ಗುರುವಾರ , ಜೂನ್ 17, 2021
22 °C

ಮುಷರಫ್ ಹಸ್ತಾಂತರಿಸಲು ಇಂಟರ್ಪೋಲ್ ಗೆ ಪಾಕ್ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಪಿಟಿಐ): ಸ್ವಯಂ ಘೋಷಿತ ಗಡಿಪಾರಿನಡಿ ದೇಶದಿಂದ ಹೊರಗಿರುವ ಮಾಜಿ ಪಾಕ್ ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ವಿರುದ್ಧ ರೆಡ್ ಕಾರ್ನರ್ ನೊಟಿಸ್ ಜಾರಿ ಮಾಡುವಂತೆ ಪಾಕಿಸ್ತಾನಿ ಅಧಿಕಾರಿಗಳು ಇಂಟರ್ ಪೋಲ್ ಗೆ ಔಪಚಾರಿಕ ಮನವಿ ಸಲ್ಲಿಸಿದ್ದಾರೆ.

ಬೆನಜೀರ್ ಭುಟ್ಟೊ ಹತ್ಯೆಗೆ ಸಂಬಂಧಿಸಿದಂತೆ ವಿಚಾರಣೆ ಎದುರಿಸಲು ಮುಷರಫ್ ಅವರನ್ನು ಬಂಧಿಸಿ ಕರೆತರಲು ಅನುಕೂಲವಾಗುಂತೆ ಈ ಕ್ರಮವನ್ನು ಕೈಗೊಳ್ಳಲಾಗಿದೆ.

ಪಾಕಿಸ್ತಾನದ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿಯು ಬುಧವಾರ ಪಾಕಿಸ್ತಾನದಲ್ಲಿರುವ ಇಂಟರ್ಪೋಲ್ ನಿರ್ದೇಶಕರಿಗೆ ಈ ಮನವಿಯನ್ನು ಸಲ್ಲಿಸಿದೆ.

ಬೆನಜೀರ್ ಹತ್ಯೆ ಪ್ರಕರಣದ ಏಳು ಆರೋಪಿಗಳ ಪೈಕಿ ಮುಷರಫ್ ಕೂಡಾ ಒಬ್ಬರು ಎಂದು ಈಗಾಗಲೇ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು ಈಗಾಗಲೇ ಘೊಷಿಸಿದೆ. ಮುಷರಫ್ ಅವರ ಆಸ್ತಿ ಹಾಗೂ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಈಗಾಗಲೇ ನ್ಯಾಯಾಲಯ ಸೂಚನೆ ನೀಡಿದೆ.

ಒಂದೊಮ್ಮೆ ಇಂಟರ್ ಪೋಲ್ ನೋಟಿಸ್ ಜಾರಿಗೊಳಸಿದ್ದೇ ಆದಲ್ಲಿ ಮುಷರಫ್ ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಬಂಧಿಸಿ ಪಾಕಿಸ್ತಾನಕ್ಕೆ ಕರೆತರಬಹುದು ಎಂದು ಪಾಕಿಸ್ತಾನಿ ಅಧಿಕಾರಿಗಳು ತಿಳಿಸಿದ್ದಾರೆ. 2009ರಲ್ಲಿ ದೇಶ ಬಿಟ್ಟ ಮುಷರಫ್ ಲಂಡನ್ ಹಾಗೂ ದುಬೈನಲ್ಲಿ ನೆಲೆಸಿದ್ದಾರೆ. ಅವರ ವಿರುದ್ಧ ಈಗಾಗಲೇ ಹಲವು ಕ್ರಿಮಿನಲ್ ಹಾಗೂ ಸಿವಿಲ್ ಮೊಕದ್ದಮೆಗಳು ದಾಖಲಾಗಿವೆ.

ಈ ನಡುವೆ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿದರೂ ಮುಷರಫ್ ಅವರನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಲು ಹಿಂದೇಟು ಹಾಕಬಹುದು ಎಂದು ಮಾಧ್ಯಮ ವರದಿಗಳು ಹೇಳಿವೆ. ಹೆಸರು ಹೇಳಲು ಇಚ್ಛಿಸ ಬ್ರಿಟೀಷ್ ರಾಜತಾಂತ್ರಿಕರೊಬ್ಬರು ~ಬ್ರಿಟನ್ ನಲ್ಲಿ ಬೇರೆ ಬೇರೆ ರಾಷ್ಟ್ರಗಳ ಸಾಕಷ್ಟು ಮಂದಿ ವಾಸವಿರುವ ಹಲವರು ಅವರವರ ರಾಷ್ಟ್ರಗಳಿಗೆ ಬೇಕಾಗಿದ್ದಾರೆ. ಆದರೆ ಎಲ್ಲಿಯವರೆಗೆ ಅವರು ಬ್ರಿಟನ್ನಿನ ಕಾಯ್ದೆ ಕಾನೂನುಗಳಿಗೆ ಬದ್ಧರಾಗಿದ್ದಾರೋ ಅವಲ್ಲಿಯವರೆಗೆ ಅವರನ್ನು ಅವರ ರಾಷ್ಟ್ರಗಳಿಗೆ ಹಸ್ತಾಂತರಿಸಲಾಗದು. ಅದೂ ಅಲ್ಲದೆ ಮುಷರಫ್ ಬ್ರಿಟನ್ನಿನಲ್ಲಿ ವಾಸಿಸಲು ನಮ್ಮದೇನೂ ಅಭ್ಯಂತರವಿಲ್ಲ~ ಎಂದು ಹೇಳಿದ್ದಾರೆ ಎಂದು ವರದಿ ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.