ಭಾನುವಾರ, ಏಪ್ರಿಲ್ 18, 2021
29 °C

ಮುತ್ಯಾಲಮಡುವು ಅಭಿವೃದ್ಧಿಗೆ ಸಂಕಲ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆನೇಕಲ್: ಮುತ್ಯಾಲಮಡುವನ್ನು ರಾಜ್ಯದ ಪ್ರಮುಖ ಪ್ರವಾಸೋದ್ಯಮ ತಾಣವನ್ನಾಗಿ ರೂಪಿಸುವ ಸಂಕಲ್ಪ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎ.ನಾರಾಯಣಸ್ವಾಮಿ ನುಡಿದರು. ತಾಲ್ಲೂಕಿನ ಮುತ್ಯಾಲಮಡುವಿನಲ್ಲಿ 2.93 ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.ಮೊದಲನೆ ಹಂತದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ 2.93 ಕೋಟಿ ರೂಪಾಯಿ ಮಂಜೂರಾಗಿದೆ. ಈ ಅನುದಾನದಲ್ಲಿ ಮುತ್ಯಾಲಮಡುವಿನ 25 ಎಕರೆ ಪ್ರದೇಶವನ್ನು ಅಭಿವೃದ್ಧಿಪಡಿಸಿ ಪ್ರವಾಸಿಗರನ್ನು ಆಕರ್ಷಿಸಲಾಗುವುದು. 80 ಲಕ್ಷ ವೆಚ್ಚದಲ್ಲಿ ಡೈನೋಸರ್ ಪಾರ್ಕ್ ನಿರ್ಮಿಸಲಾಗುವುದು ಎಂದರು. ಎರಡನೇ ಹಂತದಲ್ಲಿ 10 ಕೋಟಿ ರೂಪಾಯಿ ಅನುದಾನ ನೀಡಲು ಪ್ರವಾಸೋದ್ಯಮ ಸಚಿವರು ಒಪ್ಪಿಗೆ ನೀಡಿದ್ದಾರೆ ಎಂದರು.ಎರಡನೇ ಹಂತದಲ್ಲಿ ಚೆಕ್ ಡ್ಯಾಮ್‌ಗಳ ನಿರ್ಮಾಣ, ಬೋಟಿಂಗ್ ವ್ಯವಸ್ಥೆ, ಆಕರ್ಷಕ ಮಿರರ್ ಮೇಜ್ (ಗಾಜಿನ ಮನೆ), ನೀರಿನ ಕಾರಂಜಿಗಳನ್ನು ನಿರ್ಮಿಸಲಾಗುವುದು.ಗಿಡಮರಗಳನ್ನೂ ಬೆಳೆಸಲು ಯೋಜಿಸಲಾಗಿದೆ. ಮುತ್ಯಾಲಮಡುವಿನ ನೀರಿನ ಮೂಲಗಳನ್ನು ಸಂರಕ್ಷಿಸಿ ಗತವೈಭವವನ್ನು ಮರಳಿ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ ಎಂದರು.ಕೆಎಸ್‌ಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ವಿನಯ್ ಲೂತ್ರಾ ಮಾತನಾಡಿ, ಆರು ತಿಂಗಳಲ್ಲಿ ಮೊದಲ ಹಂತದ ಯೋಜನೆಯನ್ನು ಪೂರ್ಣಗೊಳಿಸಲಾಗುವುದು. ಲ್ಯಾಂಡ್ ಸ್ಕೇಪಿಂಗ್, ಪಾರ್ಕಿಂಗ್, ಪಾದಚಾರಿ ರಸ್ತೆ, ಮೆಟ್ಟಿಲುಗಳ ಪುನರ್‌ಜೋಡಣೆ, ಇಳಿಯುವ ದಾರಿಯಲ್ಲಿ ತಂಗುದಾಣಗಳ ನಿರ್ಮಾಣ ಮತ್ತಿತರ ಕಾರ್ಯಗಳನ್ನು ತ್ವರಿತವಾಗಿ ಮಾಡಲಾಗುವುದು.ಅರಣ್ಯ ಇಲಾಖೆಯು ಎಕೋ ಪಾರ್ಕಿಂಗ್ ಹಾಗೂ ಟೂರಿಸಂಗಾಗಿ ಪ್ರತಿ ಪ್ರವಾಸಿ ತಾಣಗಳಿಗೆ ಆರು ಕೋಟಿ ರೂಪಾಯಿ ನೀಡಲು ಯೋಜನೆ ರೂಪಿಸಿದೆ. 300 ರಿಂದ 500 ಎಕರೆ ಅರಣ್ಯ ಪ್ರದೇಶ ಅಭಿವೃದ್ಧಿ ಪಡಿಸಿ ಪರಿಸರ ಸ್ನೇಹಿ ಪ್ರವಾಸಿ ತಾಣವನ್ನಾಗಿ ರೂಪಿಸಲಿದೆ. ಇದಕ್ಕೂ ಸಹ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದರು.ಪುರಸಭೆ ಅಧ್ಯಕ್ಷೆ ಜಯಲಕ್ಷ್ಮೀ ಮುನಿರಾಜು, ಜಿ.ಪಂ.ಸದಸ್ಯ ಜೆ.ನಾರಾಯಣಪ್ಪ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಎನ್ ಬಸವರಾಜು, ಕಿಯೋನಿಕ್ಸ್ ಅಧ್ಯಕ್ಷ ಎಂ.ಯಂಗಾರೆಡ್ಡಿ, ಗ್ರಾ.ಪಂ. ಅಧ್ಯಕ್ಷರಾದ ಸುರೇಶ್ ರೆಡ್ಡಿ ಮತ್ತು ಶಂಕರ್, ಪುರಸಭಾ ಮಾಜಿ ಉಪಾಧ್ಯಕ್ಷ ಕೆ.ನಾಗರಾಜ್, ಮುಖಂಡರಾದ ಸಿ.ಮುನಿರಾಜು, ಶಿವರಾಮ್, ಮಧು, ಸೋಮಶೇಖರರೆಡ್ಡಿ ಮತ್ತಿತರರು ಹಾಜರಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.