ಗುರುವಾರ , ಮೇ 6, 2021
23 °C

ಮುಂದಿನ ವರ್ಷ ಗುರುಭವನ ನಿರ್ಮಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಳಬಾಗಲು: `2012ರ ಶಿಕ್ಷಕರ ದಿನಾಚರಣೆ ವೇಳೆಗೆ ಶಿಕ್ಷಕರ ಗುರುಭವನ ನಿರ್ಮಾಣ ಮಾಡುವುದಾಗಿ~  ಶಾಸಕ ಅಮರೇಶ್ ಭರವಸೆ ನೀಡಿದರು. ಪಟ್ಟಣದಲ್ಲಿ ಸೋಮವಾರ ನಡೆದ ಶಿಕ್ಷಕರ  ದಿನಾಚರಣೆಯಲ್ಲಿ ಮಾತನಾಡಿದರು.`ಶಿಕ್ಷಕರ ಸೇವೆಗೆ ಬೆಲೆ ಕಟ್ಟಲಾಗುವುದಿಲ್ಲ. ಅಂತಹ ಸೇವೆ ನಮ್ಮನ್ನು ಉನ್ನತ ಸ್ಥಿತಿಗೆ ತರುತ್ತದೆ~ ಎಂದು ಹೇಳಿದರು. ನಿವೃತ್ತರಾದ ಶಾಲಾ ಶಿಕ್ಷಕರನ್ನು ಇದೇ ವೇಳೆ ಸನ್ಮಾನಿಸಲಾಯಿತು. ತಾಲ್ಲೂಕು ಪ್ರಾಥಮಿಕ ಶಿಕ್ಷಕರ ಸಂಘದ ವತಿಯಿಂದ ಮನವಿ ಸ್ವೀಕರಿಸಿದರು.ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ  ಸರಸಮ್ಮ, ಉಪಾಧ್ಯಕ್ಷ   ಎಂ.ಎಸ್.ಶ್ರೀನಿವಾಸರೆಡ್ಡಿ, ಮಾಜಿ ಉಪಾಧ್ಯಕ್ಷ ಎನ್.ವೆಂಕಟೇಶಗೌಡ, ತಾಲ್ಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಜಗನ್ನಾಥ್ ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ತಾಲ್ಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಜಗದೀಶ್, ಖಜಾಂಚಿ ರಾಜಕುಮಾರ್, ಕಾರ್ಗಿಲ್ ವೆಂಕಟೇಶ್, ಅಮರನಾಥ್ ಕ್ಷೇತ್ರಶಿಕ್ಷಣಾಧಿಕಾರಿ ವಿಕ್ಟರ್  ಇದ್ದರು.ಚಾಂದ್‌ಪಾಷ ನಿರೂಪಿಸಿದರು. ಇದೇ ವೇಳೆ ಸರ್ವಪಲ್ಲಿ ರಾಧಾಕಷ್ಣನ್ ಅವರ ಭಾವಚಿತ್ರದ ಮೆರವಣಿಗೆ ನಡೆಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.