ಕೋಲಾರ: ಲೋಕಸಭೆ ಚುನಾವಣೆ ಸಂಬಂಧಿಸಿದಂತೆ ನೀತಿ ಸಂಹಿತೆ ಉಲ್ಲಂಘನೆಯಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಿ.ಕೆ.ರವಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಚುನಾವಣೆ ಸಂಬಂಧ ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಆಯ್ದ ಮತದಾನ ಕೇಂದ್ರಗಳಲ್ಲಿ ವೆಬ್ ಕ್ಯಾಸ್ಟಿಂಗ್ ನಡೆಸಲಾಗುವುದು. ಕಾನೂನು ಸುವ್ಯವಸ್ಥೆ, ಪೂರ್ವಸಿದ್ಧತೆ, ಮತದಾನ ಸಿಬ್ಬಂದಿಯ ಮೇಲ್ವಿಚಾರಣೆ ಸೇರಿದಂತೆ ಪ್ರಮುಖ ಕಾರ್ಯಗಳನ್ನು ನಿರ್ವಹಿಸಲು 98 ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.

ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಅನುಮಾನಗಳಿದ್ದರೆ ಸರ್ಕಾರಿ ವಾಹನಗಳನ್ನೂ ಮುಲಾಜಿಲ್ಲದೆ ತಪಾಸಣೆ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ, ತಮ್ಮ ವಾಹನವನ್ನೂ ಕೂಡ ತಪಾಸಣೆ ಮಾಡಬಹುದಾಗಿದೆ ಎಂದರು.

ಸರ್ಕಾರಿ ಶಾಲಾ ಕಾಲೇಜುಗಳ ಮೈದಾನದಲ್ಲಿ ಯಾವುದೇ ಕಾರಣಕ್ಕೂ ರಾಜಕೀಯಸಭೆ, ಬಹಿರಂಗ ಪ್ರಚಾರ ನಡೆಸುವಂತಿಲ್ಲ. ಸರ್ಕಾರದ ನಿಯಂತ್ರಣಕ್ಕೆ ಒಳಪಟ್ಟ ಹಾಗೂ ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಮತ್ತು ಇತರೆ ಅಧಿಕಾರೇತರ ಸದಸ್ಯರಿಗೆ ನೀಡಿರುವ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಜಿಲ್ಲೆಯ ಪ್ರವಾಸಿ ಮಂದಿರ, ಸರ್ಕೀಟ್ ಹೌಸ್ ಮತ್ತು ಅತಿಥಿ ಗೃಹದ ಸೌಕರ್ಯವನ್ನು ಜಿಲ್ಲಾಧಿಕಾರಿಯ ಪೂರ್ವಾನುಮತಿ ಇಲ್ಲದೆ ಯಾರಿಗೂ ವಸತಿಗಾಗಿ ನೀಡಲಾಗುವುದಿಲ್ಲ. ಅಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಚರ್ಚೆ ಹಾಗೂ ಪತ್ರಿಕಾ ಸಭೆಗಳನ್ನು ನಡೆಸುವಂತಿಲ್ಲ. ಧಾರ್ಮಿಕ ಪ್ರದೇಶಗಳಲ್ಲಿ ಚುನಾವಣಾ ಪ್ರಚಾರ ಸಭೆಯನ್ನು, ಭಾಷಣಗಳನ್ನು ಮಾಡುವಂತಿಲ್ಲ. ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳು ಸಾರ್ವಜನಿಕ ಸಭೆ, ಕಾರ್ಯಕರ್ತರ ಸಭೆ ಮುಂತಾದವುಗಳನ್ನು ಸ್ಟೇಡಿಯಂ, ಖಾಸಗಿ ಸಂಸ್ಥೆಗಳಲ್ಲಿ ಕೈಗೊಳ್ಳುವಾಗ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಅನುಮತಿಯನ್ನು ಪಡೆಯುವುದು ಕಡ್ಡಾಯ ಎಂದು ತಿಳಿಸಿದರು.

