ಶುಕ್ರವಾರ, ಆಗಸ್ಟ್ 7, 2020
25 °C
ತ್ರೀಕೋನ ಏಕದಿನ ಸರಣಿ

ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಭಾರತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಭಾರತ

ಕಿಂಗ್‌ಸ್ಟನ್ : ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯಲ್ಲಿ ಭಾರತ ತಂಡವು ವೆಸ್ಟ್‌ಇಂಡೀಸ್ ವಿರುದ್ಧ ಭಾನುವಾರ ಆಡಿದ ಮೊದಲ ಪಂದ್ಯದಲ್ಲೇ ಸೋತಿದೆ. ಇನ್ನೂ 14 ಎಸೆತಗಳು ಬಾಕಿ ಇರುವಂತೆಯೇ ವಿಂಡೀಸ್ ಒಂದು ವಿಕೆಟ್ ಗಳ ಗೆಲುವು ಪಡೆಯಿತು.

ಸಬೀನಾ ಪಾರ್ಕ್ ಕ್ರೀಡಾಂಗಣದಲ್ಲಿ ಟಾಸ್ ಸೋತರೂ ದೋನಿ ಬಳಗಕ್ಕೆ ಮೊದಲು ಬ್ಯಾಟ್ ಮಾಡಲು ಅವಕಾಶ ಲಭಿಸಿತು. ಆದರೆ ವಿಂಡೀಸ್ ದಾಳಿಗೆ ಸಿಲುಕಿ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 229 ರನ್ ಕಲೆಹಾಕಿತು. ರೋಹಿತ್ ಶರ್ಮಾ ಅರ್ಧಶತಕ ಮತ್ತು ಸುರೇಶ್ ರೈನಾ 44 ರನ್ ತಂಡದ ಪರ ಅತ್ಯಧಿಕ ಮೊತ್ತ.

    

ವಿಂಡೀಸ್ ತಂಡದ ಕೆಮರ್ ರೋಚ್, ಟಿನೊ ಬೆಸ್ಟ್ ಮತ್ತು ಡರೆನ್ ