ಪ್ರಜಾವಾಣಿ ವಾರ್ತೆ
ನಾಪೋಕ್ಲು: ಲೇಲೆ ಲೈಸಾ ..... ಕೆಸರಿನ ಗದ್ದೆಯಲ್ಲಿ ಯುವಕರು ಹಗ್ಗಹಿಡಿದು ಜಗ್ಗಾಡಿದರು. ಕೆಸರಿನಲ್ಲಿ ಹೂತುಹೋಗು ತ್ತಿರುವ ಕಾಲನ್ನೂರಿ ಬಿದ್ದು ಎದ್ದು ಜಗ್ಗಾಡಿದರು. ಕೆಸರಿನಲ್ಲೇ ಚೆಂಡನ್ನು ಒದ್ದು ಕೆಸರಿನ ಸ್ನಾನ ಮಾಡುತ್ತಾ ಫುಟ್ಬಾಲ್ ಆಡಿದರು. ಅತ್ತ ಲೇಲೇ ಲೈಸಾ ಎಂದು ಹಗ್ಗಜಗ್ಗಾಟದ ಸ್ಪರ್ಧಿಗಳು ಜಗ್ಗಾಡಿದರೆ ಇತ್ತ ಕ್ರೀಡಾಪ್ರೇಮಿಗಳು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

ಫುಟ್ಬಾಲ್ ಪಂದ್ಯದಲ್ಲಿ ಟ್ರೋಫಿಗಾಗಿ ಯುವ ತಂಡಗಳು ಕೆಸರಿನಲ್ಲಿ ಮಿಂದೆದ್ದು ಸೆಣಸಾಡಿದರೆ ವೀಕ್ಷಕರಿಗೆ ಸಂಭ್ರಮೋಲ್ಲಾಸ. ಭಾನುವಾರ ರಜಾದಿನ ವಾದ್ದರಿಂದ ಶಾಲಾ ಮಕ್ಕಳುಕ್ರೀಡಾಕೂಟದಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಮುಂಗಾರು ಮಳೆ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಸಮೀಪದ ಕುಂಜಿಲ ಗ್ರಾಮದಲ್ಲಿ ರಾಕಿಂಗ್ ಬಾಯ್ಸ ವತಿಯಿಂದ ಹಮ್ಮಿಕೊಳ್ಳಲಾದ ಕೆಸರು ಗದ್ದೆ ಕ್ರೀಡಾಕೂಟ ಗ್ರಾಮೀಣ ಜನತೆಗೆ ಮುದನೀಡಿತು. ಇಲ್ಲಿನ ಕುಂಡಂಡ ಅಮು ಹಾಜಿ ಅವರ ಗದ್ದೆಯಲ್ಲಿ ಜಿಲ್ಲಾ ಮಟ್ಟದ ಎರಡನೇ ವರ್ಷದ ಕೆಸರು ಗದ್ದೆ ಕ್ರೀಡಾಕೂಟಕ್ಕೆ ಶನಿವಾರ ಚಾಲನೆ ನೀಡಲಾಯಿತು.

ಕ್ರೀಡಾಕೂಟದ ಉದ್ಘಾಟನೆಯನ್ನು ಕಾಫಿ ಬೆಳೆಗಾರ ಪೆಣತ್ತೋಡು ಉಮ್ಮರ್ಹಾಜಿ ನೆರವೇರಿಸಿದರು. ಮೂವತ್ತು ತಂಡಗಳು ಪಾಲ್ಗೊಂಡಿದ್ದ ಕೆಸರು ಗದ್ದೆ ಫುಟ್ಬಾಲ್ ಪಂದ್ಯದಲ್ಲಿ ಒಂಬತ್ತು ತಂಡಗಳು ಸೆಮಿಫೈನಲ್ ಸುತ್ತಿಗೆ ಪ್ರವೇಶಿಸಿದವು. ಅಂತಿಮ ಪಂದ್ಯದಲ್ಲಿ ಕುಂಜಿಲ ಪ್ಯಾಲೇಸ್ ತಂಡ ಹಾಗೂ ಕಡಂಗದ ಸಿಟಿ ಫ್ರೆಂಡ್ಸ್ ತಂಡಗಳ ನಡುವೆ ನಡೆಯಿತು. ರೋಚಕ ಆಟದಲ್ಲಿ ಕುಂಜಿಲದ ಪ್ಯಾಲೇಸ್ ತಂಡ ಟ್ರೋಫಿ ಗಳಿಸಿತು. ಕಡಂಗದ ಸಿಟಿ ಫ್ರೆಂಡ್ಸ್ ರನ್ನರ್ ಆಪ್ ಪ್ರಶಸ್ತಿ ಗಳಿಸಿತು. ಅತ್ಯುತ್ತಮ ಗೋಲ್ ಕೀಪರ್ ಮತ್ತು ಶೂಟರ್ ಆಗಿ ಕುಂಜಿಲದ ಪ್ಯಾಲೇಸ್ ತಂಡದ ಸುಬ್ರಮಣಿ ಪ್ರಶಸ್ತಿ ಪಡೆದರು.

ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಎಮ್ಮೆಮಾಡು ತಂಡ ಟ್ರೋಫಿ ಗಳಿಸಿತು. ಕುಂಜಿಲ ತಂಡಕ್ಕೆ ದ್ವಿತೀಯ ಸ್ಥಾನ ಲಭಿಸಿತು. ಶಾಲಾ ವಿದ್ಯಾರ್ಥಿ ಗಳಿಗೂ ಕೆಸರು ಗದ್ದೆಯಲ್ಲಿ ವಿವಿಧ ಕ್ರೀಡಾ ಸ್ಪರ್ಧೆ ಆಯೋಜಿಸಲಾಗಿತ್ತು. ರಾಕಿಂಗ್ ಬಾಯ್ಸನ ಅಧ್ಯಕ್ಷ ಟಿ.ಎ.ಬಷೀರ್, ಕಾಫಿ ಬೆಳೆಗಾರ ಬಡಕ್ಕಡ ದೀನಾಪೂವಯ್ಯ, ಪಾಂಡಂಡ ನರೇಶ್, ಕೆ.ಪಿ.ಬಾಣೆ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ರೇಖಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.