ಮಂಗಳವಾರ, ಮಾರ್ಚ್ 2, 2021
30 °C

ಮೇಳೈಸಿದ ಸಂಗೀತದ ಕಂಪು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೇಳೈಸಿದ ಸಂಗೀತದ ಕಂಪು

ದಾನಚಿಂತಾಮಣಿ ಅತ್ತಿಮಬ್ಬೆ ವೇದಿಕೆ, ಲಕ್ಕುಂಡಿ: ‘ನಾನು ಬಡವಿ, ಆತ ಬಡವ, ಒಲವೇ ನಮ್ಮ ಬದುಕು. ಬಳಸಿಕೊಂಡೆವು ಅದನ್ನೇ ನಾವು......’ದ.ರಾ. ಬೇಂದ್ರೆ ರಚಿಸಿದ ಕವಿತೆಯನ್ನು ಗಾಯಕಿ ಸಂಗೀತ ಕಟ್ಟಿ ಹಾಡುತ್ತಿದ್ದರೆ ಸಭಾಂಗಣದಲ್ಲಿ ತುಂಬಿದ್ದ ಪ್ರೇಕ್ಷಕರು ತನ್ಮಯತೆಯಿಂದ ಸಂಗೀತ ಆಲಿಸುತ್ತಿದ್ದರು. ಲಕ್ಕುಂಡಿ ಉತ್ಸವ ಅಂಗವಾಗಿ ಭಾನುವಾರ ರಾತ್ರಿ ಅತ್ತಿಮಬ್ಬೆ ವೇದಿಕೆಯಲ್ಲಿ ಕಂಡು ಬಂದ ದೃಶ್ಯ. ಸಂಗೀತ ಕಟ್ಟಿ ಕಂಠಸಿರಿಗೆ ಪ್ರೇಕ್ಷಕರು ಮೂಕವಿಸ್ಮಿತರಾದರು. ಸಂಗೀತ ಅವರ ಗೀತೆಗೆ ಬಹುತೇಕರು ಕುಳಿತಲ್ಲೇ ಧನಿಗೂಡಿಸಿದರು.ಈ ಹಸಿರು ಸಿರಿಯಲಿ, ಮನಸ್ಸು ಮೆರೆಯಲಿ ನವಿಲೇ,  ನಿನ್ನಾಂಗೆಯೇ ಕುಣಿವೇ, ನಿನ್ನಂತೆಯೇ ನಲಿವೇ ನವಿಲೆ, ನವಿಲೇ....ಮೇರೆ ವತನ್‌ ಕೆ ಲೋಗ್‌.....ಗೀತೆಯನ್ನು ಪ್ರಸ್ತುತ ಪಡಿಸಿ ಪ್ರೇಕ್ಷಕರನ್ನು ರೋಮಾಂಚನಗೊಳಿಸಿ ದೇಶಭಕ್ತಿ ಎಲ್ಲರಲ್ಲಿ ಪುಟಿಯುವಂತೆ ಮಾಡಿದರು. 

ನಂತರ ಭುವನೇಶ್ವರದ ಪ್ರಿನ್ಸ್‌ ನೃತ್ಯ ತಂಡ ಪ್ರದರ್ಶಿಸಿದ ನೃತ್ಯ ಆಕರ್ಷಕವಾಗಿತ್ತು. ಮಹಾಭಾರತದ ಯುದ್ಧದಲ್ಲಿ ಅರ್ಜುನ ರಥದ ಸಾರಥಿಯಾಗಿದ್ದ ಪ್ರಸಂಗ ಹಾಗೂ ಪ್ರಭಾತ ಕಲಾವಿದರ ನೃತ್ಯ ನಾಟಕ ಗಮನ ಸೆಳೆಯಿತು. ವಿದ್ಯುತ್‌ ದೀಪಾಲಂಕಾರದ ಬೆಳಕಿನಲ್ಲಿ  ಹೊರಹೊಮ್ಮಿದ ಬೆಂಗಳೂರಿನ ಓಂಕಾರ ನೃತ್ಯ ತಂಡದ ನೃತ್ಯ ರೂಪಕಕ್ಕೆ ಎಲ್ಲರೂ ಮನಸೋತರು.ಹುಬ್ಬಳ್ಳಿಯ ಜ್ಯೋತಿ ಗಲಗಲಿ ಮತ್ತು ತಂಡ ಹಾಗೂ ಲಕ್ಕುಂಡಿಯ ಅಲ್ಲಮಪ್ರಭು ಭಜನಾ ಸಂಘದವರು ಜಾನಪದ ಸಂಗೀತ ನಡೆಸಿಕೊಟ್ಟರು. ಗುರು ಕುಮಾರೇಶ್ವರ ಪಂಚಾಕ್ಷರಿ ಗವಾಯಿ ನಾಟ್ಯ ಸಂಘ ಪ್ರಸ್ತುತ ಪಡಿಸಿದ ಹೇಮರಡ್ಡಿ ಮಲ್ಲಮ್ಮ ನಾಟಕ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.