ಆಮದು ನಟಿಯರಿಂದ ತುಂಬಿ ತುಳುಕುವ ಕನ್ನಡ ಚಿತ್ರರಂಗದ ಇವತ್ತಿನ ಸಂದರ್ಭದಲ್ಲಿ ಮೇಘ ಬಂತು ಮೇಘ ಎಂದು ಈಕೆಯನ್ನು ಸ್ವಾಗತಿಸುವಂತಿಲ್ಲ. ಮೇಘನಾ ರಾಜ್ ಈ ನೆಲದ ಹುಡುಗಿ. ತಾರಾಜೋಡಿ ಸುಂದರ ರಾಜ್ - ನಟಿ ಪ್ರಮೀಳಾ ಜೋಷಾಯ್ ಅವರ ಪುತ್ರಿ. ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡರೂ ಕನ್ನಡದಲ್ಲಿ ಅವಕಾಶಗಳು ಸಿಗದೇ ಇರುವ ವಿಷಾದ ಆಕೆಯದು. ಮೇಘನಾ ನಟಿಯಾಗುವ ಕನಸು ಕಂಡವರಲ್ಲ. ಆದರೆ ಕೆ.ಬಾಲಚಂದರ್ ಅವರಂಥ ನಿರ್ದೇಶಕರಿಂದ ಕರೆಬಂದಾಗ ಒಲ್ಲೆ ಅನ್ನಲಾಗಲಿಲ್ಲ. ಬಾಲಚಂದರರ `ಕೃಷ್ಣಲೀಲೆ~ ಚಿತ್ರದಲ್ಲಿ ನಟಿಸಿದ ಮೇಘನಾಗೆ, `ಈ ಹುಡುಗಿ ಚೆಂದ ನಟಿಸುತ್ತಾಳೆ. ಅವಳಿಗೆ ಮತ್ತಷ್ಟು ದೃಶ್ಯಗಳಲ್ಲಿ ನಟಿಸಲು ಅವಕಾಶ ಕೊಡಬೇಕು~ ಎಂದು ಹೇಳಿಸಿಕೊಂಡಿದ್ದು ದೊಡ್ಡ `ಕ್ರೆಡಿಟ್~ ಎನಿಸಿದೆ. `ಸಿನಿಮಾ ರಂಜನೆ~ ಜೊತೆ ಮಾತನಾಡಿದ ಅವರ ಮಾತುಗಳಲ್ಲಿ ಸ್ಪಷ್ಟವಾಗಿ ಕಾಣಿಸಿದ್ದು- ಕಲಿಯುವುದು ಸಾಕಷ್ಟಿದೆ ಎನ್ನುವ ವಿನಯ.

`ಕೃಷ್ಣಲೀಲೆ~ ನಂತರದ ಸಿನಿಮಾ ಅವಕಾಶಗಳು ಹೇಗಿದ್ದವು?
`ಕೃಷ್ಣಲೀಲೆ~ ಕಾರಣಾಂತರಗಳಿಂದ ಬಿಡುಗಡೆಯಾಗಲಿಲ್ಲ. ಅದರ ನಂತರ ನಟಿಸಿದ ತೆಲುಗಿನ `ಬೆಂಡು ಅಪ್ಪಾರಾವ್ ಆರ್ಎಂಪಿ~ ಚಿತ್ರ ಮೊದಲು ಬಿಡುಗಡೆಯಾಗಿ, ನನ್ನ ಮೊದಲ ಚಿತ್ರವಾಯಿತು. ನಂತರ ತೆಲುಗು, ತಮಿಳಿನಿಂದ ಅವಕಾಶಗಳು ಬರತೊಡಗಿದವು. ನಡುವೆಯೇ ಕನ್ನಡದ `ಪುಂಡ~ದಲ್ಲಿ ನಟಿಸಲು ಕರೆ ಬಂತು. ಅದರಲ್ಲಿ ನಟಿಸುವಾಗ ಕನ್ನಡದಿಂದ ಅವಕಾಶ ಬಂದವು. ಆದರೆ ಅವು ನಾನು ಮಾಡುವಂಥ ಪಾತ್ರಗಳು ಎನಿಸಲೇ ಇಲ್ಲ. ಮಲಯಾಳಂನಿಂದ ಬಂದ ಅವಕಾಶಗಳತ್ತ ಮುಖ ಮಾಡಿದೆ. ಅಲ್ಲಿ ನನಗೀಗ ಪ್ರಮುಖ ಸ್ಥಾನ ಸಿಕ್ಕಿದೆ. ನನಗಾಗಿಯೇ ಕತೆ ಸಿದ್ಧಪಡಿಸುವಷ್ಟು ನಾನು ಹೆಸರು ಮಾಡಿರುವೆ. ಆದರೂ ಕನ್ನಡದಲ್ಲಿ ಅವಕಾಶಗಳಿಲ್ಲ ಎಂಬ ಬೇಸರವಿದೆ.

ಕನ್ನಡದಲ್ಲಿಯೇ ಮೊದಲು ನಟಿಸಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲವೇನೋ?
ಬಾಲಚಂದರ್ ಅವರಂಥ ನಿರ್ದೇಶಕರು ಕರೆದಾಗ ಬೇಡ ಎನ್ನಲು ಆಗಲಿಲ್ಲ. ಕಲಾವಿದರಿಗೆ ಭಾಷೆ ಮುಖ್ಯ ಅಲ್ಲವೇ ಅಲ್ಲ.

ರೀಮೇಕ್ ಸಿನಿಮಾದ ಮೂಲಕ ಕನ್ನಡದಲ್ಲಿ ಪರಿಚಯವಾಗಿದ್ದು ತಪ್ಪಾಯಿತೇ?
ದೊಡ್ಡ ದೊಡ್ಡ ಕಲಾವಿದರೇ ರೀಮೇಕ್ನಲ್ಲಿ ನಟಿಸುತ್ತಿದ್ದಾರೆ. ಅದರಿಂದ ರೀಮೇಕ್ ದೊಡ್ಡ ತಪ್ಪು ಎನಿಸುತ್ತಿಲ್ಲ.

ಹಾಗಾದರೆ ಕನ್ನಡದಲ್ಲಿ ಅವಕಾಶಗಳ ಕೊರತೆಗೆ ಕಾರಣವೇನು?
ನನ್ನಂಥ ಕಲಾವಿದರ ಮಕ್ಕಳಿಗೆ ಇಲ್ಲಿ ಪ್ರೋತ್ಸಾಹ ಇಲ್ಲ. ಬೇಡಿಕೆಯಲ್ಲಿ ಇರುವ ಕನ್ನಡ ಚಿತ್ರರಂಗದ ಪ್ರಮುಖ ನಾಯಕರು ನಮ್ಮಂಥ ನಾಯಕಿಯರನ್ನು ಬೆಂಬಲಿಸಬೇಕು. ನನಗೆ ನಟನೆ ಬರುವುದಿಲ್ಲವೇ? ನೃತ್ಯ ಬರುವುದಿಲ್ಲವೇ? ನನ್ನ ಪ್ರಕಾರ, ನಾನು ಕನ್ನಡ ಚೆನ್ನಾಗಿ ಮಾತಾಡುವುದೇ ಅವಕಾಶಗಳು ಸಿಗದಿರಲು ಕಾರಣ. ಕನ್ನಡ ಅರ್ಧಬರ್ಧ ಮಾತನಾಡುವ ನಾಯಕಿಯರಿಗೆ ಇಲ್ಲಿ ಬೆಲೆ. ಮೋಹನ್ ಲಾಲ್, ಮುಮ್ಮಟ್ಟಿ ಅವರಂಥ ನಟರೊಂದಿಗೆ ನಟಿಸಿರುವೆ. ಅವರಿಗೆ ಕಾಣದ ಕೊಂಕು ಇಲ್ಲಿಯವರಿಗೆ ಏನು ಕಾಣಿಸುತ್ತಿದೆ. `ಪುಂಡ~ದಲ್ಲಿ ನಟಿಸುವಾಗ ನಾನು ದಪ್ಪ ಎಂದರು. ಇದೀಗ ನಾನು ವೃತ್ತಿಯನ್ನು ಗಂಭೀರವಾಗಿ ಪರಿಗಣಿಸಿ ಸಣ್ಣಗಾಗಿರುವೆ.

ನಿಮಗೆ ಎಂಥ ಪಾತ್ರ ಬೇಕು?
ನನ್ನ ಪಾತ್ರಕ್ಕೆ ಪ್ರಾಮುಖ್ಯತೆ ಇರಬೇಕು. ನಾನು ನಟಿಸುವ ಚಿತ್ರಗಳ ನಾಯಕ, ನಿರ್ದೇಶಕ ನನಗೆ ಮುಖ್ಯ.

ನಿಮ್ಮದೇ ಬ್ಯಾನರ್ ಇದೆಯಲ್ಲಾ, ಆ ಮೂಲಕ ನೀವೇ ಸಿನಿಮಾ ಮಾಡಬಹುದಲ್ಲವೇ?
ಹೌದು. `ತಾಯಿ~ ನಂತರ ಯಾವುದೇ ಸಿನಿಮಾ ನಿರ್ಮಿಸಲಿಲ್ಲ. ಈ ವರ್ಷ ಹೊಸ ಸಿನಿಮಾ ಮಾಡಬೇಕೆಂದಿದ್ದೇವೆ. ಕತೆ ಸಿದ್ಧವಾಗಿದೆ. ನಿರ್ದೇಶಕರು ಒಪ್ಪಿದರೆ ನಾನೇ ನಾಯಕಿಯಾಗಬಹುದು.

ನಾಗಶೇಖರ್ ಅವರ `ಮೈನಾ~ ಚಿತ್ರದಿಂದ ಹೊರಬರಲು ಕಾರಣ?
`ಮೈನಾ~ ಸಿನಿಮಾವನ್ನು ಒಪ್ಪಿಕೊಂಡಿದ್ದೆ. ಇದೀಗ ಮಾಡುತ್ತಿಲ್ಲ. ಅದಕ್ಕೆ ಕಾರಣವನ್ನು ನಾಗಶೇಖರ್ ಹೇಳಬೇಕು.

ಮಲಯಾಳಂನ `ಬ್ಯೂಟಿಫುಲ್~ ಚಿತ್ರದ ಯಶಸ್ಸು ಹೇಗನಿಸುತ್ತಿದೆ?
ಚಿತ್ರದಲ್ಲಿ ನನ್ನದು ನೆಗೆಟಿವ್ ಪಾತ್ರ. ಗ್ಲಾಮರಸ್ ಆಗಿದೆ. ನೋಡಲು ಸಿಂಪಲ್ ಅನಿಸಿದರೂ ಚಾಲೆಂಜಿಂಗ್ ಪಾತ್ರ ಅದು. ಸಿನಿಮಾ 100 ದಿನ ಓಡಿದೆ.

ಗ್ಲಾಮರ್ ಅಂದ್ರೆ?
ಮೇಕಪ್ ತೆಗೆದ ತಕ್ಷಣ ಗ್ಲಾಮರ್ರಹಿತ ಅನ್ನೋಕಾಗಲ್ಲ. ತೆರೆ ಮೇಲೆ ಚೆನ್ನಾಗಿ ಕಾಣೋದೇ ಗ್ಲಾಮರ್. ತೆರೆಯ ಮೇಲೆ ಚೆಂದ ಕಾಣದೇ ಕೇವಲ ಎಕ್ಸ್ಪೋಸ್ ಮಾಡಲು ನನಗಿಷ್ಟವಿಲ್ಲ.

ನಿಮ್ಮ ವೃತ್ತಿ ಬದುಕಿಗೆ ಅಪ್ಪ-ಅಮ್ಮ ಕೊಡುವ ಸಲಹೆ?
ಅಮ್ಮ `ಚಿತ್ರರಂಗ ತುಂಬಾ ದೊಡ್ಡ ಕ್ಷೇತ್ರ. ಇಲ್ಲಿ ತಾಳ್ಮೆ ಇರಬೇಕು~ ಅಂತಾರೆ. ಅಪ್ಪ ಆರಂಭದಿಂದಲೂ ಎಲ್ಲಾ ಹಂತದಲ್ಲಿಯೂ ನನಗೆ ಮಾರ್ಗದರ್ಶಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.