ಇವನು ಗೆಳೆಯನಲ್ಲ
ಲೇ: ಹೃದಯಶಿವ, ಪು:152; ಬೆ: ರೂ. 95; ಪ್ರ: ಪದ ಪ್ರಕಾಶನ, ಬೆಂಗಳೂರು. ಫೋನ್: 96322 81269.

ಸಿನಿಮಾ ಗೀತರಚನೆಕಾರರಾಗಿ ಹೆಸರು ಮಾಡಿರುವ ಹೃದಯಶಿವ, `ಮೂಕ ಮೈಲಿಗಲ್ಲು~ ಹಾಗೂ `ಚರಕದ ಮುದುಕ~ ಕವನ ಸಂಕಲನಗಳ ಮೂಲಕ ಸಿನಿಮಾದಾಚೆಗಿನ ತಮ್ಮ ಸಾಹಿತ್ಯದ ಗಂಭೀರ ಆಸಕ್ತಿಯನ್ನು ವ್ಯಕ್ತಪಡಿಸಿದವರು.

`ಇವನು ಗೆಳೆಯನಲ್ಲ~ ಅವರು ಸಿನಿಮಾಗಳಿಗಾಗಿ ಬರೆದಿರುವ ನೂರು ಗೀತೆಗಳ ಸಂಕಲನ.

`ಮುಂಗಾರು ಮಳೆ~, `ಗಾಳಿಪಟ~, `ಸತ್ಯ ಇನ್ ಲವ್~ ಸೇರಿದಂತೆ ಅನೇಕ ಜನಪ್ರಿಯ ಚಿತ್ರಗಳ ಗೀತೆಗಳು ಈ ಸಂಕಲನದಲ್ಲಿವೆ. ಸಿನಿಮಾ ಗೀತೆಗಳು ಸಾಮಾನ್ಯವಾಗಿ ಬಯಸುವ ಪ್ರೇಮದ ರಮ್ಯತೆಯೇ ಇಲ್ಲಿನ ಬಹುತೇಕ ಗೀತೆಗಳಲ್ಲಿದೆ. ಆದರೆ, ಹೊಸ ಚಿತ್ರಗಳು ಹಾಗೂ ನವಿರು ಭಾಷೆಯ ಮೂಲಕ ಪ್ರೇಮಗೀತೆಗಳಿಗೆ ಜೀವಂತಿಕೆ ಮೂಡಿಸಲು ಹೃದಯಶಿವ ಪ್ರಯತ್ನಿಸಿದ್ದಾರೆ. `ನನ್ನೆದೆಯ ಗೂಡಲ್ಲಿ ಕವಿತೆಗಳ ಸಂತೆ/ ಈ ಒಲವೇ ನೀ ತಂದ ಹಾಡಿಗೆ ನಾ ಸೋತೆ~ ಎಂದು ಬರೆಯುವ ಶಿವ, `ಮುಗಿಲ ಹೆಗಲ/ ಮೇಲೇರಿ ತೇಲುತಿದೆ ಹೃದಯ~ ಎಂದು ಚಿತ್ರವತ್ತಾಗಿಯೂ ಬರೆಯಬಲ್ಲರು.

ಸಿನಿಮಾ ಗೀತೆಗಳಲ್ಲೂ ಸಾಹಿತ್ಯದ ಗುಣವಿದೆ ಎನ್ನುವುದಕ್ಕೆ ಸಂಕಲನದ ಶೀರ್ಷಿಕೆ ಗೀತೆಯಾದ `ಇವನು ಗೆಳೆಯನಲ್ಲ~ ಉದಾಹರಣೆಯಂತಿದೆ. `ತಿಳಿದು ತಿಳಿದು ಇವನು/ ತನ್ನ ತಾನೆ ಸುಡುತಿಹನಲ್ಲ/ ಒಲುಮೆಯೆಂಬ ಸುಳಿಗೆ/ ಈಜು ಬರದೆ ಇಳಿದಿಹನಲ್ಲ/ ಸಾವಿನಲ್ಲು ನಗುವುದ ಬಲ್ಲ/ ಏನೋ ಕಳವಳ/ ಮುಳುಗುವವನ ಕೂಗು/ ಚಾಚುವಂತೆ ಮಾಡಿದೆ ಕೈಯ/ ಜಾರಿಬಿಡುವುದೇ ಈ ಹೃದಯ/ ಏನೋ ತಳಮಳ~ ಹಾಡು ಒಂದು ಭಾವಗೀತೆಯಂತೆಯೇ ಓದಿಸಿಕೊಳ್ಳುತ್ತದೆ.

