ಶುಕ್ರವಾರ, ಮೇ 14, 2021
21 °C

ಮುಂಬೈಗೆ ರೋಚಕ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ಯಾರ್ಕರ್ ಎಸೆತಗಳ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳ ನಿದ್ದೆಗೆಡಿಸುವ ಲಸಿತ್ ಮಾಲಿಂಗ ಶನಿವಾರ ಬ್ಯಾಟ್ ಮೂಲಕ ಮಿಂಚಿದರು. ಮಾತ್ರವಲ್ಲ ಮುಂಬೈ ಇಂಡಿಯನ್ಸ್ ತಂಡದ ರೋಚಕ ಗೆಲುವಿಗೆ ಕಾರಣರಾದರು.ಮಾಲಿಂಗ (ಅಜೇಯ 37, 18 ಎಸೆತ, 3 ಬೌಂ, 3 ಸಿಕ್ಸರ್) ಭರ್ಜರಿ ಆಟವಾಡಿದ ಕಾರಣ ಮುಂಬೈ ತಂಡ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮೂರು ವಿಕೆಟ್‌ಗಳ ಜಯ ಸಾಧಿಸಿತು.ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಡ್ ಮಾಡಿದ ಚೆನ್ನೈ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು. ಮುಂಬೈ 19.5 ಓವರ್‌ಗಳಲ್ಲಿ 7 ವಿಕೆಟ್‌ಗೆ 159 ರನ್ ಗಳಿಸಿ ಗೆಲುವು ತನ್ನದಾಗಿಸಿಕೊಂಡಿತು.ಮುಂಬೈ ಒಂದು ಹಂತದಲ್ಲಿ 12 ಓವರ್‌ಗಳಲ್ಲಿ ಆರು ವಿಕೆಟ್‌ಗೆ 85 ರನ್ ಗಳಿಸಿ ಸೋಲಿನ ಸುಳಿಯಲ್ಲಿತ್ತು. ಆದರೆ ಮಾಲಿಂಗ ಮತ್ತು ಹರಭಜನ್ ಸಿಂಗ್ (ಔಟಾಗದೆ 19) ತಂಡಕ್ಕೆ ಅದ್ಭುತ ಗೆಲುವು ತಂದುಕೊಟ್ಟರು. ಇವರಿಬ್ಬರು ಮುರಿಯದ ಎಂಟನೇ ವಿಕೆಟ್‌ಗೆ 4.3 ಓವರ್‌ಗಳಲ್ಲಿ 53 ರನ್‌ಗಳ ಜೊತೆಯಾಟ ನೀಡಿದರು.ಮುಂಬೈ ಗೆಲುವಿಗೆ ಅಂತಿಮ ಓವರ್‌ನಲ್ಲಿ 11 ರನ್‌ಗಳ ಅವಶ್ಯಕತೆಯಿತ್ತು. ಡಗ್ ಬೋಲಿಂಜರ್ ಎಸೆದ ಈ ಓವರ್‌ನಲ್ಲಿ ಮಾಲಿಂಗ ಮತ್ತು ಹರಭಜನ್ ತಲಾ ಒಂದು ಬೌಂಡರಿ ಗಳಿಸಿ ಚೆನ್ನೈ ತಂಡದ ಗೆಲುವಿನ ಕನಸನ್ನು ನುಚ್ಚುನೂರುಗೊಳಿಸಿದರು.ಇದನ್ನೂ ಮುನ್ನ ಟಾಸ್ ಗೆದ್ದ ಕಳೆದ ಬಾರಿಯ ಚಾಂಪಿಯನ್ ದೋನಿ ಪಡೆ ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಸೊಗಸಾದ ಆಟದ ಮೂಲಕ ಇನಿಂಗ್ಸ್ ಕಟ್ಟಿದ ಹಸ್ಸಿ ಕೇವಲ 57 ಎಸೆತಗಳಲ್ಲಿ 81 ರನ್ ಗಳಿಸಿದರು. ಇದರಲ್ಲಿ 8 ಬೌಂಡರಿ ಹಾಗೂ 3 ಸಿಕ್ಸರ್ ಸೇರಿವೆ. ಆರಂಭದಿಂದಲೇ ಮನ ಬಂದಂತೆ ಬ್ಯಾಟ್ ಬೀಸಿದ ಈ ಆಟಗಾರ ಕೊನೆಯ 14 ಎಸೆತಗಳಲ್ಲಿ 31 ರನ್ ಕಲೆ ಹಾಕಿ ಚೆನ್ನೈನ ಮೊತ್ತ 150ರ ಗಡಿ ದಾಟುವಂತೆ ಮಾಡಿದರು.

ಸುರೇಶ್ ರೈನಾ (18) ಮತ್ತು ಬದರೀನಾಥ್ (16) ಅವರು ಹಸ್ಸಿಗೆ ಬೆಂಬಲ ನೀಡಿದರು. ದೋನಿ (22) ಉತ್ತಮ ಆಟವಾಡಿದರು.ಸ್ಕೋರ್ ವಿವರ


ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ  4 ವಿಕೆಟ್‌ಗೆ 158

ಮೈಕ್ ಹಸ್ಸಿ ಸಿ ಬ್ಲಿಜರ್ಡ್ ಬಿ ಅಹ್ಮದ್   81

ಮುರಳಿ ವಿಜಯ್ ಬಿ ಮಾಲಿಂಗ  08

ಸುರೇಶ್ ರೈನಾ ಸ್ಟಂಪ್ಡ್ ಡೇವಿ ಜೇಕಬ್ಸ್ ಬಿ ಪೊಲಾರ್ಡ್  18

ಎಸ್. ಬದರೀನಾಥ್ ಸಿ ಸತೀಶ್ ಬಿ. ಅಹ್ಮದ್  16

ಮಹೇಂದ್ರ ಸಿಂಗ್ ದೋನಿ ಔಟಾಗದೆ  22

ಅಲ್ಬಿ ಮಾರ್ಕೆಲ್ ಔಟಾಗದೇ  02

ಇತರೆ: (ಲೆಗ್ ಬೈ-4, ವೈಡ್-7)  11

ವಿಕೆಟ್ ಪತನ: 1-24 (ವಿಜಯ್ 4.4), 2-63 (ರೈನಾ 9.4), 3-111 (ಬದರೀನಾಥ್ 15.5), 4-144 (ಹಸ್ಸಿ 18.2)

ಬೌಲಿಂಗ್: ಲಸಿತ್ ಮಾಲಿಂಗ 4-0-29-1, ಹರಭಜನ್ ಸಿಂಗ್ 4-0-32-0, ಅಬು ನಾಚಿಮ್ ಅಹ್ಮದ್ 4-0-35-2, ಆ್ಯಂಡ್ರೂ ಸೈಮಂಡ್ಸ್ 2-0-16-0, ಯಜುವೇಂದ್ರ ಸಿಂಗ್ ಚಹಾಲ್ 3-0-23-0, ಕೀರನ್ ಪೊಲಾರ್ಡ್ 3-0-19-1.

ಮುಂಬೈ ಇಂಡಿಯನ್ಸ್ 19.5 ಓವರ್‌ಗಳಲ್ಲಿ 7 ವಿಕೆಟ್‌ಗೆ 159

ಡೇವಿ ಜೇಕಬ್ಸ್ ಸ್ಟಂಪ್ ದೋನಿ ಬಿ ಆರ್. ಅಶ್ವಿನ್  18

ಏಡನ್ ಬ್ಲಿಜಾರ್ಡ್ ಬಿ ಸುರೇಶ್ ರೈನಾ  28

ಟಿ. ಸುಮನ್ ಸ್ಟಂಪ್ ದೋನಿ ಬಿ ಸುರೇಶ್ ರೈನಾ  05

ಅಂಬಟಿ ರಾಯುಡು ಸಿ ದೋನಿ ಬಿ ಡ್ವೇನ್ ಬ್ರಾವೊ  05

ಆ್ಯಂಡ್ರ್ಯೂ ಸೈಮಂಡ್ಸ್ ಸಿ ಮಾರ್ಕೆಲ್ ಬಿ ಡ್ವೇನ್ ಬ್ರಾವೊ  03

ಕೀರನ್ ಪೊಲಾರ್ಡ್ ಸಿ ದೋನಿ ಬಿ ಅಲ್ಬಿ ಮಾರ್ಕೆಲ್  22

ಆರ್. ಸತೀಶ್ ಎಲ್‌ಬಿಡಬ್ಲ್ಯು ಬಿ ಆರ್. ಅಶ್ವಿನ್  14

ಹರಭಜನ್ ಸಿಂಗ್ ಔಟಾಗದೆ  19

ಲಸಿತ್ ಮಾಲಿಂಗ ಔಟಾಗದೆ  37

ಇತರೆ (ಬೈ-2, ಲೆಗ್‌ಬೈ-1, ವೈಡ್-5)  08

ವಿಕೆಟ್ ಪತನ: 1-39 (ಜೇಕಬ್ಸ್; 4.5), 2-50 (ಬ್ಲಿಜಾರ್ಡ್; 6.3), 3-57 (ರಾಯುಡು; 7.5), 4-59 (ಸುಮನ್; 8.3), 5-63 (ಸೈಮಂಡ್ಸ್; 9.5), 6-85 (ಸತೀಶ್; 11.5), 7-106 (ಪೊಲಾರ್ಡ್; 15.2)

ಬೌಲಿಂಗ್: ಡಗ್ ಬೋಲಿಂಜರ್ 3.5-0-37-0, ಅಲ್ಬಿ ಮಾರ್ಕೆಲ್ 3-0-32-1, ಆರ್. ಅಶ್ವಿನ್ 4-0-23-2, ಡ್ವೇನ್ ಬ್ರಾವೊ 3-0-22-2, ಸುರೇಶ್ ರೈನಾ 2-0-6-2, ಶಾದಾಬ್ ಜಕಾತಿ 4-0-36-0

ಫಲಿತಾಂಶ: ಮುಂಬೈ ಇಂಡಿಯನ್ಸ್‌ಗೆ 3 ವಿಕೆಟ್ ಜಯ; ಪಂದ್ಯಶ್ರೇಷ್ಠ: ಲಸಿತ್ ಮಾಲಿಂಗ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.