ಸೋಮವಾರ, ಜೂನ್ 14, 2021
26 °C

ಮೀರಾ ಆಸ್ತಿ ಮೂರೂವರೆ ಪಟ್ಟು ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಟ್ನಾ (ಪಿಟಿಐ): ಬಿಹಾರದ ಸಸಾರಾಂ ಮೀಸಲು ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿರುವ ಲೋಕಸಭೆ ಸ್ಪೀಕರ್‌ ಮೀರಾ ಕುಮಾರ್‌ ಅವರಲ್ಲಿ ಐದು ವರ್ಷಗಳ ಹಿಂದೆ ಇದ್ದಷ್ಟೆ ಚಿನ್ನಾಭರಣ ಈಗಲೂ ಇದೆ. ಆದರೆ,  ಅವರ ಆಸ್ತಿ ಮೌಲ್ಯ ಮಾತ್ರ ಈಗ ಹೆಚ್ಚಾಗಿದೆ. 2009ರಲ್ಲಿ ಅವರ ಆಸ್ತಿ ₨ 10 ಕೋಟಿ ಇತ್ತು. ಆದರೆ, ಅದು ಈಗ ₨36.49 ಕೋಟಿಗೆ ಏರಿಕೆಯಾಗಿದೆ.



₨3.11 ಲಕ್ಷ ಬೆಲೆಬಾಳುವ ಎರಡು ಚಿನ್ನದ ಬಳೆ, ಒಂದು ಜೋಡಿ ವಜ್ರದ ಟಾಪ್‌, ಒಂದೊಂದು ಬಂಗಾರ,   ಬೆಳ್ಳಿ ಮತ್ತು  ನವರತ್ನ ಖಚಿತ ಉಂಗುರಗಳಿವೆ  ಎಂದು ಪ್ರಮಾಣ ಪತ್ರದಲ್ಲಿ ಘೋಷಿಸಿಕೊಂಡಿದ್ದಾರೆ.



ಮೀರಾಕುಮಾರ್‌ ಅವರು 2013–14ನೇ ಸಾಲಿನಲ್ಲಿ ಸಲ್ಲಿಸಿರುವ ಆದಾಯ ತೆರಿಗೆಯಲ್ಲಿ ₨56.4 ಲಕ್ಷ ವಾರ್ಷಿಕ ಆದಾಯ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.  ಪಟ್ನಾ ಮತ್ತು ದೆಹಲಿಯಲ್ಲಿ ₨34.92 ಕೋಟಿ ಮೌಲ್ಯದ ನಿವೇಶನ, ಮನೆ ಮತ್ತು ವಸತಿ ಸಮುಚ್ಚಯ ಹೊಂದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.