ಬುಧವಾರ, ಮೇ 18, 2022
23 °C

ಮೈತ್ರಿ ಒತ್ತಡದ ಬಜೆಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್): ಸಚಿವೆ ಮಮತಾ ಬ್ಯಾನರ್ಜಿ ಅವರು ಲೋಕಸಭೆಯಲ್ಲಿ ಶುಕ್ರವಾರ ಮಂಡಿಸಿರುವ ಬಜೆಟ್ ತಂತ್ರಗಾರಿಕೆಯಿಂದ ಕೂಡಿದ್ದು, ಮೈತ್ರಿ ಒತ್ತಡಕ್ಕೆ ಮಣಿದು ಸಿದ್ಧಪಡಿಸಿದಂತಿದೆ ಎಂದು ಸಿಪಿಎಂ ದೂರಿದೆ.ಈ ಬಜೆಟ್ ಉದ್ದೇಶಹೀನವಾಗಿದ್ದು, ಇಂತಹದ್ದೊಂದು ಬಜೆಟ್ ಮಂಡಿಸಲು ಪ್ರಧಾನಿ ಅವಕಾಶ ನೀಡಿರುವುದಾದರೂ ಹೇಗೆ ಎಂದು ಸಿಪಿಎಂ ರಾಜ್ಯಸಭಾ ಸದಸ್ಯ ಸೀತಾರಾಮ್ ಯೆಚೂರಿ ಪ್ರಶ್ನಿಸಿದ್ದಾರೆ.ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್ ತಯಾರಿಸಲಾಗಿದೆ. ಬಜೆಟ್‌ನಲ್ಲಿ ಮತ್ತೇನೂ ಇಲ್ಲ ಎಂದು ಹೇಳಿದರು.‘ಪಶ್ಚಿಮ ಬಂಗಾಳ ಗಮನದಲ್ಲಿಟ್ಟುಕೊಂಡು ಹಲವು ಯೋಜನೆಗಳನ್ನು ಪ್ರಕಟಿಸಿರುವ ಮಮತಾ ದೀದಿ, ಇವನ್ನು ಬಹಳ ಚಾಣಾಕ್ಷತನದಿಂದ 12ನೇ ಪಂಚವಾರ್ಷಿಕ ಯೋಜನೆಯಡಿ ಬರುವ ಪ್ರಧಾನ ಮಂತ್ರಿಗಳ ರೈಲ್ವೆ ವಿಕಾಸ ಯೋಜನೆಯಲ್ಲಿ ಸೇರಿಸಿದ್ದಾರೆ. ಕಳೆದ ಬಾರಿ ಘೋಷಿಸಿದ್ದ ಅನೇಕ ಯೋಜನೆಗಳೇ ಇನ್ನೂ ಜಾರಿಗೆ ಬಂದಿಲ್ಲ. ಹೀಗಾಗಿ ಹೊಸ ಯೋಜನೆಗಳಿಗೆ ಅರ್ಥವಿಲ್ಲ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.