ಮಂಗಳವಾರ, ಜನವರಿ 28, 2020
19 °C

ಮುಂಬೈ: ಬಹುಮಹಡಿ ಕಟ್ಟಡದಲ್ಲಿ ಬೆಂಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ದಕ್ಷಿಣ ಮುಂಬೈಯ ಬಹು ಮಹಡಿ ಕಟ್ಟಡವೊಂದರ 12ನೇ ಮಹಡಿಯಲ್ಲಿ ಶುಕ್ರವಾರ ಸಂಜೆ ಭಾರಿ ಬೆಂಕಿ ಆಕಸ್ಮಿಕ ಸಂಭವಿಸಿದೆ.



ಆಸ್ತಿ–ಪಾಸ್ತಿನಾಶ ನಷ್ಟದ ಬಗ್ಗೆ ತಕ್ಷಣಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಅಗ್ನಿಶಾಮಕ ಅಧಿಕಾರಿ ತಿಳಿಸಿದ್ದಾರೆ.

ಕೆಂಪ್‌ ಕಾರ್ನರ್‌ ಪ್ರದೇಶ­ದಲ್ಲಿರುವ ಮೌಂಟ್‌ ಪ್ಲಾಂಟ್‌ ಎಂಬ 26 ಮಹಡಿಗಳ ಕಟ್ಟಡ­ದಲ್ಲಿ ಬೆಂಕಿ ಕಾಣಿಸಿಕೊಂಡಿತು. ಬೆಂಕಿಗೆ ಕಾರಣ ತಿಳಿದು ಬಂದಿಲ್ಲ.



14 ಅಗ್ನಿ ಶಾಮಕ ಯಂತ್ರಗಳು, ಏಳು ನೀರಿನ ಟ್ಯಾಂಕರ್‌ಗಳು ಮತ್ತು ನಾಲ್ಕು ಆಂಬುಲೆನ್ಸ್‌­ಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ.

ಪ್ರತಿಕ್ರಿಯಿಸಿ (+)