ಕೈರೊ (ಪಿಟಿಐ): ಈಜಿಪ್ಟ್ನ ಪದಚ್ಯುತ ಅಧ್ಯಕ್ಷ ಹೋಸ್ನಿ ಮುಬಾರಕ್ ಅವರ ಸಹಚರರ ಖಾತೆಗಳನ್ನು ಸ್ಥಗಿತಗೊಳಿಸುವಂತೆ ದೇಶದ ಸೇನಾಡಳಿತವು ಅಮೆರಿಕ ಮತ್ತು ಐರೋಪ್ಯ ಒಕ್ಕೂಟವನ್ನು ಕೇಳಿಕೊಂಡಿದೆ. ಆದರೆ, ಮುಬಾರಕ್ ಅವರ ಖಾತೆಗಳ ಬಗ್ಗೆ ಅದು ಏನನ್ನೂ ಹೇಳದೆ ಮೌನ ವಹಿಸಿದೆ.

ಮುಬಾರಕ್ ತಮ್ಮ ಕುಟುಂಬದ ಹಣವನ್ನು ಯೂರೋಪ್ ಬ್ಯಾಂಕುಗಳಿಂದ ಕೊಲ್ಲಿ ರಾಷ್ಟ್ರಗಳಿಗೆ ರವಾನಿಸಿದ್ದಾರೆ ಎಂಬ ಅರಬ್ ಮಾಧ್ಯಮಗಳ ವರದಿ ಹಿನ್ನೆಲೆಯಲ್ಲಿ ಅವರ ಸಹಚರರ ವಿರುದ್ಧ ಈ ಕ್ರಮಕ್ಕೆ ಸೇನಾಡಳಿತ ಮುಂದಾಗಿದೆ. ಕೈರೊದ ಮನವಿಯನ್ನು ಪರಿಗಣಿಸಲಾಗುತ್ತಿದ್ದು ಈ ಬಗ್ಗೆ ನಿರ್ಧರಿಸಲು ಐರೋಪ್ಯ ಒಕ್ಕೂಟದ ಸಚಿವರು ಬ್ರಸೆಲ್ಸ್ನಲ್ಲಿ ಸಭೆ ಸೇರಲಿದ್ದಾರೆ ಎಂದು ಒಬಾಮ ಆಡಳಿತ ತಿಳಿಸಿದೆ.

ಕ್ರಮಕ್ಕೆ ಒಳಗಾಗಲಿರುವ ವ್ಯಕ್ತಿಗಳು ಯಾರು, ಇವರಲ್ಲಿ ಮುಬಾರಕ್ ಅವರ ಪುತ್ರರೂ ಸೇರಿದ್ದಾರೆಯೇ ಎಂಬುದನ್ನು ಬಹಿರಂಗಪಡಿಸಲು ಈಜಿಪ್ಟ್ ಮತ್ತು ಅಮೆರಿಕದ ಅಧಿಕಾರಿಗಳು ನಿರಾಕರಿಸಿದ್ದಾರೆ.

ಟ್ಯುನೀಷಿಯಾದ ಪದಚ್ಯುತ ಅಧ್ಯಕ್ಷ ಝಿನ್ ಅಲ್ ಅಬಿದಿನ್ ಬೆನ್ ಅಲಿ ಅವರ ಖಾತೆಗಳನ್ನು ಸ್ಥಗಿತಗೊಳಿಸಿದ ಮಾದರಿಯಲ್ಲೇ ಮುಬಾರಕ್ ಅವರ ಸಹಚರರಿಗೆ ಸೇರಿದ ಆಸ್ತಿಪಾಸ್ತಿ ಸ್ಥಗಿತಕ್ಕೆ ಎಲ್ಲ 27 ಸದಸ್ಯ ರಾಷ್ಟ್ರಗಳೂ ಕ್ರಮ ಕೈಗೊಳ್ಳಬೇಕೆಂಬ ಪ್ರಸ್ತಾವವನ್ನು ಬ್ರಿಟನ್ನ ಹಣಕಾಸು ಸಚಿವ ಜಾರ್ಜ್ ಒಸ್ಬೋರ್ನ್ ಐರೋಪ್ಯ ಒಕ್ಕೂಟದ ಮುಂದೆ ಇಟ್ಟಿದ್ದಾರೆ.

ಸಂಚಾರ ನಿರ್ಬಂಧ: ಸೇನಾಡಳಿತ ಎಲ್ಲ ಮಾಜಿ ಉನ್ನತ ಅಧಿಕಾರಿಗಳ ವಿದೇಶ ಸಂಚಾರವನ್ನು ನಿರ್ಬಂಧಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.