ಮೂಗಿನಿಂದ ಟೈಪಿಂಗ್

ಕಂಪ್ಯೂಟರಿನ ಕೀಬೋರ್ಡ್ ಮೇಲೆ ಕೈ ಬೆರಳುಗಳು ವೇಗವಾಗಿ ಚಲಿಸಿದಷ್ಟು ಕೆಲಸ ಬಹುಬೇಗ ಸಾಗುತ್ತದೆ. ಕೇವಲ ಮೆಕಾನಿಕಲ್ ಆಗಿ ಕೈಯಲ್ಲಿ ಟೈಪ್ ಮಾಡುವುದಕ್ಕಿಂತ ಅದರಲ್ಲಿಯೂ ಪ್ರಯೋಗಶೀಲತೆಯನ್ನು ಹುಡುಕುವವರು ಹಲವರಿದ್ದಾರೆ.
ಅಂತವರಲ್ಲಿ ದೆಹಲಿಯ ವಿನೋದ್ ಕುಮಾರ್ ಚೌಧರಿ ಕೂಡ ಒಬ್ಬರು. ಇವರಿಗೆ ಟೈಪಿಂಗ್ ಮಾಡುವುದೆಂದರೆ ಎಲ್ಲಿಲ್ಲದ ಉತ್ಸಾಹ. ಅದರಲ್ಲಿ ವಿಭಿನ್ನವಾದುದ್ದೇನಾದರೂ ಸಾಧಿಸಬೇಕು ಎನ್ನುವ ಇವರ ಆಸೆಗೆ ನೆರವಾದ್ದದ್ದು ಇವರದೇ ಮೂಗು.
‘ಈಗಂತೂ ಕೈಬರಹಕ್ಕಿಂತ ಟೈಪಿಂಗ್ ಮುಖ್ಯವಾಗಿಬಿಟ್ಟಿದೆ. ಉದ್ಯೋಗದಲ್ಲಿ ಇದು ಮಹತ್ವದ ಸ್ಥಾನ ಪಡೆದಿದೆ. ಆದರೆ ನಾನು ಕೇವಲ ವೃತ್ತಿಯ ಉದ್ದೇಶದಿಂದ ಟೈಪಿಂಗ್ ಮಾಡುವುದಿಲ್ಲ. ತುಂಬಾ ಉತ್ಸಾಹದಿಂದ ಕೀಬೋರ್ಡ್ ಮೇಲೆ ಬೆರಳಾಡಿಸುತ್ತಿದ್ದೆ. ಇದರಲ್ಲಿ ಏನಾದರೂ ಹೊಸತನ್ನು ಮಾಡುವ ಹಂಬಲ ಉಂಟಾಯಿತು. ಹಾಗಾಗಿ ಮೂಗಿನಿಂದ ಟೈಪ್ ಮಾಡಲು ಪ್ರಯತ್ನಿಸಿದೆ’ ಎನ್ನುತ್ತಾರೆ ಇವರು.
ಕೈಯಿಂದ ಮಾತ್ರವಲ್ಲದೇ ಮೂಗಿನಿಂದಲೂ ವೇಗವಾಗಿ ಟೈಪ್ ಮಾಡಬಹುದು ಎಂದು ಸಾಬೀತು ಮಾಡಿರುವ ಇವರು ಪ್ರತಿದಿನ ನಾಲ್ಕು ಗಂಟೆ ಅಭ್ಯಾಸ ಮಾಡುತ್ತಿದ್ದರಂತೆ.
ನಲವತ್ತಾರು ಸೆಕೆಂಡುಗಳಲ್ಲಿ ನೂರಾಮೂರು ಅಕ್ಷರಗಳನ್ನು ಮೂಗಿನಿಂದ ಒತ್ತಿ ಗಿನ್ನಿಸ್ ದಾಖಲೆಯಲ್ಲಿ ಸ್ಥಾನ ಪಡೆದಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.