ಬೆಂಗಳೂರು: ಸಂಪಿಗೆ ರಸ್ತೆಯಿಂದ ಪೀಣ್ಯವರೆಗೆ ಶನಿವಾರದಿಂದ ಸಾರ್ವಜನಿಕ ಸೇವೆಗೆ ಮುಕ್ತವಾಗಿರುವ ‘ನಮ್ಮ ಮೆಟ್ರೊ’ ರೈಲು ಸಂಚಾರಕ್ಕೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

‘ಪ್ರಯಾಣ ಆರಂಭಿಸಿದ ಮೊದಲ ದಿನವೇ ಬೆಳಿಗ್ಗೆಯಿಂದ ಜನರು ಸಾಕಷ್ಟು ಸಂಖ್ಯೆಯಲ್ಲಿ ಮೆಟ್ರೊದಲ್ಲಿ ಪ್ರಯಾಣಿಸಲು ಬರುತ್ತಿದ್ದರು. ಸಂಜೆ 5 ಗಂಟೆಯವರೆಗೆ 25 ಸಾವಿರ ಮಂದಿ ಪ್ರಯಾಣಿಸಿದ್ದಾರೆ’ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೆಟ್ರೊ ರೈಲಿನ ಒಳಗೆ ಸ್ವಚ್ಛತೆ ಕಾಪಾಡಲು ಮತ್ತು ನೆಲ ಹಾಳಾಗುವುದನ್ನು ತಡೆಯಲು ಒಬ್ಬ ಪ್ರಯಾಣಿಕರು 15 ಕೆ.ಜಿ ವರೆಗೆ ಮಾತ್ರ ವಸ್ತುಗಳನ್ನು ತೆಗೆದುಕೊಂಡು ಹೋಗಲು ಮಿತಿ ನಿಗದಿಪಡಿಸಲಾಗಿದೆ. ಇದಕ್ಕಿಂತ ಹೆಚ್ಚು ಭಾರದ ವಸ್ತುಗಳನ್ನು ಮೆಟ್ರೊದಲ್ಲಿ ಸಾಗಿಸಿದರೆ ಉಳಿದ ಪ್ರಯಾಣಿಕರಿಗೆ ತೊಂದರೆ ಆಗುವುದರಿಂದ ಈ ಮಿತಿ ನಿಗದಿಗೊಳಿಸಲಾಗಿದೆ ತಿಳಿಸಿದರು.

ಕುಟುಂಬ ಸಮೇತರಾಗಿ ಮೆಟ್ರೊ ಪ್ರಯಾಣದ ಮಜಾ ಅನುಭವಿಸಲು ಜನರು ಪೀಣ್ಯವರೆಗೆ ಹೋಗಿ ವಾಪಸ್ಸು ಬರುತ್ತಿದ್ದರು. ಆಸನಗಳು ಭರ್ತಿಯಾಗಿದ್ದರೂ ಜನರು ನಿಂತುಕೊಂಡೇ ಪ್ರಯಾಣಿಸುತ್ತಿದ್ದುದು ಜನರ ಉತ್ಸಾಹವನ್ನು ತೋರಿಸುತ್ತಿತ್ತು.ಮಕ್ಕಳು ಮೆಟ್ರೊ ರೈಲಿನಿಂದ ನಗರವನ್ನು ನೋಡಿ ಖುಷಿ ಪಡುತ್ತಿದ್ದರು. ಮಳೆಬರುತ್ತಿದ್ದುದನ್ನು ಲೆಕ್ಕಿಸದೆ ಪ್ರಯಾಣಿಕರು ಮೆಟ್ರೊದತ್ತ ಧಾವಿಸುತ್ತಿದ್ದರು. ನಿಲ್ದಾಣಗಳಲ್ಲಿ ಮೇಲ್ಚಾವಣಿ ನಿರ್ಮಾಣ ಕಾಮಗಾರಿ ಅಪೂರ್ಣವಾಗಿದೆ. ಸಂಜೆ ಮಳೆ ಬಂದಿದ್ದರಿಂದ ನೀರು ಸೋರಿ ಪ್ರಯಾಣಿಕರು ಪರದಾಡುತ್ತಿರುವುದು ಕಂಡು ಬಂತು.

ಪ್ರಯಾಣಿಕರ ಪ್ರತಿಕ್ರಿಯೆಗಳು

ಭಾರದ ಮಿತಿ ಹೆಚ್ಚಿಸಿ
ಈ ಭಾಗದಲ್ಲಿ ಮೆಟ್ರೊ ಸೇವೆ ಆರಂಭವಾಗಿರುವುದು ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗಿದೆ. ರೈಲಿನಲ್ಲಿ 15 ಕೆ.ಜಿ.ವರೆಗೆ ಮಾತ್ರ ವಸ್ತುಗಳನ್ನು ತೆಗೆದುಕೊಂಡು ಹೋಗಲು ಮಿತಿ ನಿಗದಿಪಡಿಸಲಾಗಿದೆ. ಪ್ರಯಾಣಿಕರು ಇತರ ಸ್ಥಳಗಳಿಗೆ ತೆರಳುವಾಗ, ಮಾರುಕಟ್ಟೆಗೆ ಹೋಗುವಾಗ ಹೆಚ್ಚು ಭಾರ ಇರುವ ವಸ್ತುಗಳನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ. ಆದ್ದರಿಂದ ಮಿತಿಯನ್ನು ಹೆಚ್ಚಿಸಬೇಕು.
–ಶ್ರೀಕಾಂತ್ ಎಂಜಿನಿಯರ್, ಬಸವೇಶ್ವರನಗರ