ಮತದಾನ ಕೇಂದ್ರಗಳಲ್ಲಿ ವೆಬ್ ಕ್ಯಾಸ್ಟಿಂಗ್: ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿನ ಆಯ್ದ ಮತದಾನ ಕೇಂದ್ರಗಳಲ್ಲಿ ವೆಬ್ ಕ್ಯಾಸ್ಟಿಂಗ್ ನಡೆಸಲು ಎಲ್ಲ ವ್ಯವಸ್ಥೆಗಳನ್ನು ಕೈಗೊಳ್ಳಲಾಗುತ್ತಿದೆ. ಬಿಎಸ್ಎನ್ಎಲ್ ಹಾಗೂ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಮತ್ತು ಎಂಜಿನಿಯರಿಂಗ್ ಕಾಲೇಜುಗಳಲ್ಲಿರುವ ಆಸ್ತಕ ವಿದ್ಯಾರ್ಥಿಗಳ ಸೇವೆಯನ್ನು ಬಳಸಲಾಗುವುದು. ಈ ವೆಬ್ ಕ್ಯಾಸ್ಟಿಂಗ್ ಅನ್ನು ಸಿಬ್ಬಂದಿ ನಿಯೋಜನೆ ಸಂದರ್ಭದಲ್ಲಿ ಮತ್ತು ಮತದಾನ ಕೇಂದ್ರಗಳಲ್ಲಿ ನಿರ್ವಹಿಸಲಾಗುವುದು. ಮತದಾನದ ದಿನ ಕೇಂದ್ರಗಳಲ್ಲಿ ನಡೆಯುವ ಪೂರ್ಣ ಪ್ರಕ್ರಿಯೆಯನ್ನು ಚಿತ್ರೀಕರಿಸಲಾಗುವುದು.
ಸಾರ್ವಜನಿಕರು ಅಂತರ್ಜಾಲದಲ್ಲಿ ವೀಕ್ಷಿಸಬಹುದು.

ಮೈಕ್ರೋ ವೀಕ್ಷಕರ ನೇಮಕ: ಮತದಾನದ ಪ್ರಕ್ರಿಯೆಯನ್ನು ವೀಕ್ಷಿಸಲು ಹಾಗೂ ವರದಿ ನೀಡಲು ಜಿಲ್ಲೆಯ ಕೇಂದ್ರ ಸರ್ಕಾರ ಮತ್ತು ಸಂಸ್ಥೆಗಳಿಗೆ ಒಳಪಡುವ ಅಧಿಕಾರಿ, ನೌಕರರ ಮಾಹಿತಿ ಸಂಗ್ರಹಿಸಲಾಗಿದೆ. ಅವರನ್ನು ಅಗತ್ಯಕ್ಕೆ ತಕ್ಕಂತೆ ಅತಿಸೂಕ್ಷ್ಮ ಮತ್ತು ಸೂಕ್ಷ್ಮ ಮತಗಟ್ಟೆಗಳಿಗೆ ಚುನಾವಣಾ ವೀಕ್ಷಕರ ಅನುಮೋದನೆಯ ನಂತರ ನಿಯೋಜಿಸಲಾಗುವುದು. ಈವರೆಗೆ 1200 ಮೈಕ್ರೋ ವೀಕ್ಷಕರ ಮಾಹಿತಿಯನ್ನು ಸಂಗ್ರಹಿಸಲಾಗಿದೆ ಎಂದರು.

ವೆಚ್ಚ ವೀಕ್ಷಕರು: ಭಾರತೀಯ ಕಂದಾಯ ಸೇವೆ ಮತ್ತು ಭಾರತೀಯ ಸೀಮಾ ಸುಂಕ ಮತ್ತು ಕೇಂದ್ರ ಅಬಕಾರಿ ಸೇವೆಯಲ್ಲಿರುವವರನ್ನು ಕೇಂದ್ರ ಚುನಾವಣಾ ಆಯೋಗವು ವೆಚ್ಚ ವೀಕ್ಷಕರನ್ನಾಗಿ ನಿಯೋಜಿಸಲಿದೆ. ಜಿಲ್ಲೆಗೆ ಒಬ್ಬರು ಅಥವಾ ಐದು ವಿಧಾನಸಭಾ ಕ್ಷೇತ್ರಗಳಿಗೆ ಒಬ್ಬರಂತೆ ಚುನಾವಣಾ ವೀಕ್ಷಕರು ನಿಯೋಜನೆಗೊಳ್ಳಲಿದ್ದಾರೆ ಎಂದರು.

ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಂತೆ ಒಬ್ಬ ಸಹಾಯಕ ವೆಚ್ಚ ವೀಕ್ಷಕರನ್ನು ಈಗಾಗಲೇ ನೇಮಿಸಲಾಗಿದೆ. ಪ್ರತಿ ಅಭ್ಯರ್ಥಿಗೆ ಸಂಬಂಧಿಸಿದ ಸಿ.ಡಿ, ದೂರು ಮತ್ತು ವರದಿಗಳನ್ನು ಹಾಗೂ ಛಾಯಾ ವೀಕ್ಷಣಾ ರಿಜಿಸ್ಟರ್ಗಳನ್ನು ಅವರು ಅಧ್ಯಯನ ಮಾಡುತ್ತಾರೆ. ಅಭ್ಯರ್ಥಿಗಳು ನಿರ್ವಹಿಸುವ ಚುನಾವಣಾ ವೆಚ್ಚಗಳ ವಿವರಗಳನ್ನು ಪರಿಶೀಲಿಸಿ ವೆಚ್ಚ ವೀಕ್ಷಕರ ಗಮನಕ್ಕೆ ತರುತ್ತಾರೆ ಎಂದರು.

