ಶನಿವಾರ, ಮಾರ್ಚ್ 6, 2021
28 °C

ಮೈಸೂರು ಕೋರ್ಟ್ ಶೌಚಾಲಯದಲ್ಲಿ ನಿಗೂಢ ಸ್ಫೋಟ; ಸ್ಪೋಟಕ ವಸ್ತು ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು ಕೋರ್ಟ್ ಶೌಚಾಲಯದಲ್ಲಿ ನಿಗೂಢ ಸ್ಫೋಟ; ಸ್ಪೋಟಕ ವಸ್ತು ಪತ್ತೆ

ಮೈಸೂರು: ಮೈಸೂರು ನ್ಯಾಯಾಲಯದ ಆವರಣದಲ್ಲಿ ಸ್ಪೋಟಕ ವಸ್ತು ಪತ್ತೆಯಾಗಿದೆ. ಸೋಮವಾರ ಸಂಜೆ 4.10ಕ್ಕೆ ನ್ಯಾಯಾಲಯದ ಶೌಚಾಲಯದಲ್ಲಿ ಭಾರೀ ಶಬ್ದದೊಂದಿಗೆ ಸ್ಫೋಟ ಸಂಭವಿಸಿದ್ದು, ಶೌಚಾಲಯದ ಕಿಟಕಿ ಗಾಜು ಪುಡಿ ಪುಡಿಯಾಗಿದೆ.ಘಟನಾ ಸ್ಥಳಕ್ಕೆ ಬಾಂಬ್  ನಿಷ್ಕ್ರಿಯ ದಳ, ಶ್ವಾನ ದಳ ಆಗಮಿಸಿ ತಪಾಸಣೆ ನಡೆಸಿದೆ, ಅದೇ ವೇಳೆ ಶೌಚಾಲಯದಲ್ಲಿ ಅನುಮಾನಸ್ಪದ ಸ್ಥಿತಿಯಲ್ಲಿ ಎರಡು ಪೊಟ್ಟಣಗಳು ಪತ್ತೆಯಾಗಿವೆ. ಈ ಪೊಟ್ಟಣಗಳಲ್ಲಿ ಗನ್ ಪೌಡರ್  ಪತ್ತೆಯಾಗಿದೆ ಎಂದು ಬಾಂಬ್ ನಿಷ್ಕ್ರಿಯ ದಳ ಹೇಳಿದೆ.

ಬಾಂಬ್ ಮಾದರಿಯಲ್ಲಿಯೇ ಭಾರೀ ಹೊಗೆಯಿಂದ ಸ್ಫೋಟ ಸಂಭವಿಸಿದ್ದು, ಯಾರಿಗೂ ಪ್ರಾಣ ಹಾನಿ ಸಂಭವಿಸಿಲ್ಲ,

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.