ಭಾನುವಾರ, ಮೇ 22, 2022
21 °C

ಮುಂಡಗೋಡ: ಬರಗಾಲ ಪೀಡಿತ ಪ್ರದೇಶ ಘೋಷಣೆಗೆ ರೈತರ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಡಗೋಡ:  ತಾಲ್ಲೂಕನ್ನು `ಪ್ರಕೃತಿ ವಿಕೋಪ ಪೀಡಿತ ಪ್ರದೇಶ~ ಎಂದು ಘೋಷಣೆ ಮಾಡಿ ನೊಂದ ರೈತರಿಗೆ ನೆರವು ನೀಡಬೇಕು ಎಂದು ಆಗ್ರಹಿಸಿ ರೈತ ಸಂಘ, ಹಸಿರು ಸೇನೆ ಕಾರ್ಯಕರ್ತರು ಸೋಮವಾರ ಮೆರವಣಿಗೆ ನಡೆಸಿ ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಬಿತ್ತನೆ ಸಂದರ್ಭದಲ್ಲಿ ಬಿದ್ದ ವಿಪರೀತ ಮಳೆಯಿಂದ ಬಿತ್ತನೆಗೆ ಹಿನ್ನಡೆಯಾಗಿ ತೀವ್ರ ಸಂಕಷ್ಟ ಎದುರಿಸು ತ್ತಿದ್ದರೂ ಜನಪ್ರತಿನಿಧಿಗಳು ರೈತರ ಸಮಸ್ಯೆಗೆ ಸ್ಪಂದಿಸಿಲ್ಲ, ಇದು ಖಂ ನೀಯ, ತಾಲ್ಲೂಕನ್ನು ಈ ಕೂಡಲೇ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು. ಪ್ರಸಕ್ತ ಮಳೆಗಾಲ ರೈತರ ಬದುಕಿನ ಮೇಲೆ ಬರೆ ಎಳೆದಿದೆ, ಅಲ್ಲಲ್ಲಿ ಅಲ್ಪಸ್ವಲ್ಪ ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಅವಶ್ಯವಿರುವ ಸಮಯದಲ್ಲಿ ಮಳೆ ಕೈಕೊಟ್ಟು ರೈತ ಸಮುದಾಯ ವನ್ನು ಅಂಧಕಾರಕ್ಕೆ ದೂಡಿದೆ.ರೈತರ ಸಮಸ್ಯೆಗೆ ಸ್ಪಂದಿಸಬೇಕಾದ ಜನಪ್ರತಿ ನಿಧಿಗಳು ಮೌನಕ್ಕೆ ಶರಣಾಗಿದ್ದಾರೆ. ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ತಾಲ್ಲೂಕನ್ನು ಪ್ರಕೃತಿ ವಿಕೋಪ ಪೀಡಿತ ಪ್ರದೇಶವೆಂದು ಘೋಷಿಸಿ ಎಕರೆಗೆ ಕನಿಷ್ಟ 25ಸಾವಿರ ಪರಿಹಾರ ನೀಡಬೇಕು.ಕಳೆದ ವರ್ಷದ ಬೆಳೆ ವಿಮೆ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ಕಷ್ಟದಲ್ಲಿರುವ ಕೃಷಿ ಕಾರ್ಮಿಕರ ಕೈಗಳಿಗೆ ಕೆಲಸ ನೀಡಿ ರೈತರು ಗುಳೆ ಹೋಗುವದನ್ನು ತಪ್ಪಿಸಬೇಕು. ಪ್ರಕೃತಿ ವಿಕೋಪ ಪರಿಹಾರದಡಿ ಅನುಷ್ಠಾನಗೊಳ್ಳುವ ಕಾಮಗಾರಿಗಳ ಉಸ್ತುವಾರಿಯನ್ನು ರೈತ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿ ರಚಿಸಿ ಮೇಲ್ವಿಚಾರಣೆ ನಡೆಸುವ ವ್ಯವಸ್ಥೆಯಾಗಬೇಕು ಎಂದು ಕೋರಿದರು.ಸಂಘದ ತಾಲ್ಲೂಕಾಧ್ಯಕ್ಷ ಶಂಭಣ್ಣ ಕೋಳೂರ, ಸಂಚಾಲಕ ಚಿದಾನಂದ ಹರಿಜನ, ಉಪಾಧ್ಯಕ್ಷ ಮುಕ್ತುಂಸಾಬ ತರ್ಲಗಟ್ಟಿ, ರಾಮಚಂದ್ರ ಬೆಳವತ್ತಿ, ಎಸ್.ಪಿ.ಬಾಳಮ್ಮನವರ, ಲೋಹಿತ್ ಮಟ್ಟಿಮನಿ, ನೂರಹ್ಮದ ಗರಗ, ಮರ್ದಾನ ಹಂಚಿನಮನಿ, ಭೋಜಪ್ಪ ಚಂದಾಪುರಇತರರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.