ತೆರೆಮರೆಯ ಕನ್ನಡ ಕಲಿಗಳು
ಲೇ: ಕೆ.ಎಚ್. ನರಸಿಂಹಮೂರ್ತಿ
ಪು: 110; ಬೆ: ರೂ. 75; ಪ್ರ: ಕನ್ನಡ ಗೆಳೆಯರ ಬಳಗ, .6, ರಾಘವೇಂದ್ರ ಕಾಂಪ್ಲೆಕ್ಸ್, 2ನೇ ತಿರುವು, ಸಿ.ಕೆ.ಸಿ. ಗಾರ್ಡನ್, ಬೆಂಗಳೂರು-27

ಕನ್ನಡ ಚಳವಳಿಯ ಕುರಿತ ಬಹುತೇಕ ಇತಿಹಾಸಗಳು ಲೇಖಕರು ತಮ್ಮನ್ನು ಬಣ್ಣಿಸಿಕೊಳ್ಳುವ ಕಥನಗಳಾಗಿರುವ ಹಾಗೂ ಆ ಇತಿಹಾಸ ಲೇಖಕ ಕೇಂದ್ರಿತ ಚಳವಳಿಯ ಇತಿಹಾಸ ಆಗಿರುವ ಸಂದರ್ಭದಲ್ಲಿ, ತೆರೆಮರೆಯಲ್ಲಿಯೇ ಉಳಿದ ಕೆಲವು ಚಳವಳಿಕಾರರನ್ನು ಪರಿಚಯಿಸುವ ಕೆಲಸವನ್ನು ಕೆ.ಎಚ್. ನರಸಿಂಹಮೂರ್ತಿ ಅವರ `ತೆರೆಮರೆಯ ಕನ್ನಡ ಕಲಿಗಳು~ ಪುಸ್ತಕ ಮಾಡಿದೆ. ನೂರು ಜನ ಹೋರಾಟಗಾರರ ಸಂಕ್ಷಿಪ್ತ ಪರಿಚಯವನ್ನು ಒಳಗೊಂಡ ಈ ಕೃತಿ, ಕನ್ನಡ ಚಳವಳಿಯ ಪ್ರಭೆಯಿಂದಾಚೆ ಉಳಿದ ಅನೇಕರನ್ನು ಪರಿಚಯಿಸುವಲ್ಲಿ ಯಶಸ್ವಿಯಾಗಿದೆ.

ಬಹುಶಃ, ಈ ಕೃತಿಯಲ್ಲಿ ಪರಿಚಯಗೊಂಡಿರುವ ಅನೇಕ ಚಳವಳಿಗಾರರ ಕುರಿತಾದ ವಿವರಗಳು ಮೊದಲ ಸಲವಷ್ಟೇ ಬೆಳಕಿಗೆ ಬರುತ್ತಿವೆ. ಈ ಪರಿಚಯಗಳನ್ನು ಮತ್ತಷ್ಟು ವಿಸ್ತೃತವಾಗಿ ಮಾಡಬಹುದಿತ್ತು ಹಾಗೂ ಚಳವಳಿಗಾರರ ಛಾಯಾಚಿತ್ರಗಳನ್ನು ಬಳಸಿಕೊಳ್ಳಬಹುದಿತ್ತು ಎನ್ನುವ ಕೊರತೆ ಪುಸ್ತಕದಲ್ಲಿ ಕಾಣಿಸುತ್ತದೆ. ಈ ಕೊರತೆಯನ್ನು ಪುಸ್ತಕದ ಲೇಖಕರೂ ಮನಗಂಡಿದ್ದು, ಮತ್ತೊಂದು ಸಮಗ್ರ ಕೃತಿ ಪ್ರಕಟಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.