ಸ್ಟಾಕ್ಹೋಮ್, (ಎಪಿ):  ಮಾನವನ ಅನುಭೂತಿಗೆ ಬಾರದೆ ನಿರಂತರವಾಗಿ ನಡೆಯುತ್ತಿರುವ ಬ್ರಹ್ಮಾಂಡ ಬೆಳವಣಿಗೆ ಅಥವಾ ವಿಶ್ವದ ಹಿಗ್ಗುವಿಕೆಯಂತಹ ಕೌತುಕಮಯ ಪ್ರಕ್ರಿಯೆಯನ್ನು ತಿಳಿಸುವ ನಕ್ಷತ್ರ ಸ್ಫೋಟದ (ಸೂಪರ್ನೋವಾ) ಕುರಿತು ಅಧ್ಯಯನ ನಡೆಸಿದ ಅಮೆರಿಕದ ಮೂವರು ವಿಜ್ಞಾನಿಗಳಿಗೆ ಈ ಬಾರಿಯ ಭೌತಶಾಸ್ತ್ರ ನೊಬೆಲ್ ಪ್ರಶಸ್ತಿ ದೊರೆತಿದೆ.

ಅಮೆರಿಕದ ಭೌತ ವಿಜ್ಞಾನಿಗಳಾದ ಸೌಲ್ ಪರ್ಲ್ಮಟರ್, ಬ್ರಯಾನ್ ಸ್ಮಿತ್ ಮತ್ತು ಆಡಂ ರೈಸ್ ನೊಬೆಲ್ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ. ಪ್ರಶಸ್ತಿ ಜತೆ ನೀಡಲಾಗುವ 1.5 ಮಿಲಿಯನ್ ಡಾಲರ್ ಮೊತ್ತವನ್ನು ಮೂವರಿಗೂ ಸಮಾನವಾಗಿ ಹಂಚಲಾಗುವುದು. ಬ್ರಯಾನ್ ಅವರು ಮೂಲತಃ ಆಸ್ಟ್ರೇಲಿಯಾದ ವಿಜ್ಞಾನಿ.

52 ವರ್ಷದ ಸೌಲ್ ಪರ್ಲ್ಮಟರ್ ಅವರು ಬರ್ಕಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಖಗೋಳ ವಿಜ್ಞಾನ ವಿಭಾಗದ ಮುಖ್ಯಸ್ಥ. ಬ್ರಿಯಾನ್ ಆಸ್ಟ್ರೇಲಿಯಾದ ಪಶ್ಚಿಮ ಕ್ರೀಕ್ನಲ್ಲಿರುವ ರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ಸೂಪರ್ ನೋವಾ ಸಂಶೋಧನಾ ತಂಡದ ಮುಖ್ಯಸ್ಥ. ರೈಸ್ ಅವರು ಮೇರಿಲೆಂಡ್ನ ಬಾಲ್ಟಿಮೋರ್ನಲ್ಲಿರುವ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಮತ್ತು ಬಾಹ್ಯಾಕಾಶ ದೂರದರ್ಶಕ ವಿಜ್ಞಾನ ಸಂಸ್ಥೆಯಲ್ಲಿ ಖಗೋಳಶಾಸ್ತ್ರ ಪ್ರಧ್ಯಾಪಕರಾಗಿದ್ದಾರೆ.

14 ಬಿಲಿಯನ್ ವರ್ಷಗಳ ಹಿಂದೆ ನಡೆದಿದೆ ಎನ್ನಲಾದ `ಮಹಾಸ್ಫೋಟ~ದ (ಬಿಗ್ ಬ್ಯಾಂಗ್) ನಂತರದ ಘಟನಾವಳಿಗಳು ಹಾಗೂ ಸೂಪರ್ನೋವಾ ಕುರಿತು ಆಳವಾದ ಅಧ್ಯಯನ ನಡೆಸಿದ್ದಾರೆ. ಸುಮಾರು 50 ಸೂಪರ್ನೋವಾಗಳಿಂದ ಹೊರಹೊಮ್ಮುವ ಬೆಳಕು ಕಾಲ ಕ್ರಮೇಣ ಕ್ಷೀಣಿಸುತ್ತಿರುವುದಕ್ಕೆ ವಿಶ್ವದ ಹಿಗ್ಗುವಿಕೆಯೇ ಕಾರಣ ಎಂದು ಈ ಮೂವರು ಹೇಳಿದ್ದಾರೆ.

ಒಂದು ವೇಳೆ ಇದೇ ವೇಗದಲ್ಲಿ ಬ್ರಹ್ಮಾಂಡ ಬೆಳೆಯುತ್ತಾ ಹೋದಲ್ಲಿ ಮುಂದೊಂದು ದಿನ ಬೆಳಕು ಮತ್ತು ಶಾಖದ ಕೊರತೆಯಿಂದ ಅದು ದೊಡ್ಡ ಹಿಮಗಡ್ಡೆಯಾಗಿ ಪರಿವರ್ತನೆಯಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.