ಬುಧವಾರ, ಜೂನ್ 16, 2021
28 °C

ಮೈಸೂರು ವಿ.ವಿ. 92ನೇ ಘಟಿಕೋತ್ಸವ: 12 ಚಿನ್ನದ ಪದಕಗಳಿಗೆ ವಿದ್ಯಾರ್ಥಿಗಳೇ ಇಲ್ಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಚಿನ್ನದ ಪದಕ, ನಗದು ಬಹುಮಾನ ಪಡೆಯಲು ಸ್ಪರ್ಧೆ ನಡೆಯುವ ಈ ದಿನಗಳಲ್ಲಿ ರಾಜ್ಯದ ಮೊದಲ ವಿಶ್ವವಿದ್ಯಾನಿಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮೈಸೂರು ವಿಶ್ವವಿದ್ಯಾನಿಲಯದಲ್ಲಿ 12 ವಿಷಯಗಳಲ್ಲಿ ಚಿನ್ನದ ಪದಕ ಪಡೆಯಲು ವಿದ್ಯಾರ್ಥಿಗಳೇ ಇಲ್ಲ!-ಹೌದು. ಏ. 7ರಂದು ನಡೆಯಲಿರುವ ಮೈಸೂರು ವಿ.ವಿ 92ನೇ ಘಟಿಕೋತ್ಸವದಲ್ಲಿ ಎಂ.ಎ ತತ್ವಶಾಸ್ತ್ರ, ಬಿಪಿಎ (ಪ್ರದರ್ಶಕ ಕಲೆಗಳ ಪದವಿ), ಬಿ.ಎಸ್ಸಿ ಭೂಗರ್ಭಶಾಸ್ತ್ರ ವಿಷಯಗಳಲ್ಲಿ ವಿದ್ಯಾರ್ಥಿಗಳೇ ಇಲ್ಲ. ಅದೇ ರೀತಿ ಬಿ.ಎ, ಬಿಪಿಎ ಕೋರ್ಸ್‌ಗಳಲ್ಲಿರುವ 8 ನಗದು ಬಹುಮಾನ ಪಡೆಯಲೂ ವಿದ್ಯಾರ್ಥಿಗಳು ಇಲ್ಲದಂತಾಗಿದೆ. ವಿ.ವಿ. ವೆಬ್‌ಸೈಟ್‌ನಲ್ಲಿ ಅಳವಡಿಸಿರುವ `ಪದಕ ಹಾಗೂ ನಗದು ಬಹುಮಾನ~ ವಿಜೇತರ ಪಟ್ಟಿಯಲ್ಲಿ 12 ಪದಕಗಳಿಗೆ `ಅಭ್ಯರ್ಥಿಯೇ ಇಲ್ಲ~ ಎಂಬ ಮಾಹಿತಿಯನ್ನು ನೀಡಿದೆ.ಚಿನ್ನದ ಪದಕ: ಎಂ.ಎ. ತತ್ವಶಾಸ್ತ್ರಕ್ಕೆ ಇಟ್ಟಿರುವ ಸಿ.ಸೇತುಬಾಯಿ ಚಿನ್ನದ ಪದಕ (ಮಹಿಳೆ), ಪ್ರದರ್ಶಕ ಕಲೆಗಳ ಪದವಿಗೆ (ಬಿಪಿಎ) ಇಡಲಾಗಿರುವ ರವಿ ಆರ್ಟಿಸ್ಟ್ ಚಿನ್ನದ ಪದಕ, ಚೈತ್ರ ಚಿನ್ನದ ಪದಕ, ರಾಜ್‌ಕುಮಾರ್ ಸನ್ಮಾನ ಸಮಿತಿ, ಕುಂದಾಪುರ ವೆಂಕಟರಮಣದೇವ ಪದಕ, ಶ್ರೀಕೇಶವ ಸುಬ್ಬರಾಯನ್ ಪದಕ, ಅಮ್ಮಯ್ಯ ರಾಮಸ್ವಾಮಯ್ಯ ಪದಕ, ಮೂರ್ತಿಸ್ ಮೆಡಲ್ ಫಾರ್ ಎಕ್ಸ್‌ಲೆಂಟ್ ಚಿನ್ನದ ಪದಕಗಳಿಗೆ ವಿದ್ಯಾರ್ಥಿಗಳು ಇಲ್ಲದ್ದರಿಂದ ಹಾಗೆಯೇ ಉಳಿಸಿಕೊಳ್ಳಲಾಗಿದೆ.ಬಿ.ಎಸ್ಸಿಯಲ್ಲಿ ನೀಡುವ ಸಾವಿತ್ರಮ್ಮ ಸ್ಮಾರಕ ಚಿನ್ನದ ಪದಕ (ಮಹಿಳೆ), ಕೃಷ್ಣಬಾಯ್ ಗುಂಡೋಪಂತ್ ಪದಕ, ಸುಮತಿ ಶ್ರೀನಿವಾಸನ್ ಕಮಾಮರೇಷನ್ ಪದಕ, ಬಿ.ಎಸ್ಸಿ ಭೂಗರ್ಭಶಾಸ್ತ್ರ ವಿಷಯಕ್ಕೆ ಇಟ್ಟಿರುವ ಹನುಮಪ್ಪ ಚಿನ್ನದ ಪದಕ ಪಡೆಯಲೂ ವಿದ್ಯಾರ್ಥಿಗಳು ಇಲ್ಲದಂತಾಗಿದೆ.ಅದೇ ರೀತಿ 8 ನಗದು ಬಹುಮಾನ ಪಡೆಯಲೂ ಮೈಸೂರು ವಿ.ವಿ ವಿದ್ಯಾರ್ಥಿಗಳ ಕೊರತೆಯನ್ನು ಎದುರಿಸುತ್ತಿದೆ. ಬಿ.ಎ ಪದವಿಗೆ ನೀಡುವ ಪ್ರೊ.ಎಂ.ಹಿರಿಯಣ್ಣ ಸ್ಮಾರಕ ಬಹುಮಾನ, ಪ್ರೊ.ಸಿ.ಕೆ.ರೇಣುಕಾರ್ಯ ಫೆಲಿಸಿಟೇಷನ್ ನಗದು ಬಹುಮಾನ, ಬಿಪಿಎ (ಪ್ರದರ್ಶಕ ಕಲೆಗಳ ಪದವಿ) ಕೋರ್ಸ್‌ಗೆ ನೀಡುವ ಯಮುನಾಬಾಯಿ ಸ್ಮಾರಕ ನಗದು ಬಹುಮಾನ, ಲೇ.ಶಾರದಮ್ಮ ದತ್ತಿ ಬಹುಮಾನ (ಬಿಪಿಎ-ಡ್ಯಾನ್ಸ್), ಕ್ಯಾಥೋಲಿಕ್ ಡಯೋಸಿಸ್ ಆಫ್ ಮೈಸೂರು ಬಹುಮಾನ (ಬಿಪಿಎ-ಡ್ಯಾನ್ಸ್), ಕೇಶವ್ ಸುಬ್ಬರಾಯನ್ ಬಹುಮಾನ (ಬಿಪಿಎ-ಡ್ಯಾನ್ಸ್), ಸುಬ್ಬಣ್ಣ ಸ್ಮಾರಕ ಬಹುಮಾನ (ಬಿಪಿಎ-ಡ್ರಾಮಾ), ಸಹಸ್ರಮುಖಿ ರಾಘವೇಂದ್ರರಾವ್ ಹಾಗೂ ನಾಗರತ್ನ ನಗದು ಬಹುಮಾನ (ಬಿಪಿಎ-ಡ್ರಾಮೆಟಿಕ್) ಕೋರ್ಸ್‌ಗಳಲ್ಲೂ ವಿದ್ಯಾರ್ಥಿಗಳು ಇಲ್ಲದ್ದರಿಂದ ನಗದು ಬಹುಮಾನವನ್ನೂ ಉಳಿಸಿಕೊಳ್ಳಲಾಗಿದೆ.ಇತಿಹಾಸ, ಸಂಸ್ಕೃತ ವಿಷಯಗಳಲ್ಲಿ ಪಿ.ಎಚ್‌ಡಿಗೆ ಮೀಸಲಿಟ್ಟಿರುವ ಚಿನ್ನದ ಪದಕ, ಬಿ.ಎ, ಎಂ.ಎಸ್ಸಿ-ಗಣಿತಶಾಸ್ತ್ರ ವಿಷಯಗಳಿಗೆ ಇರುವ 5 ಚಿನ್ನದ ಪದಕ, ಪಿ.ಎಚ್.ಡಿ-ಇತಿಹಾಸ, ಸಂಸ್ಕೃತ, ಬಿಎಫ್‌ಎ, ಬಿ.ಎಸ್ಸಿ ಗಣಿತಶಾಸ್ತ್ರ, ಬಿ.ಎಸ್ಸಿ ಸಂಸ್ಕೃತ ವಿಷಯಗಳಲ್ಲಿ 7 ನಗದು ಬಹುಮಾನಕ್ಕೂ ವಿದ್ಯಾರ್ಥಿಗಳು ಇಲ್ಲದ್ದರಿಂದ ನಗದು ಬಹುಮಾನವನ್ನು ವಿ.ವಿ ಕಾಯ್ದಿರಿಸಿದೆ.ಈ ಕುರಿತು `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಮೈಸೂರು ವಿ.ವಿ.ಕುಲಸಚಿವ (ಪರೀಕ್ಷಾಂಗ) ಬಿ.ರಾಮು, `ನಿಗದಿತ ಕೋರ್ಸ್‌ಗಳನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳದೇ ಇರುವುದರಿಂದ ಚಿನ್ನದ ಪದಕ, ನಗದು ಬಹುಮಾನ  ಉಳಿದುಕೊಂಡಿವೆ ಎಂದರು.ದತ್ತಿ ದಾನಿಗಳು ಈಗಿರುವ ವಿಷಯದ ಬದಲು ಬೇರೆ ವಿಷಯಗಳಿಗೆ ಚಿನ್ನದ ಪದಕ, ನಗದು ಬಹುಮಾನ ನೀಡುವಂತೆ ಮನವಿ ಮಾಡಿದರೆ ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಿ ಬದಲಾವಣೆ ಮಾಡುತ್ತೇವೆ~ ಎಂದು  ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.