ಶುಕ್ರವಾರ, ಮೇ 14, 2021
21 °C

ಮುತ್ತಣ್ಣನ ಕೊರಳಿಗೆ ಮತ್ತೆ ನಾಲ್ಕು ಸ್ವರ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಗುರುವಾರ ಮೈಸೂರು ವಿಶ್ವವಿದ್ಯಾಲಯದ ಈಜುಗೊಳದಲ್ಲಿ ಐದು ಚಿನ್ನ ಗೆದ್ದಿದ್ದ ಮಹಾಜನ ಕಾಲೇಜಿನ ಎಂ.ಕೆ. ಮುತ್ತಣ್ಣ ಶುಕ್ರವಾರ ಮತ್ತೆ ನಾಲ್ಕು ಸ್ವರ್ಣಪದಕಗಳನ್ನು ತಮ್ಮ ಕೊರಳಿಗೆ ಹಾಕಿಕೊಂಡರು.ಮೈಸೂರು ವಿಶ್ವವಿದ್ಯಾಲಯದ ಅಂತರ ಕಾಲೇಜು ಈಜು ಸ್ಪರ್ಧೆಯ ಎರಡನೇ ದಿನವಾದ ಶುಕ್ರವಾರ ಪುರುಷರ 100 ಮೀಟರ್ ಫ್ರೀಸ್ಟೈಲ್, 50ಮೀಟರ್ ಬಟರ್‌ಫ್ಲೈ, 200ಮೀ ಫ್ರೀಸ್ಟೈಲ್, 50ಮೀ. ಬ್ರೆಸ್ಟ್‌ಸ್ಟ್ರೋಕ್ ವಿಭಾಗಗಳಲ್ಲಿ ಪ್ರಥಮ ಸ್ಥಾನ ಗಳಿಸಿದರು.

ಮಹಿಳೆಯರ ವಿಭಾಗದಲ್ಲಿ ಟೆರೆಷಿಯನ್ ಕಾಲೇಜಿನ ಅಪೂರ್ವ ಆರ್ ಶೇಖರ್ ಮತ್ತೆ ಮೂರು ಚಿನ್ನ ಗಳಿಸಿ ಈಜುಗೊಳದ ಮೇಲೆ ಅಧಿಪತ್ಯ ಸ್ಥಾಪಿಸಿದರು.ಫಲಿತಾಂಶಗಳು

