ನಿಮ್ಮ ಮೆಚ್ಚಿನ ಕಥೆಗಳು
ಲೇ: ನಾಗತಿಹಳ್ಳಿ ಚಂದ್ರಶೇಖರ
ಪು: 212; ಬೆ: ರೂ. 125
ಪ್ರ: ಸಪ್ನ ಬುಕ್ ಹೌಸ್
3ನೇ ಮುಖ್ಯ ರಸ್ತೆ, ಗಾಂಧಿನಗರ, ಬೆಂಗಳೂರು– 560 009
ಲೇಖಕ, ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಕನ್ನಡದಲ್ಲಿ ಮುಖ್ಯವಾಗಿ ಕಥೆಗಾರರಾಗಿ ಗುರುತಿಸಿಕೊಂಡವರು. ಎಂಬತ್ತರ ದಶಕದಲ್ಲಿ ಬರೆಯಲು ಆರಂಭಿಸಿದ ಅವರು ತಮ್ಮ ಕಥೆ, ಕಾದಂಬರಿಗಳಿಂದ ಜನಪ್ರೀತಿಯನ್ನು ಗಳಿಸಿಕೊಂಡವರು. ಈ ಸಂಕಲನದಲ್ಲಿ ಅವರು ತಮ್ಮ ಏಳು ಕಥಾಸಂಗ್ರಹಗಳಿಂದ ಆಯ್ದ ಹದಿನೈದು ಕಥೆಗಳನ್ನು ಕೊಟ್ಟಿದ್ದಾರೆ. ಓದುಗರ, ವಿಮರ್ಶಕರ ಮೆಚ್ಚುಗೆ, ಪ್ರೀತಿಗೆ ಪಾತ್ರವಾದ ಕಥೆಗಳನ್ನು ಒಂದೆಡೆ ತಂದಿರುವುದಾಗಿ ತಮ್ಮ ಮೊದಲ ಮಾತಿನಲ್ಲಿ ಅವರು ಹೇಳಿಕೊಂಡಿದ್ದಾರೆ. ಇದು ಅವರ ಪ್ರಾತಿನಿಧಿಕ ಕಥೆಗಳ ಸಂಗ್ರಹ ಎನ್ನಬಹುದು.

ವಸ್ತು, ನಿರೂಪಣೆಯಲ್ಲಿ ವೈವಿಧ್ಯವನ್ನು ಹೊಂದಿರುವ ನಾಗತಿಹಳ್ಳಿ ಅವರ ಕಥೆಗಳು ತಮ್ಮ ಸಮಕಾಲೀನ ಬದುಕಿಗೆ ಸ್ಪಂದಿಸಿದ್ದರ ಫಲವಾಗಿವೆ. ಅಸಮಾನ ಮತ್ತು ದಾರುಣ ಎನ್ನಬಹುದಾದ ಬದುಕಿನ ಹಲವು ರೂಪಗಳು, ಸಮಸ್ಯೆಗಳು ಇಲ್ಲಿ ಚಿತ್ರಿತವಾಗಿವೆ. ಅವರ ಬರಹಗಳನ್ನು ನೋಡಿದರೆ ಅವರೊಬ್ಬ ಬಂಡುಕೋರನಂತೆ, ವ್ಯವಸ್ಥೆಯ ವಿರುದ್ಧ ಸೆಟೆದು ನಿಂತ ನಿರಂತರ ಚಡಪಡಿಕೆಯ ಜೀವಿಯಂತೆ ಕಾಣುತ್ತಾರೆ. ಅವನ್ನು ತಮ್ಮ ಅನನ್ಯವಾದ, ಕನ್ನಡಕ್ಕೆ ವಿಶಿಷ್ಟವಾದ ಶೈಲಿಯಲ್ಲಿ ವಿಷಾದದಿಂದ ತಣ್ಣಗೆ ಬರೆಯುತ್ತಾರೆ. ಅವರ ‘ಭೂಮಿ ಗುಂಡಗಿದೆ’, ‘ಬನ್ನೇರಿ’, ‘ಮಲೆನಾಡಿನ ಹುಡುಗಿ ಬಯಲು ಸೀಮೆ ಹುಡುಗ’, ‘ಸನ್ನಿಧಿ’ ಮತ್ತಿತರ ಕಥೆಗಳು ಕನ್ನಡ ವಾಚಕರಿಗೆ ಪ್ರಿಯವಾದ ಬರವಣಿಗೆಗಳಾಗಿವೆ. ಜೊತೆಗೆ ಅವು ನಾಗತಿಹಳ್ಳಿತನವನ್ನು ತೋರುವ ಕಥೆಗಳೂ ಆಗಿರುವುದು ಅವರ ಬರವಣಿಗೆಯ ವಿಶೇಷ ಹಾಗೂ ಮಹತ್ವದ ಅಂಶ.

