ಗುರುವಾರ , ಏಪ್ರಿಲ್ 15, 2021
24 °C

ಮೈಸೂರು ಮಹಾಯೋಜನೆ ಸಿ.ಡಿಗೆ ್ಙ 4 ಸಾವಿರ:ಮುಡಾ ಆಯುಕ್ತ ಡಾ.ಸಿ.ಜಿ.ಬೆಟಸೂರಮಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: `ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ಸಿದ್ಧಗೊಳಿಸ ಲಾಗಿರುವ ಮೈಸೂರು ಮಹಾಯೋಜನೆ (ಪರಿಷ್ಕರಣೆ-2)-2031ರ ಸಿ.ಡಿ ಲಭ್ಯವಿದ್ದು ಸಾರ್ವಜನಿಕರು ರೂ. 4 ಸಾವಿರ ಪಾವತಿಸಿ ಪಡೆಯಬಹುದಾಗಿದೆ~ ಎಂದು ಮುಡಾ ಆಯುಕ್ತ ಡಾ.ಸಿ.ಜಿ.ಬೆಟಸೂರಮಠ ಹೇಳಿದರು.ನಂಜರಾಜ ಬಹದ್ದೂರ್ ಛತ್ರದಲ್ಲಿ ಆ. 9 ರಿಂದ ತೆರೆಯಲಾಗಿರುವ ಆಕ್ಷೇಪಣಾ ಅರ್ಜಿ ಸ್ವೀಕಾರ ಕೇಂದ್ರದಲ್ಲಿ ಗುರುವಾರ ಈ ಮಾಹಿತಿ ನೀಡಿದರು.`ಜಿಲ್ಲಾ ಯೋಜನೆ ಮತ್ತು ವಲಯ ನಿಬಂಧನೆ  ಗಳಿಗೆ ರೂ. 400, ವರದಿ ಮತ್ತು ವಲಯ ನಿಬಂಧನೆಗಳಿಗೆ ರೂ. 250, ಭೂಬಳಕೆ ಮತ್ತು ವಲಯ ನಿಬಂಧನೆಗಳಿಗೆ ರೂ. 400 ಹಾಗೂ ವಲಯ ನಿಬಂಧನೆಗಳು ಮಾತ್ರ ಬೇಕಾದಲ್ಲಿ ರೂ. 400 ಪಾವತಿಸಿ ನಂಜರಾಜ ಬಹದ್ದೂರ್ ಛತ್ರ ಅಥವಾ ಮುಡಾ ಕಚೇರಿಯಲ್ಲಿ ಪಡೆಯ ಬಹುದು. ಸಾರ್ವಜನಿಕರು ಅಕ್ಟೋಬರ್ 8ರೊಳಗೆ ಸಲಹೆ, ಸೂಚನೆ, ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ~ ಎಂದು ತಿಳಿಸಿದರು.`ಮಹಾ ಯೋಜನೆಯಲ್ಲಿ ಮೈಸೂರಿನ 84 ಗ್ರಾಮ, ನಂಜನಗೂಡಿನ 14 ಹಾಗೂ ಶ್ರೀರಂಗ ಪಟ್ಟಣದ 9 ಗ್ರಾಮ ಸೇರಿದಂತೆ 117 ಗ್ರಾಮಗಳು ಸೇರ್ಪಡೆಗೊಂಡಿವೆ. 2031ರಲ್ಲಿ ಮೈಸೂರು ನಗರ ಹೇಗಿರಬೇಕು ಎಂಬುದನ್ನು ಅಹಮದಾಬಾದ್ ಮೂಲದ ಸಾಯಿ ಕನ್ಸ್‌ಲ್‌ಟಂಟ್ಸ್ ಕಂಪೆನಿ ಕರಡನ್ನು ತಯಾರಿಸಿ ಕೊಟ್ಟಿದೆ. 60 ದಿನಗಳ ನಂತರ ಸಾರ್ವಜನಿಕರ ಸಲಹೆ, ಆಕ್ಷೇಪಣೆಗಳನ್ನು ಪರಿಗಣಿಸಿ ಸರ್ಕಾರಕ್ಕೆ ಅಂತಿಮ ವರದಿ ನೀಡಲಾಗುವುದು~ ಎಂದರು.ಯೋಜನೆ ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಪ್ರೊ.ನಾರಾಯಣಶಾಸ್ತ್ರಿ, ಪ್ರೊ.ಕೃಷ್ಣಮೂರ್ತಿ ಉಪಸ್ಥಿತರಿದ್ದರು.ಯೋಜನೆಯ ಪ್ರಮುಖ ಪ್ರಸ್ತಾವನೆಗಳು

