ನ್ಯೂಯಾರ್ಕ್ (ಪಿಟಿಐ): ಬಹುತೇಕ ಮನೆಗಳು ಹಾಗೂ ಗ್ರಂಥಾಲಯಗಳಲ್ಲಿ ಓದುಗರಿಗೆ ಸಹಕಾರಿಯಾಗಿದ್ದ 224 ವರ್ಷಗಳ ಇತಿಹಾಸದ ಬ್ರಿಟಾನಿಕಾ ವಿಶ್ವಕೋಶ (ಎನ್ಸೈಕ್ಲೋಪಿಡಿಯಾ ಬ್ರಿಟಾನಿಕಾ) ಇನ್ನು ಮುಂದೆ ಮುದ್ರಣ ನಿಲ್ಲಿಸಲಿದ್ದು, ಬದಲಾಗಿ ಇದೇ ಮೊದಲ ಬಾರಿಗೆ ಡಿಜಿಟಲ್ ಮಾದರಿಗೆ ವರ್ಗಾವಣೆ ಆಗಲಿದೆ.

ಬ್ರಿಟಾನಿಕಾ ವಿಶ್ವಕೋಶ ಮೊದಲ ಬಾರಿಗೆ 1768ರಲ್ಲಿ ಸ್ಕಾಟ್ಲೆಂಡ್ನಲ್ಲಿ ಮುದ್ರಣವಾಗಿತ್ತು. ಈಗ ಮುದ್ರಣವಾಗಿರುವ ಪ್ರತಿಗಳು ಮುಗಿದು ಹೋದ ನಂತರ ತನ್ನ ಮುದ್ರಣವನ್ನು ಸ್ಥಗಿತಗೊಳಿಸುವುದಾಗಿ ಷಿಕಾಗೊ ಮೂಲದ ಕಂಪೆನಿ ತಿಳಿಸಿದೆ.

2010ರಲ್ಲಿ 32 ಸಂಪುಟಗಳ ಮುದ್ರಣ ಮಾಡಲಾಗಿದ್ದು, ಇದು ಕೊನೆಯ ಮುದ್ರಣವಾಗಿದೆ. ಸುಮಾರು ನಾಲ್ಕು ಸಾವಿರ ಪ್ರತಿಗಳನ್ನು ಮುದ್ರಣ ಮಾಡಿದ್ದು, ಈ ಪ್ರತಿಗಳು ಮಾರಾಟವಾದ ನಂತರ ಪುನಃ ಮುದ್ರಣ ಮಾಡುವುದಿಲ್ಲ ಎಂದು ಕಂಪೆನಿಯ ಅಧ್ಯಕ್ಷ ಜಾರ್ಜ್ ಕೌಜ್ `ಲುಕ್ಕಿಂಗ್ ಅಹೆಡ್~ ಬ್ಲಾಗ್ನಲ್ಲಿ ಸ್ಪಷ್ಟಪಡಿಸಿದ್ದಾರೆ.

ಇನ್ನು ಮುಂದೆ ಬ್ರಿಟಾನಿಕಾ ವಿಶ್ವಕೋಶವನ್ನು ಡಿಜಿಟಲ್ ಮಾದರಿಯಲ್ಲಿ ರೂಪಿಸಲಾಗುವುದು. ನೊಬೆಲ್ ಪ್ರಶಸ್ತಿ ಪುರಸ್ಕೃತರಿಂದ ಹಿಡಿದು ಕೋಟ್ಯಂತರ ಮಂದಿಯ ಓದಿಗೆ ಈ ಪುಸ್ತಕ ನೆರವಾಗಿತ್ತು. ಅಮೆರಿಕ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಸಹ ಈ ಪುಸ್ತಕದ ನೆರವು ಪಡೆದಿದ್ದರು. ಮುದ್ರಣವನ್ನು ನಿಲ್ಲಿಸಿದರೂ ಸಹ, ಈಗ ಹೆಚ್ಚು ಚಾಲ್ತಿಯಲ್ಲಿರುವ ಇ-ಪುಸ್ತಕ ಮತ್ತು ಟ್ಯಾಬ್ಲೆಟ್ಗಳ ನೆರವಿನೊಂದಿಗೆ ಡಿಜಿಟಲ್ ರೂಪದಲ್ಲಿ ಹೊರತರಲಾಗುವುದು ಎಂದು ಕೌಜ್ ವಿವರ ನೀಡಿದ್ದಾರೆ.

ಬ್ರಿಟಾನಿಕಾ ವಿಶ್ವಕೋಶ ಪುಸ್ತಕ 1990ರಲ್ಲಿ ವಿಶ್ವದೆಲ್ಲೆಡೆ 1.20 ಲಕ್ಷ ಪ್ರತಿಗಳು ಮಾರಾಟವಾಗಿ ಇತಿಹಾಸ ನಿರ್ಮಾಣವಾಗಿತ್ತು. ನಂತರದ ಆರು ವರ್ಷಗಳಲ್ಲಿ ಕೇವಲ 40 ಸಾವಿರ ಪ್ರತಿಗಳು ಮಾತ್ರ ಮಾರಾಟವಾಗಿದ್ದವು. ಸದ್ಯದಲ್ಲಿ ಪುಸ್ತಕದ ಮಾರಾಟದ ಪ್ರಮಾಣ ಗಣನೀಯವಾಗಿ ಕಡಿಮೆ ಆಗಿದ್ದು, ಮುದ್ರಣವನ್ನು ನಿಲ್ಲಿಸಲು ಒಂದು ಕಾರಣವಾಗಿದೆ ಎಂದೂ ಅವರು ತಿಳಿಸಿದ್ದಾರೆ. ಆನ್ಲೈನ್ನಲ್ಲಿ ಸೇವೆ ಪಡೆಯುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಅವರಿಗೆ ಸೇವೆ ಒದಗಿಸುವುದು ಈಗಿನ ಅಗತ್ಯವಾಗಿದೆ. ಮುದ್ರಣ ನಿಲ್ಲಿಸಲು ಇದೂ ಒಂದು ಕಾರಣ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.