ಶನಿವಾರ, ಏಪ್ರಿಲ್ 17, 2021
31 °C

ಮೇಲುಕೋಟೆ: ವೈರಮುಡಿ ಉತ್ಸವಕ್ಕೆ ಕ್ಷಣಗಣನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಜಿಲ್ಲೆಯ ಪ್ರಮುಖ ಧಾರ್ಮಿಕ ಯಾತ್ರಾಸ್ಥಳ ಮೆಲುಕೋಟೆಯಲ್ಲಿ ಪ್ರಸಿದ್ಧ ವೈರಮುಡಿ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಮಂಗಳವಾರ ಸಂಜೆ ನಡೆಯುವ ಉತ್ಸವಕ್ಕೆ ವೇದಿಕೆ ಸಜ್ಜಾಗಿದೆ.ಉತ್ಸವ ಹಿನ್ನೆಲೆಯಲ್ಲಿ ಯಾತ್ರಾರ್ಥಿಗಳಿಗೆ ಮೂಲಸೌಕರ್ಯ ಒದಗಿಸುವ ಕಾರ್ಯ ನಡೆದಿದ್ದು, ಈ ಬಾರಿ ಮೇಲುಕೋಟೆಯ ಬೆಟ್ಟವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.ರಾಜ್ಯದ ವಿವಿಧ ಜಿಲ್ಲೆಗಳೇ ಅಲ್ಲದೇ, ಹೊರ ರಾಜ್ಯಗಳಿಂದಲೂ ಅಸಂಖ್ಯ ಭಕ್ತರನ್ನು  ವೈರಮುಡಿ ಉತ್ಸವ ಸೆಳೆಯಲಿದ್ದು, ಮೇಲು ಕೋಟೆಯ ಚಲುವನಾರಾಯಣ ಸ್ವಾಮೀಗೆ ವಿಶೇಷ ಪೂಜೆ ಸಲ್ಲಿಕೆಯಾಗಲಿದೆ. ಉತ್ಸವದ ಭಾಗವಾಗಿ ಜಾನಪದ ಕಲಾಪ್ರಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಕೂಡಾ ಭಕ್ತರು, ಪ್ರೇಕ್ಷಕರನ್ನು ಸೆಳೆಯಲಿವೆ.ಸೋಮವಾರ ವಿಶೇಷ ವಿದ್ಯುತ್ ದೀಪಾಲಂಕಾ ರವನ್ನು ಉದ್ಘಾಟಿಸಿದ ಸಂದರ್ಭದಲ್ಲಿ ಶಾಸಕ ಸಿ.ಎಸ್.ಪುಟ್ಟರಾಜು, ಮೈಷುಗರ್ ಅಧ್ಯಕ್ಷ ನಾಗ ರಾಜಪ್ಪ, ಕಾಡಾ ಆಧ್ಯಕ್ಷ ಡಿ.ರಾಮಲಿಂಗಯ್ಯ, ಜಿಪಂ ಸಿಇಒ ಜಿ. ಜಯರಾಂ ಮತ್ತು ಉಪ ವಿಭಾಗಾಧಿಕಾರಿ ಪ್ರಭು ಮತ್ತಿತರಿದ್ದರು.ಇಂದು ಗೃಹ ಸಚಿವರ ಭೇಟಿ

ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗೃಹ ಸಚಿವ ಆರ್. ಅಶೋಕ್ ಇದೇ 15ರಂದು  ಜಿಲ್ಲೆಗೆ ಭೇಟಿ  ನೀಡಲಿದ್ದು, ಸಂಜೆ 6ಕ್ಕೆ ಮೇಲುಕೋಟೆ ವೈರಮುಡಿ ಉತ್ಸವದಲ್ಲಿ ಭಾಗವಹಿಸುವರು ಎಂದು ಹೇಳಿಕೆ ತಿಳಿಸಿದೆ.ಮದ್ಯ ಮಾರಾಟ ನಿಷೇಧ: ವೈರಮುಡಿ ಬ್ರಹ್ಮೋತ್ಸವದ ಹಿನ್ನೆಲೆಯಲ್ಲಿ ಮೇಲುಕೋಟೆ ಆಸುಪಾಸಿನಲ್ಲಿ 5 ಕಿ.ಮೀ. ವ್ಯಾಪ್ತಿಯಲ್ಲಿ ಮಾ. 15ರ ಬೆಳಿಗ್ಗೆ 6 ರಿಂದ 16ರ ಸಂಜೆ 5 ಗಂಟೆಯವರೆಗೂ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.ಆಸುಪಾಸಿನ ಗ್ರಾಮಗಳ ವ್ಯಾಪ್ತಿಯಲ್ಲಿ ಎಲ್ಲ ಮದ್ಯದ ಅಂಗಡಿ ಬಂದ್ ಮಾಡಬೇಕು. ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿಕೆ ತಿಳಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.