ಬೆಂಗಳೂರು: ಐಪಿಎಲ್ ಐದನೇ ಆವೃತ್ತಿಗೆ ಇನ್ನು ನಾಲ್ಕು ದಿನ ಬಾಕಿ ಇದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಆಟಗಾರರು ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರವೂ ಆಟಗಾರರು ಅಭ್ಯಾಸ ಪಂದ್ಯವನ್ನು ಆಡಿದರು.
ಸ್ನಾಯುಸೆಳೆತದ ನೋವಿನಿಂದ ಚೇತರಿಸಿಕೊಂಡಿರುವ ಜಹೀರ್ ಖಾನ್ ಸಾಕಷ್ಟು ಹೊತ್ತು ಬೌಲಿಂಗ್ ಅಭ್ಯಾಸ ನಡೆಸಿದರು. ಫೆಬ್ರುವರಿ 28ರಂದು ಶ್ರೀಲಂಕಾ ವಿರುದ್ಧ ಹೋಬರ್ಟ್ನಲ್ಲಿ ಆಡಿದ್ದ ಪಂದ್ಯವೇ ಜಹೀರ್ಗೆ ಕೊನೆಯದಾಗಿತ್ತು. ನೋವಿನ ಕಾರಣದಿಂದ ಅವರು ಕಣಕ್ಕಿಳಿದಿರಲಿಲ್ಲ.

ಎಡಗೈ ವೇಗಿ ಜಹೀರ್ ಜೊತೆ ಅಭಿಮನ್ಯು ಮಿಥುನ್, ನಾಯಕ ಡೇನಿಯಲ್ ವೆಟೋರಿ, ಕರ್ನಾಟಕದ ಆರ್. ವಿನಯ್ ಕುಮಾರ್ ಅಭ್ಯಾಸ ನಡೆಸಿದರು.

`ಜಹೀರ್ ಅತ್ಯುತ್ತಮ ಬೌಲರ್. ಐಪಿಎಲ್ನಲ್ಲಿ ಇದೇ ಮೊದಲ ಸಲ ಅವರ ಜೊತೆ ಆಡುವ ಅವಕಾಶ ಲಭಿಸಿದೆ. ಈ ಸಲ ನನ್ನ ಸಾಮರ್ಥ್ಯವನ್ನು ಸಾಬೀತು ಪಡಿಸುತ್ತೇನೆ~ ಎಂದು ವಿನಯ್ ವಿಶ್ವಾಸ ವ್ಯಕ್ತಪಡಿಸಿದರು.

`ತವರು ನೆಲದಲ್ಲಿ ಮೊದಲ ಪಂದ್ಯ ಆಯೋಜನೆಯಾಗಿರುವುದು ಖುಷಿ ನೀಡಿದೆ. ರಣಜಿ ಕ್ರಿಕೆಟ್ಗೆ ಬಂದ ಮೇಲೆ ಹಿರಿಯ ಆಟಗಾರರಿಂದ ಸಾಕಷ್ಟು ತಿಳಿದುಕೊಂಡಿದ್ದೇನೆ~ ಎಂದು ವಿನಯ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.