ಶನಿವಾರ, ಜುಲೈ 24, 2021
22 °C

ಮುದ್ರಣ ತಂತ್ರಜ್ಞಾನದ ಕಡೆಗಣನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯ ಸರ್ಕಾರವು ಮುದ್ರಣ ತಂತ್ರಜ್ಞಾನದ (ಪ್ರಿಂಟಿಂಗ್ ಟೆಕ್ನಾಲಜಿ) ಹೆಚ್ಚಿನ ಕಲಿಕೆಗಾಗಿ ಹೆಚ್ಚು ಕಾಲೇಜುಗಳಿಲ್ಲ ಎಂಬುದನ್ನೂ ಗಂಭೀರವಾಗಿ ಪರಿಗಣಿಸಿದರೆ ಅಧ್ಯಯನಾಸಕ್ತ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಮುದ್ರಣ ತಂತ್ರಜ್ಞಾನದ ‘ಪದವಿ’ ತರಗತಿಯ ಆರಂಭದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಲ್ಲಿ ವಿಚಾರಿಸಿದರೆ ಹಾರಿಕೆಯ ಉತ್ತರವೇ ಸಿಗುತ್ತದೆ. ಇದರಿಂದಾಗಿ ಈಗಾಗಲೇ ಮುದ್ರಣ ತಂತ್ರಜ್ಞಾನದ ಡಿಪ್ಲೊಮಾ ಮುಗಿಸಿರುವ ವಿದ್ಯಾರ್ಥಿಗಳಿಗೆ ಮುಂದೆ ಕಲಿಯುವ ಆಸಕ್ತಿ ಹೊರಟು ಹೋಗಿದೆ. ಅವಕಾಶ ಇಲ್ಲದ ಕಾರಣ ಪ್ರಿಂಟಿಂಗ್ ಕೋರ್ಸ್ ಓದಿರುವ ವಿದ್ಯಾರ್ಥಿಗಳಿ ಎಂಜಿನಿಯರಿಂಗ್ ಅಥವಾ ಮುದ್ರಣಕ್ಕೆ  ಸಂಬಂಧಿಸಿದ ಬೇರೆ ಕೋರ್ಸ್‌ಗಳಿಲ್ಲ.ರಾಜ್ಯದಲ್ಲಿ ಈಗಾಗಲೇ ಎರಡು  ಪಶು ವೈದ್ಯಕೀಯ ಕಾಲೇಜುಗಳಲ್ಲಿ ಪಶು ವೈದ್ಯಕೀಯ ಡಿಪ್ಲೊಮಾ ಕೋರ್ಸ್ ಪ್ರಾರಂಭಿಸಲು ಸಿದ್ಧತೆಗಳು ನಡೆಯುತ್ತಿವೆ. ಇದರಂತೆಯೇ ಕನಿಷ್ಠ ಒಂದು ಕಾಲೇಜಿನಲ್ಲಾದರೂ ಮುದ್ರಣ ತಂತ್ರಜ್ಞಾನ ಪದವಿ ಕೋರ್ಸ್ ಪ್ರಾರಂಭಿಸಿದರೆ ಈ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುತ್ತದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.