ಪುರುಷರು- 100 ಮೀ ಫ್ರೀಸ್ಟೈಲ್: ಎಂ.ಕೆ. ಮುತ್ತಣ್ಣ (ಮಹಾಜನ ಕಾಲೇಜು)-1, ಶ್ರೇಯಾಂಕ ಪಿ. ಸ್ವಾಮಿ (ಅಖಿಲ ಭಾರತೀಯ ವಾಕ್ ಮತ್ತು ಶ್ರವಣ ಸಂಸ್ಥೆ)-2, ಜೆ.ಕೆ. ಅವಿನಾಶ್ (ಪಿಜಿ ಸೆಂಟರ್, ಮಾನಸಗಂಗೋತ್ರಿ)-3 ಕಾಲ: 1ನಿ,05.93ಸೆ: 200ಮೀ ಬಟರ್‌ಫ್ಲೈ: ಶ್ರೇಯಾಂಕ ಪಿ. ಸ್ವಾಮಿ -1, ಜೆ.ಕೆ. ಅವಿನಾಶ್ -2, ಆರ್.ಕೆ. ಮಧುಸೂದನ (ಯುವರಾಜ ಕಾಲೇಜು)-3, ಕಾಲ: 4ನಿ,04.99ಸೆ; 50 ಮೀ ಬಟರ್‌ಫ್ಲೈ: ಎಂ.ಕೆ. ಮುತ್ತಣ್ಣ-1, ಶ್ರೇಯಾಂಕ ಪಿ. ಸ್ವಾಮಿ -2, ಆರ್.ಕೆ. ಮಧುಸೂದನ-3, ಕಾಲ: 28.49ಸೆ; 200ಮೀ ಫ್ರೀಸ್ಟೈಲ್: ಎಂ.ಕೆ. ಮುತ್ತಣ್ಣ-1, ಶ್ರೇಯಾಂಕ ಪಿ. ಸ್ವಾಮಿ-2, ಜೆ.ಕೆ. ಅವಿನಾಶ್-3 ಕಾಲ: 2ನಿ,35.81ಸೆ;100ಮೀ ಬ್ರೆಸ್ಟ್‌ಸ್ಟ್ರೋಕ್:  ಶ್ರೇಯಾಂಕ ಪಿ.ಸ್ವಾಮಿ -1, ಎಂ.ಕೆ. ಮುತ್ತಣ್ಣ-2, ಜೆ.ಕೆ. ಅವಿನಾಶ್ -3, ಕಾಲ: 1ನಿ.34.10ಸೆ; 200ಮೀ ಬ್ಯಾಕ್‌ಸ್ಟ್ರೋಕ್ : ಶ್ರೇಯಾಂಕ ಪಿ. ಸ್ವಾಮಿ-1, ಜೆ.ಕೆ. ಅವಿನಾಶ್-2, ಮಣಿಕಂಠನ್ -3 ಕಾಲ: 3ನಿ,52.66ಸೆ; 50ಮೀ ಬ್ರೆಸ್ಟ್‌ಸ್ಟ್ರೋಕ್: ಎಂ.ಕೆ. ಮುತ್ತಣ್ಣ (ಮಹಾಜನ ಕಾಲೇಜು)-1, ಶ್ರೇಯಾಂಕ ಪಿ. ಸ್ವಾಮಿ -2, ಜೆ.ಕೆ. ಅವಿನಾಶ -3, ಕಾಲ:36.53ಸೆ;4200ಮೀ ಫ್ರೀಸ್ಟೈಲ್ ರಿಲೆ: ಯುವರಾಜ ಕಾಲೇಜು ಮೈಸೂರು (ಪಿ. ಮಣಿಕಂಠನ್, ಎಚ್.ಎನ್. ಶ್ರೇಯಸ್, ಆರ್.ಕೆ. ಮಧುಸೂದನ, ಜಿ. ಮೋಹಿತ್)-1, ಮಹಾಜನ ಕಾಲೇಜು (ಅಭಿಜಿತ್ ಹೆಗಡೆ, ನಿಕ್ಷೇಪ ರಾಜ್, ಎಂ.ಕೆ. ಮುತ್ತಣ್ಣ, ಎ. ಚರಣ್)-2, ಶಾಂತಿ ಕಾಲೇಜು, ಮಳವಳ್ಳಿ (ಎಂ.ಪಿ. ಯೋಗೇಶ್, ಎ. ಚೇತನ್, ವೈ.ಎನ್. ಪ್ರದೀಪಕುಮಾರ, ಎಂ.ಎಸ್. ಬಸವರಾಜು)-3 ಕಾಲ:19ನಿ,7.16ಸೆ;ಮಹಿಳೆಯರು- 100ಮೀ ಬ್ರೆಸ್ಟ್‌ಸ್ಟ್ರೋಕ್: ಅಪೂರ್ವ ಆರ್. ಶೇಖರ್ (ಟೆರೆಷಿಯನ್ ಕಾಲೇಜು)-1, ಮಿನಾಜ್ ಅಹ್ಮದ್ (ಜೆಎಸ್‌ಎಸ್ ಮಹಿಳಾ ಕಾಲೇಜು)-2. ಕಾಲ: 2ನಿ.01.76ಸೆ; 50ಮೀ ಬ್ರೆಸ್ಟ್  ಸ್ಟ್ರೋಕ್: ಅಪೂರ್ವ ಆರ್. ಶೇಕರ್ (ಟೆರೇಷಿಯನ್ ಕಾಲೇಜು)-1, ಮಿನಾಜ್ ಅಹ್ಮದ್ (ಜೆಎಸ್‌ಎಸ್ ಮಹಿಳಾ ಕಾಲೇಜು-2, ಕಾಲ: 54.64ಸೆ.100ಮೀ ಫ್ರೀಸ್ಟೈಲ್: ಮೀನಾಜ್ ಅಹ್ಮದ್ -1, ಅಪೂರ್ವ ಆರ್. ಶೇಖರ್ -2, ಕಾಲ: 1ನಿ 38.13ಸೆ; 50ಮೀ ಬಟರ್‌ಫ್ಲೈ: ಅಪೂರ್ವ ಆರ್. ಶೇಖರ-1, ಮಿನಾಜ್ ಅಹ್ಮದ್ -2 ಕಾಲ: 58.70ಸೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.