ವಿದ್ಯುನ್ಮಾನ ಮತಯಂತ್ರ: ಜಿಲ್ಲೆಯಲ್ಲಿರುವ 1563 ಮತಗಟ್ಟೆಗಳಿಗೆ ಒಟ್ಟು 2260 ಬ್ಯಾಲೇಟ್ ಯೂನಿಟ್ಗಳು ಮತ್ತು 1780 ಕಂಟ್ರೋಲ್ ಯೂನಿಟ್ಗಳನ್ನು ತಾಲ್ಲೂಕುವಾರು ವಿತರಿಸಲು ಸಿದ್ಧತೆ ನಡೆದಿದೆ. ಎಲ್ಲ ವಿಧಾನಸಭಾ ಕ್ಷೇತ್ರಗಳ ಕೇಂದ್ರ ಸ್ಥಾನದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮತದಾನ ಸಿಬ್ಬಂದಿಗಳ ನಿಯೋಜನೆ ಕಾರ್ಯ ನಡೆಯಲಿದೆ.

ಮತಗಳ ಎಣಿಕೆಯನ್ನು ನಗರದ ಬಾಲಕರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಹಿಲೋರಿ ಮತ್ತು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್.ವಿನೋತ್ ಪ್ರಿಯಾ ಉಪಸ್ಥಿತರಿದ್ದರು.

7943 ಅರ್ಜಿ ಸ್ವೀಕಾರ

ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವುದು, ತಿದ್ದುಪಡಿ, ವರ್ಗಾವಣೆಗಾಗಿ ಜ.1ರಿಂದ ನೀಡಿದ್ದ ಅವಕಾಶ ಮತ್ತು ಮಾ.9ರಿಂದ 16ವರೆಗೆ ನಡೆಸಿದ ವಿಶೇಷ ಶಿಬಿರದಲ್ಲಿ ಒಟ್ಟು 7943 ಅರ್ಜಿಗಳು ಸಲ್ಲಿಕೆಯಾಗಿವೆ. ಅವರೆಲ್ಲರಿಗೂ ಮತದಾರರ ಗುರುತಿನ ಚೀಟಿ ನೀಡಲಾಗುವುದು. ತಿದ್ದುಪಡಿ, ವರ್ಗಾವಣೆ ಮಾಡಿಕೊಡಲಾಗುವುದು ಎಂದು ಡಿ.ಕೆ.ರವಿ ತಿಳಿಸಿದರು. ಮತದಾರರ ಪಟ್ಟಿಗೆ ಸೇರ್ಪಡೆ ಕೋರಿ ಸುಮಾರು ಮೂರು ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ ಎಂದರು.

ಮುಳಬಾಗಲಲ್ಲಿ ಹೆಚ್ಚು (3663) ಅರ್ಜಿಗಳು ಸಲ್ಲಿಕೆಯಾಗಿದ್ದು, ಕೆಜಿಎಫ್–1749, ಬಂಗಾರಪೇಟೆ– 633, ಶ್ರೀನಿವಾಸಪುರ–478, ಮಾಲೂರು–581 ಮತ್ತು ಕೋಲಾರ– 839 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ತಿಳಿಸಿದರು.

ರೌಡಿಗಳ ಪಟ್ಟಿ ಶೀಘ್ರ ತಯಾರಿ
ಜಿಲ್ಲೆಯಲ್ಲಿ ರೌಡಿಗಳ ಪಟ್ಟಿಯನ್ನು ತಯಾರಿಸಲಾಗಿದ್ದು ಅವರೆಲ್ಲರಿಗೂ ಎಚ್ಚರಿಕೆ ನೀಡಲಾಗುವುದು. ರೌಡಿಗಳಷ್ಟೇ ಅಲ್ಲದೆ, ನೀತಿ ಸಂಹಿತೆ ಉಲ್ಲಂಘಿಸುವ ಯಾರೇ ಆಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಹಿಲೋರಿ ತಿಳಿಸಿದರು.

ಮುಖ್ಯಾಂಶಗಳು

*7504 ಮತದಾನ ಸಿಬ್ಬಂದಿ
* 27 ಸಂಚಾರಿ ದಳ, 18 ಸ್ಥಾಯಿ ಕಣ್ಗಾವಲು ತಂಡ
* 441 ಅತಿಸೂಕ್ಷ್ಮ, 519 ಸೂಕ್ಷ್ಮಮತಗಟ್ಟೆ
* 98 ಸೆಕ್ಟರ್ ಅಧಿಕಾರಿಗಳ ನೇಮಕ
* ಬಾಲಕರ ಕಾಲೇಜಿನಲ್ಲಿ ಮತ ಎಣಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.