ಶನಿವಾರ, ಮೇ 8, 2021
26 °C

ಮುಂಗಾರಿನ ಸಿಂಗಾರಿ...

ಗಣಪತಿ ಹಾಸ್ಪುರ Updated:

ಅಕ್ಷರ ಗಾತ್ರ : | |

ಪ್ರಕೃತಿಯಲ್ಲಿ ವೈವಿಧ್ಯಮಯ  ಹೂವುಗಳಿವೆ. ಅವುಗಳಲ್ಲಿ ಮುಂಗಾರಿನ ಸಿಂಗಾರಿ ಎಂದು ಕರೆಯುವ ಸೀತೆದಂಡೆ ಪುಷ್ಪವೂಒಂದು. ಸಾಮಾನ್ಯವಾಗಿ ಈ ಸೀತೆದಂಡೆ  ಮಳೆಗಾಲದ ಆರಂಭದ ದಿನಗಳಲ್ಲಿ ಅರಳಿ ಕಂಗೊಳಿಸುತ್ತದೆ.ಆರ್ಕಿಡ್ ಪ್ರಬೇಧಕ್ಕೆ ಸೇರಿದೆ ಎನ್ನಲಾದ ಈ ವಿಶಿಷ್ಟ ಹೂ ಸುಮಾರು 8-10 ದಿನಗಳವರೆಗೆ ನೈಜರೂಪದಿಂದ ಶೋಭಿಸುತ್ತಾ ಇರುವುದೇ ಸೀತೆದಂಡೆ ಹೂವಿನ ವಿಶೇಷ.ಇಲ್ಲಿನ ಚಿತ್ರದಲ್ಲಿ ಕಾಣುವ ಮುಂಗಾರಿನ ಸಿಂಗಾರಿಯು ಯಲ್ಲಾಪುರ ತಾಲ್ಲೂಕಿನ ಚವತ್ತಿ-ಹೊಸ್ಮನೆಯ ನಿವೃತ್ತ ಮುಖ್ಯಶಿಕ್ಷಕ ವಿ.ಜಿ.ಭಟ್ಟರ ಮನೆ ಅಂಗಳದಲ್ಲಿರುವ ಚಿಕ್ಕು ಗಿಡದಲ್ಲಿ ಅರಳಿ ಶೋಭಿಸುತ್ತಿದೆ. ಅಲ್ಲಿ ಸುಮಾರು 14 ಸೀತೆದಂಡೆ ಹೂಗಳು ಒಮ್ಮೆಲೆಯೇ ಅರಳಿ ಎಲ್ಲರನ್ನು ಆಕರ್ಷಿಸಿತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.