ಭಾನುವಾರ, ಜನವರಿ 19, 2020
28 °C
ಪಂಚರಗಿ

ಮೊದಲ ನೋಟದಲ್ಲೇ ಬ್ರಿಟ್ನಿಗೆ ಪ್ರೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೊದಲ ನೋಟದಲ್ಲೇ ಬ್ರಿಟ್ನಿಗೆ ಪ್ರೀತಿ

ಗಾಯಕಿ ಹಾಗೂ ನಟಿ ಬ್ರಿಟ್ನಿ ಸ್ಪಿಯರ್ಸ್‌ ಅವರಿಗೆ ತಮ್ಮ ಗೆಳೆಯ ಡೇವಿಡ್‌ ಲುಕಾಡೊ ಅವರ ಸರಳ ಗುಣ ಹಾಗೂ ಹಾಸ್ಯ ಮಿಶ್ರಿತ ಮಾತುಗಳು ಬಹುವಾಗಿ ಹಿಡಿಸಿವೆಯಂತೆ.ವಕೀಲಿ ವೃತ್ತಿಯಲ್ಲಿರುವ ಡೇವಿಡ್‌ ಅವರು ಕೆಲವು ಪಾರ್ಟಿಗಳಲ್ಲಿ ಭೇಟಿಯಾಗುತ್ತಿದ್ದ ಬ್ರಿಟ್ನಿ ನಡುವೆ ಉಂಟಾಗಿದ್ದ ಗೆಳೆತನ ಈಗ ಪ್ರೇಮದ ರೂಪ ಪಡೆದಿದೆ. ‘ಡೇವಿಡ್‌ ಬಹಳ ಸರಳ ವ್ಯಕ್ತಿ. ಅವರ ಪ್ರತಿ ಮಾತಿನಲ್ಲೂ ಯಾರನ್ನೂ ನೋಯಿಸದಂಥ ಹಾಸ್ಯ ಇರುತ್ತದೆ. ಅದು ನನಗಿಷ್ಟ. ಆತ ನಿಜವಾಗಿಯೂ ಒಳ್ಳೆಯ ವ್ಯಕ್ತಿ’ ಎಂದು ಗೆಳಯನನ್ನು ಮುಕ್ತಕಂಠದಿಂದ ಹೊಗಳಿದ್ದಾರೆ.ಕಳೆದ ಮೂರು ವರ್ಷಗಳಿಂದ ಡೇಟಿಂಗ್‌ ನಡೆಸುತ್ತಿದ್ದ ಜೇಸನ್‌ ಟ್ರಾವಿಕ್‌ ಅವರೊಂದಿಗಿನ ಸಂಬಂಧವನ್ನು ಕಳೆದ ಜನವರಿಯಲ್ಲಿ ಕಡಿದುಕೊಂಡ ಬ್ರಿಟ್ನಿ ಇದೀಗ ಲುಕಾಡೊ ಅವರೊಂದಿಗೆ ಡೇಟಿಂಗ್‌ ಆರಂಭಿಸಿದ್ದಾರೆ. ಬ್ರಿಟ್ನಿ ಅವರ ಮಾಜಿ ಪತಿ ಕೆವಿನ್‌ ಫೆಡೆರ್ನಿಲ್‌ ಅವರಿಂದ ಎಂಟು ವರ್ಷದ ಸೀನ್‌ ಹಾಗೂ ಏಳು ವರ್ಷದ ಜೇಡೆನ್‌ಎಂಬ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ.ಸಂಗೀತವನ್ನು ಬಹುವಾಗಿ ಇಷ್ಟಪಡುವ ಬ್ರಿಟ್ನಿಗೆ ಅವರ ಪ್ರೇಮ ಸಂಬಂಧಗಳು ಯಾವುದೇ ತೊಡಕನ್ನುಂಟುಮಾಡಿಲ್ಲವಂತೆ. ‘ನಾನು ಯಾರನ್ನಾದರೂ ನೋಡಿದರೆ ಮೊದಲ ನೋಟದಲ್ಲೇ ಅವರ ಮೇಲೆ ಪ್ರೇಮ ಉಂಟಾಗುತ್ತದೆ. ಅದು ನಂತರ ಹಾಗೆಯೇ ಮುಂದುವರಿಯುತ್ತದೆ. ಈ ಹಂತದಲ್ಲಿ ನನ್ನ ಭಾವನೆಗಳನ್ನು ನಾನು ತಡೆಹಿಡಿಯಲು ಹೋಗುವುದಿಲ್ಲ. ನನ್ನ ಹೃದಯ ಏನು ಹೇಳುತ್ತದೋ  ಹಾಗೆ ಮಾಡುತ್ತೇನೆ’ ಎಂದು ತಮ್ಮ ಮನದ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ ಬ್ರಿಟ್ನಿ.

 

ಪ್ರತಿಕ್ರಿಯಿಸಿ (+)