ಪಿಯಾಂಗ್ಯಾಂಗ್ (ಐಎಎನ್ಎಸ್): ಉತ್ತರ ಕೊರಿಯಾ ವಿವಿಧ ವಿಷಯಗಳಿಗೆ ಸಂಬಂಧಿಸಿ ದಕ್ಷಿಣ ಕೊರಿಯಾದೊಂದಿಗೆ ಗುರುವಾರ ಮಾತುಕತೆ ಪ್ರಸ್ತಾವ ಮುಂದಿಟ್ಟಿದೆ.

ಈ ಪ್ರಸ್ತಾವಕ್ಕೆ ದಕ್ಷಿಣ ಕೊರಿಯಾ ಒಪ್ಪಿಗೆ ಸೂಚಿಸಿದ್ದು, ಮಾತುಕತೆಗೆ ತಾನು ಸಿದ್ಧ ಎಂದು ಹೇಳಿದೆ. `ಕೆಸಾಂಗ್ ಕೈಗಾರಿಕಾ ವಲಯದಲ್ಲಿ ಎಂದಿನ ಕಾರ್ಯಚಟುವಟಿಕೆ ನಡೆಸಲು ಹಾಗೂ ಮೌಂಟ್ ಕುಮಾಂಗ್ ಪ್ರವಾಸಕ್ಕೆ ಮರುಚಾಲನೆ ನೀಡಲು ನಾವು ದಕ್ಷಿಣ ಕೊರಿಯಾ ಹಾಗೂ ಉತ್ತರ ಕೊರಿಯಾ ಅಧಿಕಾರಿಗಳೊಂದಿಗೆ ಮಾತುಕತೆ ಪ್ರಸ್ತಾವ ಮುಂದಿಟ್ಟಿದ್ದೇವೆ' ಎಂದು ಶಾಂತಿಯುತ ಮರು ಏಕೀಕರಣಕ್ಕೆ ಸಂಬಂಧಿಸಿದ ಉತ್ತರ ಕೊರಿಯಾ ಸಮಿತಿ ಹೇಳಿದೆ.

2000ರ ಜೂನ್ 15ರಂದು ನಡೆದ ಐತಿಹಾಸಿಕ ಶೃಂಗಸಭೆಯಲ್ಲಿ ಮಾಡಿದ `ಜಂಟಿ ಘೋಷಣೆ'ಯ 13ನೇ ವರ್ಷಾಚರಣೆ ಪ್ರಯುಕ್ತ ಉತ್ತರ ಕೊರಿಯಾ ಈ ಪ್ರಸ್ತಾವ ಮುಂದಿಟ್ಟಿದೆ. ಈ ಘೋಷಣೆಯು ಉಭಯ ದೇಶಗಳ ನಡುವೆ ಮರು ಮೈತ್ರಿಗೆ ಮುನ್ನುಡಿ ಬರೆದಿತ್ತು. ಅಲ್ಲದೇ ದ್ವಿಪಕ್ಷೀಯ ಸಹಕಾರ ಹಾಗೂ ಆರ್ಥಿಕ ಸಂಬಂಧ ವೃದ್ಧಿಗೂ ದಾರಿ ಮಾಡಿಕೊಟ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.