ಮುಂದಿನ ಕಾರ್ಯತಂತ್ರ: ಶನಿವಾರ ಅಣ್ಣಾ ತಂಡದ ಸಭೆ

ಸೋಮವಾರ, ಮೇ 20, 2019
29 °C

ಮುಂದಿನ ಕಾರ್ಯತಂತ್ರ: ಶನಿವಾರ ಅಣ್ಣಾ ತಂಡದ ಸಭೆ

Published:
Updated:

 ಮುಂಬೈ (ಪಿಟಿಐ): ಟೀಮ್ ಅಣ್ಣಾ ತಂಡದ ಪ್ರಮುಖ ಸದಸ್ಯರ ಎರಡು ದಿನಗಳ ಸಭೆ ಶನಿವಾರ ಅವರ ಗ್ರಾಮ ರಾಳೇಗಣ ಸಿದ್ಧಿಯಲ್ಲಿ ಆರಂಭವಾಗಲಿದೆ.~ಅರವಿಂದ ಕೇಜ್ರಿವಾಲ್ ಅವರು ಈದಿನ ಮಧ್ಯಾಹ್ನ ಗ್ರಾಮಕ್ಕೆ ಆಗಮಿಸಿದ್ದು, ಕಿರಣ್ ಬೇಡಿ ಮತ್ತು ಪ್ರಶಾಂತ ಭೂಷಣ್ ಅವರು ಶನಿವಾರ ಬೆಳಗಿನ ವೇಳೆಗೆ ತಲುಪಲಿದ್ದಾರೆ~ ಎಂದು ಹಜಾರೆ ನಿಕಟವರ್ತಿ ದತ್ತ ಅವರಿ ಪಿಟಿಐಗೆ ರಾಳೇಗಣ ಸಿದ್ಧಿಯಿಂದ ದೂರವಾಣಿ ಮೂಲಕ ತಿಳಿಸಿದರು.ತಮ್ಮ ತಂಡದ ಸದಸ್ಯರನ್ನು ಗುರಿಯಾಗಿರಿಸಿಕೊಂಡ ಸರ್ಕಾರ ನಡೆಸುತ್ತಿರುವ ದಾಳಿಗಳ ಬಗ್ಗೆ ಹಜಾರೆ ಅವರು ತಮ್ಮ ಅಸಮಾಧಾನವನ್ನು ಹೊರಗೆಡಹಿದ ಹಿನ್ನೆಲೆಯಲ್ಲಿ ಈ ಸಭೆ ನಡೆಯುತ್ತಿದೆ.ಬೇಡಿ, ಭೂಷಣ್ ಮತ್ತು ಕೇಜ್ರಿವಾಲ್ ಅವರಿಗೆ ಹಕ್ಕುಚ್ಯುತಿ ನೋಟಿಸ್ ನೀಡಲಾಗಿದ್ದರೆ, ಕೇಜ್ರಿವಾಲ್ ಅವರಿಗೆ ಆದಾಯ ತೆರಿಗೆ ಇಲಾಖೆಯಿಂದಲೂ ನೋಟಿಸ್ ಜಾರಿ ಮಾಡಲಾಗಿದೆ.ಕೇಂದ್ರ ಸರ್ಕಾರದಿಂದ ನೀಡಲಾಗಿರುವ ನೋಟಿಸ್ ಸೇರಿದಂತೆ ಪ್ರಸ್ತುತ ವಿಷಯಗಳ

ಬಗ್ಗೆ ಚರ್ಚಿಸಿ, ಮುಂದಿನ ಕಾರ್ಯತಂತ್ರದ ಬಗ್ಗೆ ನಿರ್ಧರಿಸಲಿದೆ ಎಂದು ನಿರೀಕ್ಷಿಸಲಾಗಿದೆ.ಸೆಪ್ಟೆಂಬರ್ 2ರಂದು ರಾಳೇಗಣ ಸಿದ್ಧಿಯಲ್ಲಿ ಗ್ರಾಮಸಭೆಯಲ್ಲಿ ಮಾತನಾಡುತ್ತಾ ಕೇಂದ್ರದ ಯುಪಿಎ ಸರ್ಕಾರದ ಮೇಲೆ ಹರಿಹಾಯ್ದಿದ್ದ ಅಣ್ಣಾ ಹಜಾರೆ, ಸರ್ಕಾರದ ಅರ್ಧದಷ್ಟು ಮಂದಿ ~ಸುಳ್ಳುಗಾರರು~ ಎಂದು ಟೀಕಿಸಿದ್ದರು.ಕೇಂದ್ರ ಸಚಿವ ಚಿದಂಬರಂ ಅವರನ್ನು ~ಕಿಡಿಗೇಡಿ~ ಎಂದು ಬಣ್ಣಿಸಿದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry