ಭಾನುವಾರ, ಮೇ 16, 2021
26 °C

ಮೇಯರ್ ಆಯ್ಕೆ ಸಮಿತಿ: ಶಾಸಕರ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ಸಮಿತಿ ರಚಿಸಬೇಕೆನ್ನುವ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರ ನಿರ್ಧಾರಕ್ಕೆ ಬೆಂಗಳೂರು ನಗರದ ಶಾಸಕರಿಂದಲೇ ತೀವ್ರ ವಿರೋಧ ವ್ಯಕ್ತವಾಗಿದೆ. ಇದರಿಂದಾಗಿ ಮೇಯರ್ ಆಯ್ಕೆ ಕಗ್ಗಂಟಾಗುವ ಸಾಧ್ಯತೆ ಇದೆ.ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರ ಜತೆ ಗುರುವಾರ ರಾತ್ರಿ ಮಾತುಕತೆ ನಡೆಸಿದ್ದ ಈಶ್ವರಪ್ಪ ಅವರು ಮೇಯರ್ ಆಯ್ಕೆಗೆ ಸಮಿತಿ ರಚಿಸುವ ಇಂಗಿತ ವ್ಯಕ್ತಪಡಿಸಿದ್ದರು.ಈ ವಿಷಯ ಗೊತ್ತಾದ ನಂತರ ಶುಕ್ರವಾರ ಬೆಳಿಗ್ಗೆ ನಗರದ ಬಿಜೆಪಿ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗೃಹ ಸಚಿವ ಆರ್.ಅಶೋಕ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ `ಮೇಯರ್ ಆಯ್ಕೆ ಸ್ಥಳೀಯ ಶಾಸಕರ ತೀರ್ಮಾನದ ಪ್ರಕಾರ ಆಗಬೇಕು~ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ಎನ್ನಲಾಗಿದೆ.`ಯಾವುದೊ ಸಮಿತಿಯ ಸಲಹೆ ಕೇಳಿಕೊಂಡು ಮೇಯರ್ ಆಯ್ಕೆ ಮಾಡುವಂತಿಲ್ಲ. ಮೇಯರ್ ಯಾರಾಗಬೇಕು ಎಂಬುದನ್ನು ಸ್ಥಳೀಯ ಶಾಸಕರೇ ನಿರ್ಧರಿಸಬೇಕು. ಈ ವಿಷಯದಲ್ಲಿ ಎಲ್ಲ ಶಾಸಕರು ಒಗ್ಗಟ್ಟಿನಿಂದ ಇರಬೇಕು~ ಎನ್ನುವ ತೀರ್ಮಾನಕ್ಕೆ ಬಂದರು ಎಂದು ಗೊತ್ತಾಗಿದೆ.ಇದೇ 24ರಂದು ನಗರದ ಎಲ್ಲ ಶಾಸಕರು (ವಿಧಾನಸಭೆ, ವಿಧಾನ ಪರಿಷತ್ತಿನ ಸದಸ್ಯರು) ಮತ್ತು ಸಂಸದರು ಸಭೆ ಸೇರಿ ಮೇಯರ್ ಆಯ್ಕೆಯನ್ನು ಅಂತಿಮಗೊಳಿಸಲಿದ್ದಾರೆ. ಬಳಿಕ ಆ ಕುರಿತು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಮತ್ತು ಈಶ್ವರಪ್ಪ ಅವರ ಜತೆ ಚರ್ಚೆ ನಡೆಸಲಿದ್ದು, 25ರಂದು ಹೊಸ ಮೇಯರ್ ಆಯ್ಕೆ ವಿಷಯವನ್ನು ಪ್ರಕಟಿಸಲಿದ್ದಾರೆ. ಇದೇ 26ರಂದು ಚುನಾವಣೆ ನಡೆಯಲಿದೆ.ಶುಕ್ರವಾರ ನಡೆದ ಸಭೆಯಲ್ಲಿ ಶಾಸಕ ಅರವಿಂದ ಲಿಂಬಾವಳಿ ಮತ್ತು ನಗರವನ್ನು ಪ್ರತಿನಿಧಿಸುವ ಸಚಿವರು ಮಾತ್ರ ಗೈರುಹಾಜರಾಗಿದ್ದರು. ಉಳಿದಂತೆ ಎಲ್ಲ ಶಾಸಕರೂ ಹಾಜರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.