದಳಕ್ಕೆ ತಿಳಿಸಿದ್ದಾರೆ. ಸಕಾಲಕ್ಕೆ ಬಂದ ಅಗ್ನಿಶಾಮಕ ದಳ ಒಂದು ಗಂಟೆಗಳ ಪ್ರಯತ್ನದ ನಂತರ ಬೆಂಕಿಯನ್ನು ಆರಿಸಿದರು. ಸಂಪೂರ್ಣ ಬೆಂಕಿ ನಂದಿಸಲು ಎರಡು ಅಗ್ನಿಶಾಮಕ ವಾಹನ ಬಳಸಲಾಯಿತು.ಮೀನುಗಾರಿಕೆ ಇಲಾಖೆಯ ಕಟ್ಟಡ ಮೊದಲನೆ ಮಹಡಿಯಲ್ಲಿದೆ. ನೆಲಮಹಡಿಯಲ್ಲಿ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ಕಚೇರಿ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ. ಅಗ್ನಿಶಾಮಕ ದಳ ಸಮಯಕ್ಕೆ ಸರಿಯಾಗಿ ಬರದೇ ಇದ್ದರೆ ಬೆಂಕಿ ಆ ಎರಡೂ ಕಟ್ಟಡಗಳಿಗೂ ವ್ಯಾಪ್ತಿಸುವ ಸಾಧ್ಯತೆ ಇತ್ತು.ಸ್ಥಳಕ್ಕೆ ಸಿಪಿಐ ಎನ್.ಆರ್.ಮುಕ್ರಿ, ಪಿಎಸ್‌ಐ ನಿಶ್ಚಲಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಗ್ನಿಶಾಮಕದಳದ ನಿರೀಕ್ಷಕ ವಿನಾಯಕ ಹಟ್ಟೆಕರ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.