ಗುರುವಾರ , ಮೇ 13, 2021
36 °C

ಮೃತರ ಕುಟುಂಬದವರಿಂದ ಉಪವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ, (ಪಿಟಿಐ): ದಿವಂಗತ ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಹತ್ಯೆಗೈದ ಮೂವರಿಗೆ ಕ್ಷಮಾದಾನ ನೀಡಬೇಕೆಂಬ ಒತ್ತಾಯ ಕೇಳು ಬರುತ್ತಿರುವ ಮಧ್ಯೆಯೇ, ಹಂತಕರನ್ನು ಗಲ್ಲಿಗೇರಿಸುವಂತೆ ರಾಜೀವ್ ಜೊತೆ ಮೃತಪಟ್ಟ15 ಜನರ ಕುಟುಂಬದ ಸದಸ್ಯರು ಒತ್ತಾಯಿಸಿದ್ದಾರೆ.



ತಮ್ಮ ಕುಟುಂಬದವರನ್ನು ಹತ್ಯೆಗೈದ ಮುರುಗನ್, ಸಂತಾನ್ ಮತ್ತು ಪೇರ್ ಅರಿವಳನ್ ಅವರನ್ನು ಗಲ್ಲಿಗೇರಿಸಬೇಕು ಎಂಬುದು ಇವರ ಒತ್ತಾಯ. ಬಂಧುಗಳನ್ನು ಕಳೆದುಕೊಂಡ ಕುಟುಂಬದ ಸದಸ್ಯರು ಶುಕ್ರವಾರ ಕೈಗೊಂಡ ಒಂದು ದಿನದ ಉಪವಾಸ ಸತ್ಯಾಗ್ರಹದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅಪರಾಧಿಗಳಿಗೆ ಕ್ಷಮಾದಾನ ನೀಡುವುದನ್ನು ವಿರೋಧಿಸಿದರು.



ಕೇಂದ್ರದ ಮಾಜಿ ಸಚಿವ ಇವಿಕೆಎಸ್ ಇಳಂಗೋವನ್ ಮತ್ತು ಇತರ ಕಾಂಗ್ರೆಸ್ ನಾಯಕರೂ ಪಾಲ್ಗೊಂಡಿದ್ದರು. ಮೂವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸುವುದನ್ನು ರಾಷ್ಟ್ರಪತಿ ಮರುಪರಿಶೀಲಿಸುವಂತೆ ಕೋರಿ ತಮಿಳುನಾಡು ವಿಧಾನಸಭೆ ಆಗಸ್ಟ್ 30ರಂದು ಸರ್ವಾನುಮತದ ಗೊತ್ತುವಳಿ ಅಂಗೀಕರಿಸಿತ್ತು.



ಅದೇ ದಿನ ಮದ್ರಾಸ್ ಹೈಕೋರ್ಟ್ ಅಪರಾಧಿಗಳಿಗೆ ಮರಣದಂಡನೆ ನೀಡುವುದಕ್ಕೆ 8 ವಾರಗಳ ಕಾಲ ತಡೆಯಾಜ್ಞೆ ನೀಡಿತ್ತು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.