ಸರಯೂ ತೀರದಲ್ಲಿ ಒಂದು ಸಂಜೆ
(ಕವನ ಸಂಗ್ರಹ)
ಲೇ: ಗುಬ್ಬಿಗೂಡು ರಮೇಶ್
ಪು: 120; ಬೆ: ರೂ. 50
ಪ್ರ: ಶ್ರೀ ಬಿಳಿಗಿರಿ ಪ್ರಕಾಶನ
ನಂ. 10, ಚಾಮುಂಡಿ ವಿಹಾರ ಬಡಾವಣೆ, ಮೈಸೂರು– 11

ಕವಿತೆಯ ಗುಬ್ಬಚ್ಚಿಗೂಡೊಂದನ್ನು ನೇಯ್ದಿರುವ ಗುಬ್ಬಿಗೂಡು ರಮೇಶ್ ಅವರ ಮೊದಲ ಕವನ ಸಂಗ್ರಹ ಇದು. ಅವರ ಕವಿತೆಯ ಮೊದಲ ಮತ್ತು ತೊದಲು ಮಾತುಗಳನ್ನು ಇವು ಪ್ರಕಟಿಸಿವೆ. ಕವಿತೆಗಳ ಗುಬ್ಬಚ್ಚಿಗೂಡನ್ನು ನೇಯುವುದು ಎಷ್ಟು ಸೂಕ್ಷ್ಮ , ತಾಳ್ಮೆ , ಕಸುಬುಗಾರಿಕೆಯ ಹಾಗೂ ಸವಾಲಿನ ಕೆಲಸ ಎನ್ನುವುದನ್ನು ಅವರ ಕವಿತೆಗಳು ಓದುಗರ ಅರಿವಿಗೆ ತರುವಂತಿವೆ.

ಈ ಸಂಕಲನದ ಮುಖ್ಯ ಕವಿತೆಯಾದ ‘ಸರಯೂ ತೀರದಲ್ಲಿ ಒಂದು ಸಂಜೆ’ ಊರ್ಮಿಳೆಯ ಸ್ವಗತವನ್ನು, ಆ ತೀರದ ಮೌನವನ್ನು ಪರಿಣಾಮಕಾರಿ ಮಾತುಗಳಲ್ಲಿ ಹೇಳುತ್ತದೆ. ‘ಮತ್ತದೇ ಧಾವಂತ,/ ಊರ್ಮಿಳೆಯ ಪ್ರೀತಿ ಶ್ರೀಮಂತ/ ಅಣ್ಣನ ಹಿಡಿದು ಹಿಂದೆ ನಡೆದು ಹೋದವನ/ ಜಾಡು ಹಿಡಿದು ಕಣ್ಣಗಲಿಸಿ ಕುಳಿತ/ ಅಕ್ಕನ ಎದೆ ಭಾರ/ ಅದಕ್ಕೆ ಸಾಕ್ಷಿ ಸರಯೂ ತೀರ’ ಎಂದು ಈ ಕವಿತೆ ಮುಗಿಯುತ್ತದೆ. ಹೆಣ್ಣುಮಕ್ಕಳ ಸಂಕಟಗಳಿಗೆ ನದಿ ತೀರ ಸಾಕ್ಷಿಯಾಗುವ ಚಿತ್ರವೊಂದು ಇಲ್ಲಿದೆ. ಸಂಗ್ರಹದಲ್ಲಿರುವ 50 ಕವಿತೆಗಳಲ್ಲಿ ಈ ಕವಿತೆ ತನ್ನ ಚಿತ್ರಕಶಕ್ತಿಯಿಂದ ಗಮನ ಸೆಳೆಯುವಂತಿದೆ. ಇನ್ನುಳಿದ ಕವಿತೆಗಳಿಗೆ ಸಮಾಜದ ಹಲವಾರು ಸಮಸ್ಯೆಗಳು, ಪ್ರೀತಿ ವಸ್ತುವಾಗಿವೆ. ಇಲ್ಲೆಲ್ಲ ತಡೆರಹಿತ ಮಾತಿನ ಓಟ, ಮೌನದ ಗೈರು ಹಾಜರಿ ಕಾಣುತ್ತದೆ. ಅದರಿಂದ ಈ ಕವಿ ಹೊರಬಂದರೆ ಸರಯೂ ತೀರದ ಮೌನವನ್ನು ಅಭಿವ್ಯಕ್ತಿಸುವ ಕವಿತೆಗಳು ಇನ್ನುಮುಂದೆ ಸಿಗಬಹುದು.

