ಭಾನುವಾರ, ಏಪ್ರಿಲ್ 11, 2021
26 °C

ಮೈಸೂರು-ಬೆಂಗಳೂರು-ಮೈಸೂರು: ವಾರದ 7 ದಿನವೂ ರೈಲು ಸೇವೆ ಲಭ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: 2012ರ ರೈಲ್ವೆ ಬಜೆಟ್‌ನಲ್ಲಿ ಘೋಷಿಸಿರುವಂತೆ ಮೈಸೂರು- ಬೆಂಗಳೂರು ಮತ್ತು ಬೆಂಗಳೂರು- ಮೈಸೂರು ನಡುವಿನ ಪ್ಯಾಸೆಂಜರ್ ರೈಲುಗಳ ಸಂಚಾರವನ್ನು ಜುಲೈ 15ರಿಂದ ವಾರದ ಏಳೂ ದಿನಕ್ಕೆ ವಿಸ್ತರಿಸಲಾಗಿದೆ. ಈ ಮೊದಲು ವಾರದಲ್ಲಿ ಆರು ದಿನ ರೈಲು ಸೇವೆ ಲಭ್ಯವಿತ್ತು.ಮೈಸೂರು-ಬೆಂಗಳೂರು ಪ್ಯಾಸೆಂಜರ್ ರೈಲು (ಗಾಡಿ ಸಂಖ್ಯೆ: 56231) ಬೆಳಿಗ್ಗೆ 5.50 ಗಂಟೆಗೆ ಮೈಸೂರಿನಿಂದ ಹೊರಟು, ಬೆಳಿಗ್ಗೆ 9.10 ಗಂಟೆಗೆ ಬೆಂಗಳೂರು ತಲುಪಲಿದೆ. ಬೆಂಗಳೂರು-ಮೈಸೂರು (ಗಾ.ಸಂಖ್ಯೆ: 56232) ಬೆಂಗಳೂರಿನಿಂದ ಬೆಳಿಗ್ಗೆ 9.20 ಗಂಟೆಗೆ ಹೊರಟು ಮಧ್ಯಾಹ್ನ 1.35 ಗಂಟೆಗೆ ಮೈಸೂರು ತಲುಪಲಿದೆ.ಬೆಂಗಳೂರು-ಮೈಸೂರು ಪ್ಯಾಸೆಂಜರ್ ರೈಲು (ಗಾ.ಸಂ:56237) ಮೈಸೂರಿನಿಂದ ಮಧ್ಯಾಹ್ನ 2.25 ಗಂಟೆಗೆ ಹೊರಟು, ಸಂಜೆ 6 ಗಂಟೆಗೆ ಬೆಂಗಳೂರು ತಲುಪಲಿದೆ. ಬೆಂಗಳೂರಿನಿಂದ (ಗಾ.ಸಂ:56238) ರಾತ್ರಿ 7 ಗಂಟೆಗೆ ಹೊರಟು, ರಾತ್ರಿ 10.40 ಗಂಟೆಗೆ ಮೈಸೂರು ತಲುಪಲಿದೆ. ಬೆಂಗಳೂರು-ಅರಸೀಕೆರೆ-ಬೆಂಗಳೂರು ಪ್ಯಾಸೆಂಜರ್ ರೈಲು (ಗಾ.ಸಂ: 56233/56224) ವಾರದ 7 ದಿನವೂ ಸಂಚರಿಸಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.