ಮಂಗಳವಾರ, ಆಗಸ್ಟ್ 4, 2020
24 °C

ಮೆಗಾಸಿಟಿ ಪ್ರಕರಣ: ಯೋಗೇಶ್ವರ್ ಬಂಧನಕ್ಕೆ ವಾರೆಂಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಗಾಸಿಟಿ ಪ್ರಕರಣ: ಯೋಗೇಶ್ವರ್ ಬಂಧನಕ್ಕೆ ವಾರೆಂಟ್

ಬೆಂಗಳೂರು: ಮೆಗಾಸಿಟಿ ಡೆವಲಪರ್ಸ್ ಅಂಡ್ ಬಿಲ್ಡರ್ಸ್‌ ಲಿಮಿಟೆಡ್‌ನ (ಎಂಡಿಬಿಎಲ್) ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಸಚಿವ ಸಿ.ಪಿ.ಯೋಗೀಶ್ವರ್ ಅವರಿಗೆ ನಗರದ ಒಂದನೇ ಎಸಿಎಂಎಂ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿ ಆದೇಶ ಹೊರಡಿಸಿದೆ.ಎಂಡಿಬಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಯೋಗೀಶ್ವರ್ ವಿರುದ್ಧದ ಒಂದು ಪ್ರಕರಣ ಮತ್ತು ಯೋಗೀಶ್ವರ್ ಸೇರಿದಂತೆ ಅವರ ಪತ್ನಿ ಎನ್.ಮಂಜುಕುಮಾರಿ, ಕಂಪೆನಿಯ ಅಧ್ಯಕ್ಷ ಅರುಣ್ ಚರಂತಿಮಠ್ ಮತ್ತು ಅವರ ಪತ್ನಿ ಸುಜಾತಾ ಚರಂತಿಮಠ್ ಅವರ ಮತ್ತೊಂದು ಪ್ರಕರಣಗಳ ವಿಚಾರಣೆಗೆ ಯೋಗೀಶ್ವರ್, ಜೂ 30ರಂದು ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಅವರು ಹಾಜರಾಗದ ಹಿನ್ನೆಲೆಯಲ್ಲಿ ನಗರದ ಒಂದನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರು ಯೋಗೀಶ್ವರ್ ಬಂಧನಕ್ಕೆ ವಾರೆಂಟ್ ಜಾರಿ ಮಾಡಿ ಆದೇಶ ಹೊರಡಿಸಿದರು.1994ರ ಆಗಸ್ಟ್‌ನಲ್ಲಿ ಎಂಟಿಬಿಎಲ್ ಸಂಸ್ಥೆಆರಂಭಿಸಿದ್ದ ಯೋಗೀಶ್ವರ್ ಮತ್ತು ಇತರೆ ಆರೋಪಿಗಳು, ನಿವೇಶನ ನೀಡುವ ನೆಪದಲ್ಲಿ ಸುಮಾರು 60 ಕೋಟಿ ರೂ. ವಂಚನೆ ಮಾಡಿದ್ದಾರೆ. ಆ ಮೂಲಕ ಆರೋಪಿಗಳು ಹೂಡಿಕೆದಾರರ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.ನಿವೇಶನ ಹಾಗೂ ಫ್ಲಾಟ್‌ಗಳನ್ನು ನೀಡುವುದಾಗಿ ನಂಬಿಸಿ ಸುಮಾರು 9,600 ಜನರಿಂದ ಹಣ ಪಡೆದು ವಂಚಿಸಿದ್ದಾರೆ. ಅಲ್ಲದೇ ಕಂಪೆನಿ ಕಾಯ್ದೆಗಳನ್ನು ಸಹ ಉಲ್ಲಂಘಿಸಿದ್ದಾರೆ. ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಲಾಗಿದೆ ಎಂಬ ಆರೋಪ ಯೋಗೀಶ್ವರ್ ಮತ್ತು ಅವರ ಕುಟುಂಬದವರ ಮೇಲಿದೆ.ಆರೋಪಿಗಳ ವಿರುದ್ಧ ವಂಚನೆ, ನಂಬಿಕೆ ದ್ರೋಹ, ನಕಲಿ ದಾಖಲೆ ಪತ್ರಗಳ ಸೃಷ್ಟಿ, ಸುಳ್ಳು ಮಾಹಿತಿ ನೀಡಿ ವಂಚನೆ, ಸಾರ್ವಜನಿಕರ ಹಣದ ದುರ್ಬಳಕೆ ಮತ್ತಿತರ ಆರೋಪಗಳಿಗೆ ಸಂಬಂಧಿಸಿದಂತೆ ಹಾಗೂ ಕಂಪೆನಿ ವ್ಯವಹಾರಗಳ ಕಾಯ್ದೆ ಉಲ್ಲಂಘನೆ ಸಂಬಂಧ ಪ್ರಕರಣ ದಾಖಲಾಗಿದ್ದವು.`ಪ್ರಕರಣದ ವಿಚಾರಣೆಯನ್ನು ಕೋರ್ಟ್ ನವೆಂಬರ್ 7ಕ್ಕೆ ಮುಂದೂಡಿದೆ. ಯೋಗೀಶ್ವರ್ ಅವರು ಶಾಸಕ ಮತ್ತು ಸಚಿವರಾಗಿರುವುದರಿಂದ ಅವರನ್ನು ಬಂಧಿಸಲು ಪೊಲೀಸರು ಸ್ಪೀಕರ್ ಅನುಮತಿ ಪಡೆಯಬೇಕು~ ಎಂದು ಕೇಂದ್ರ ಕಂಪೆನಿ ವ್ಯವಹಾರಗಳ ಸಚಿವಾಲಯದ ಗಂಭೀರ ವಂಚನೆ ಪ್ರಕರಣಗಳ ತನಿಖಾ ಸಂಸ್ಥೆಯ (ಎಸ್‌ಎಫ್‌ಐಒ) ಪರ ವಕೀಲ ಪುಟ್ಟಸಿದ್ದಯ್ಯ `ಪ್ರಜಾವಾಣಿ~ಗೆ ತಿಳಿಸಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.