ಗುರುವಾರ , ಮೇ 13, 2021
35 °C

`ಮುಂಗಾರು ಆಧರಿಸಿ ಹಣಕಾಸು ನೀತಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್(ಪಿಟಿಐ): ಹಣದುಬ್ಬರ ಮತ್ತು ಮುಂಗಾರು ಮುನ್ನೋಟ ಆಧರಿಸಿಯೇ ಈ ಬಾರಿಯ ತ್ರೈಮಾಸಿಕ ಹಣಕಾಸು ನೀತಿ ನಿರ್ಧಾರವಾಗಲಿದೆ ಎಂದು `ಭಾರತೀಯ ರಿಸರ್ವ್ ಬ್ಯಾಂಕ್'(ಆರ್‌ಬಿಐ) ಗವರ್ನರ್ ಡಿ.ಸುಬ್ಬರಾವ್  ಹೇಳಿದ್ದಾರೆ.ಜೂನ್ 17ರಂದು ಮೊದಲ ಹಂತದ ಮಧ್ಯಂತರ ತ್ರೈಮಾಸಿಕ ಹಣಕಾಸು ನೀತಿ  ಪ್ರಕಟಗೊಳ್ಳಲಿದೆ. ದೇಶದ ಕೋಟ್ಯಂತರ ರೈತರು ಮುಂಗಾರಿಗೆ ಕಾಯುತ್ತಿರುವಂತೆ `ಆರ್‌ಬಿಐ' ಕೂಡ ಉತ್ತಮ ಮುಂಗಾರು ನಿರೀಕ್ಷಿಸಿದೆ. ಹಣಕಾಸು ನೀತಿ ನಿರ್ಧರಿಸುವಲ್ಲಿ ಮುಂಗಾರು ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಅವರು ಶುಕ್ರವಾರ ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದರು.ಭಾರತೀಯ ಹವಾಮಾನ ಇಲಾಖೆ ಪ್ರಸಕ್ತ ವರ್ಷ ಸಾಮಾನ್ಯ ಮುಂಗಾರು ಇರಲಿದೆ ಎಂದು ಅಂದಾಜು ಮಾಡಿದೆ.`ಸಗಟು ಬೆಲೆ ಸೂಚ್ಯಂಕ'(ಡಬ್ಲ್ಯಪಿಐ) ಆಧರಿಸಿದ ಹಣದುಬ್ಬರ ಮೂರು ವರ್ಷಗಳ ಹಿಂದಿನ ಮಟ್ಟವಾದ ಶೇ 4.89ಕ್ಕೆ ಇಳಿಕೆ ಕಂಡಿದೆ. ಆದರೆ, ಆಹಾರ ಹಣದುಬ್ಬರ ಏಪ್ರಿಲ್‌ನಲ್ಲಿ ಶೇ 6.08ಕ್ಕೆ ಏರಿಕೆ ಕಂಡಿದೆ. `ಗ್ರಾಹಕ ಬೆಲೆ ಸೂಚ್ಯಂಕ'(ಸಿಪಿಐ) ಆಧರಿಸಿದ ಚಿಲ್ಲರೆ ಹಣದುಬ್ಬರ ದರ ಶೇ 9.39ಕ್ಕೆ ಏರಿದೆ. ಮುಂಬರುವ ತಿಂಗಳುಗಳಲ್ಲಿ ಹಣದುಬ್ಬರ ತಗ್ಗಲಿದೆ ಎಂದು ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಅವರೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.