ಮೆಟ್ರೊ ಯೋಜನೆಗೆ ರೂ 700 ಕೋಟಿ ಹುಡ್ಕೊ ಸಾಲ
ಬೆಂಗಳೂರು: `ನಮ್ಮ ಮೆಟ್ರೊ~ ಯೋಜನೆಗೆ 700 ಕೋಟಿ ರೂಪಾಯಿ ಸಾಲ ನೀಡಲು ಕೇಂದ್ರ ಸರ್ಕಾರದ ಅಂಗಸಂಸ್ಥೆ `ಹುಡ್ಕೊ~ ಮುಂದೆ ಬಂದಿದೆ. ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್ಸಿಎಲ್) ಮತ್ತು ಹುಡ್ಕೊ ಅಧಿಕಾರಿಗಳು ಈ ಕುರಿತ ಒಪ್ಪಂದಕ್ಕೆ ಶೀಘ್ರ ಸಹಿ ಹಾಕಲಿದ್ದಾರೆ.
ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ನಗರಾಭಿವೃದ್ಧಿ ಸಚಿವ ಎಸ್.ಸುರೇಶ್ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ, ರಾಜ್ಯ ಸರ್ಕಾರದ ನವದೆಹಲಿಯ ವಿಶೇಷ ಪ್ರತಿನಿಧಿ ಧನಂಜಯ ಕುಮಾರ್ ಅವರು ಹುಡ್ಕೊ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ಶನಿವಾರ ನವದೆಹಲಿಯಲ್ಲಿ ನಡೆಸಿದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.
ರಾಜ್ಯದ 1,437 ಯೋಜನೆಗಳಿಗೆ ಹುಡ್ಕೊ ಸಂಸ್ಥೆ 71,026 ಕೋಟಿ ರೂಪಾಯಿ ಮೊತ್ತದ ನೆರವು ನೀಡಿದೆ. ಇದರಲ್ಲಿ 14,779 ಕೋಟಿ ರೂಪಾಯಿಗಳ ಸಾಲವೂ ಸೇರಿದೆ ಎಂದು ಪ್ರಕಟಣೆ ತಿಳಿಸಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.