ವೈಶಾಲಿ ಕಾಸರವಳ್ಳಿ ಸಂಕಥನ
(ಆತ್ಮಕಥೆ)
ಲೇ: ನಿಖಿತಾ ಅಡವೀಶಯ್ಯ
ಪು: 128; ಬೆ: ರೂ. 110
ಪ್ರ: ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್, ನಂ. 375/15, ಕೆಂಪೇಗೌಡ ನಗರ, 1ನೇ ಮುಖ್ಯ ರಸ್ತೆ, ಮಾಗಡಿ ಮುಖ್ಯ ರಸ್ತೆ, ವಿಶ್ವನೀಡಂ ಅಂಚೆ, ಬೆಂಗಳೂರು– 560091

ರಂಗಭೂಮಿ, ಸಿನಿಮಾ, ಕಿರುತೆರೆಯ ನಟಿ, ನಿರ್ದೇಶಕಿ ವೈಶಾಲಿ ಕಾಸರವಳ್ಳಿ ಅವರ ಆತ್ಮಕಥೆಯನ್ನು ನಿಖಿತಾ ಅಡವೀಶಯ್ಯ ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ. ವೈಶಾಲಿ ಅವರು ಬದುಕಿದ್ದಾಗಲೇ ಅವರನ್ನು ಸಂದರ್ಶಿಸಿ ಮಾಡಲಾದ ಈ ಬರವಣಿಗೆಯಲ್ಲಿ ಅವರ ವೈಯಕ್ತಿಕ ಹಾಗೂ ದೃಶ್ಯ ಬದುಕಿನ ಕುರಿತು ಅಪೂರ್ವವಾದ ವಿವರಗಳು, ಒಳನೋಟಗಳು ಇವೆ. ಅವರು ತಮ್ಮದೇ ಆದ ಆತ್ಮೀಯ ದನಿಯಲ್ಲಿ ಮಾತನಾಡಿದ್ದು ಅದೇ ಧಾಟಿಯಲ್ಲಿ ಇಲ್ಲಿ ನಿರೂಪಿತವಾಗಿದೆ. ಇದು ಅವರ ಬದುಕಿನ ಕುರಿತಾದ ಸ್ವಗತದಂತೆಯೂ ಓದಿಕೊಳ್ಳುವಂತಿದೆ.

ವೈಶಾಲಿ ಅವರ ಪತಿ, ನಿರ್ದೇಶಕ ಗಿರೀಶ ಕಾಸರವಳ್ಳಿ ಇದಕ್ಕೆ ಮೊದಲ ಮಾತುಗಳನ್ನು ಬರೆದಿದ್ದಾರೆ. ಹಾಗೆಯೇ ವೈಶಾಲಿ ಅವರು ಗಿರೀಶರ ಬಗ್ಗೆ ಆಡಿರುವ ಮಾತುಗಳು ಇದರ ಮಹತ್ವದ ಭಾಗಗಳು. ಇವು ಪರಸ್ಪರರಲ್ಲಿ ಇದ್ದ ಪ್ರೀತಿ, ಅನ್ಯೋನ್ಯತೆ, ಗೌರವವನ್ನು ತೋರಿಸುತ್ತವೆ. ಇದೂ ಸೇರಿದಂತೆ ವೈಶಾಲಿ ಅವರ ಮಕ್ಕಳಾದ ಅಪೂರ್ವ, ಅನನ್ಯ, ನಟರಾದ ಸುಂದರರಾಜ್, ಲೋಕನಾಥ್, ಗಿರಿಜಾ ಲೋಕೇಶ್ ಕೂಡ ವೈಶಾಲಿ ಕುರಿತಂತೆ ಮಾತನಾಡಿದ್ದಾರೆ. ಅವರ ಬದುಕಿನ ಹೋರಾಟ, ಸಿನಿಮಾ, ಧಾರಾವಾಹಿ ಮಾಡುವಾಗಿನ ಅವರ ಪ್ರಯತ್ನ ಇವೆಲ್ಲವೂ ಇಲ್ಲಿ ಬಂದಿವೆ. ಮೃದು ಮಾತಿನ, ಗಟ್ಟಿ ನಿಲುವಿನ ವೈಶಾಲಿ ಅವರ ವ್ಯಕ್ತಿತ್ವ ನಿಖಿತಾ ಅಡವೀಶಯ್ಯ ಅವರ ಬರವಣಿಗೆಯಲ್ಲಿ ದಟ್ಟವಾಗಿ ಮೂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.