ಟ್ರಾಫಿಕ್ ಕಿರಿಕಿರಿ ಇರುವುದಿಲ್ಲ
ಮೆಟ್ರೊ ಸೇವೆ ಆರಂಭ ಆಗಿರುವುದು ವಾಹನ ದಟ್ಟಣೆ ಇಲ್ಲದೆ ಬೇಗ ತಲುಪಬಹುದು. ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಮಾಲಿನ್ಯವೂ ಇರುವುದಿಲ್ಲ.
–ಐಶ್ವರ್ಯ ಎಂಜಿನಿಯರಿಂಗ್ ವಿದ್ಯಾರ್ಥಿನಿ, ಮಹಾಲಕ್ಷ್ಮಿ ಲೇಔಟ್

ಸಮಯ ಉಳಿತಾಯ
ಪೀಣ್ಯದಿಂದ ಸಂಪಿಗೆ ರಸ್ತೆಗೆ 19 ನಿಮಿಷದಲ್ಲಿ ಬಂದಿದ್ದೇವೆ. ಮಹಾಲಕ್ಷ್ಮಿ ಲೇಔಟ್, ರಾಜಾಜಿನಗರದಲ್ಲಿ ಸಂಬಂಧಿಕರಿದ್ದಾರೆ. ಈ ಎಲ್ಲ ಕಡೆಗೂ ಸುಲಭವಾಗಿ ಸಂಚರಿಸಬಹುದಾಗಿದೆ.
–ಆರತಿ ಸಂತೋಷ್ ಗೃಹಿಣಿ, ಲಗ್ಗೆರೆ

ಕಾಮಗಾರಿ ಪೂರ್ಣಗೊಳ್ಳಬೇಕು
ನಗರದ ಇನ್ನೂ ಹಲವು ಭಾಗಗಳಲ್ಲಿ ಮೆಟ್ರೊ ಕಾಮಗಾರಿ ಪ್ರಗತಿಯಲ್ಲಿದೆ. ಎಲ್ಲ ಕಡೆಗೂ ಕಾಮಗಾರಿ ಪೂರ್ಣಗೊಂಡರೆ ಜನರಿಗೆ ಹೆಚ್ಚು ಅನುಕೂಲವಾಗುತ್ತದೆ. ಈ ಸೇವೆಯಿಂದಾಗಿ ಹೆಚ್ಚು ಸಮಯ ಉಳಿತಾಯವಾಗುತ್ತದೆ.
–ನಂದಿನಿ ಸಾಫ್ಟ್ವೇರ್ ಎಂಜಿನಿಯರ್, ಯಲಹಂಕ

ಹುಬ್ಬಳ್ಳಿಯಿಂದ ಬಂದೆ
ಎಂ.ಜಿ.ರಸ್ತೆಯಲ್ಲಿ ಮೆಟ್ರೊ ಸೇವೆ ಆರಂಭವಾದಾಗ ಬರಲು ಸಾಧ್ಯವಾಗಿರಲಿಲ್ಲ. ವಿದೇಶದಲ್ಲಿ ಇಂತಹ ಸೇವೆ ಇರುವುದನ್ನು ನೋಡಿದ್ದೇವೆ. ಈ ಸೇವೆ ಸಿಗುತ್ತಿರುವುದು ಖುಷಿ ತಂದಿದೆ. ಹುಬ್ಬಳ್ಳಿಯಿಂದ ಮೆಟ್ರೊ ನೋಡಲು ಬಂದಿದ್ದೇನೆ.
–ಕೃಷ್ಣ ಖಾಸಗಿ ಉದ್ಯೋಗಿ.

ಸುಲಭವಾಗಿ ತಲುಪಬಹುದು
ನಗರದಲ್ಲಿ ಮೊದಲು ಮೆಟ್ರೊ ಸೇವೆ ಆರಂಭವಾದಾಗ ಪ್ರಯಾಣಿಸಿದ್ದೆ. ಈ ಸೇವೆಯಿಂದಾಗಿ ನಗರದ ವಿವಿಧ ಸ್ಥಳಗಳಿಗೆ ಬೇಗ ತಲುಪಬಹುದಾಗಿದೆ. ಮೆಟ್ರೊ ಪ್ರಯಾಣ ದರವನ್ನು ಇನ್ನಷ್ಟು ಕಡಿಮೆ ಮಾಡಿದರೆ ಹೆಚ್ಚು ಅನುಕೂಲವಾಗುತ್ತದೆ
–ಶ್ರೀನಿವಾಸ್ ಉಪನ್ಯಾಸಕ, ಬಸವೇಶ್ವರನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.