* ಮಹಾ ಯೋಜನೆಯು 509 ಚ.ಕಿ.ಮೀ ಪ್ರದೇಶದ ವಿಸ್ತೀರ್ಣ ಹೊಂದಿದೆ.* 1997ರ ಮಹಾಯೋಜನೆಯಂತೆ ಪ್ರಸ್ತಾವಿತ ಭೂ ಉಪಯೋಗ 15,669.49 ಹೆಕ್ಟೇರ್ ಇದ್ದು, 2012ರ ಮಹಾ ಯೋಜನೆ ಯಂತೆ 31,171.31 ಹೆಕ್ಟೇರ್ ಪ್ರದೇಶಕ್ಕೆ ಹೆಚ್ಚಿಸಲಾಗಿದೆ.* ನಗರದ ಜನಸಂಖ್ಯೆ ಸದ್ಯ 13 ಲಕ್ಷ ಇದ್ದು, 2031ರಲ್ಲಿ 23 ಲಕ್ಷಕ್ಕೆ ಏರಿಕೆ ಆಗಬಹುದು ಎಂದು ಅಂದಾಜಿಸಲಾಗಿದೆ. ನಂಜನಗೂಡು ಪಟ್ಟಣಕ್ಕೆ ಸಂಬಂಧಿಸಿದಂತೆ 2011ರಲ್ಲಿ 67 ಸಾವಿರ ಜನಸಂಖ್ಯೆ ಇದ್ದು, 2031ಕ್ಕೆ 1.10 ಲಕ್ಷ ಆಗಬಹುದು ಎಂದು ಅಂದಾಜಿಸಿ ಭೂ ಉಪಯೋಗವನ್ನು ಗುರುತಿಸಲಾಗಿದೆ.* ನಗರ ಹೊರವಲಯದಲ್ಲಿ ಮತ್ತೊಂದು ಹೊರ ವರ್ತುಲ ರಸ್ತೆ (ಪೆರಿಫೆರಲ್ ರಿಂಗ್ ರೋಡ್) ಮಾಡಲು ನಿರ್ಧರಿಸಲಾಗಿದೆ.* ಮೈಸೂರು ವಿಮಾನ ನಿಲ್ದಾಣ ಬಳಿ ಪ್ರವಾಸೋದ್ಯಮ ಅಭಿವೃದ್ಧಿ, ಚಿತ್ರ ನಗರಿ, ಅಂತರರಾಷ್ಟ್ರೀಯ ಸಭಾಂಗಣ (ಇಂಟರ್ ನ್ಯಾಶನಲ್ ಕನ್ವೆಷನ್ ಸೆಂಟರ್) ಆರಂಭಿಸಲು ಜಾಗವನ್ನು ಕಾಯ್ದಿರಿಸಲಾಗಿದೆ. ಇದರಿಂದ ಪ್ರವಾಸೋದ್ಯಮ ಚಟುವಟಿಕೆಗೆ ಸಹಾಯಕವಾಗಲಿದೆ.* ಪಾರಂಪರಿಕ ಕಟ್ಟಡಗಳನ್ನು ಉಳಿಸುವ ದೃಷ್ಟಿಯಿಂದ ನಿಯಂತ್ರಣ ನಿಯಮಗಳನ್ನು ಅಳವಡಿಸಲಾಗಿದೆ.

ಚಾಮುಂಡಿಬೆಟ್ಟ ಹಾಗೂ ಸುತ್ತಮುತ್ತಲಿನ ಅರಣ್ಯ ಪ್ರದೇಶದ ರಮಣೀಯ ದೃಶ್ಯವನ್ನು ಕಾಪಾಡುವ ನಿಟ್ಟಿನಲ್ಲಿ ವಿಶೇಷ ನಿಯಮಗಳ ಪ್ರಸ್ತಾವನೆ ಮಾಡಲಾಗಿದೆ.* ಭಾರಿ ವಾಹನಗಳ ನಿಯಂತ್ರಣಕ್ಕೆ ಕ್ರಮ ವಹಿಸಲಾಗಿದೆ.* ನಗರದ ಬನ್ನಿಮಂಟಪದಲ್ಲಿರುವ ಕೇಂದ್ರ ಕಾರಾಗೃಹವನ್ನು ವಿಮಾನ ನಿಲ್ದಾಣ ಸಮೀಪ ಸ್ಥಳಾಂತರಿಸಲು ನಿರ್ಧರಿಸಲಾಗಿದೆ.* ಕೆರೆಗಳ ರಕ್ಷಣೆಗೆ ವಿಶೇಷ ನಿಯಮ ರೂಪಿಸಲಾಗಿದೆ.ಮಹಾಯೋಜನೆ ವರದಿಯ ದರ

ಸಮಗ್ರ ಮಾಹಿತಿಯುಳ್ಳ ಕೈಪಿಡಿ ರೂ. 4000

ಜಿಲ್ಲಾ ಯೋಜನೆ ಮತ್ತು ವಲಯ ನಿಬಂಧನಗಳು ರೂ. 400

ವರದಿ ಮತ್ತು ವಲಯ ನಿಬಂಧನೆಗಳು ರೂ. 250

ಭೂಬಳಕೆ ಮತ್ತು ವಲಯ ನಿಬಂಧನೆಗಳು ರೂ. 400

ವಲಯ ನಿಬಂಧನೆಗಳು   ರೂ. 400

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.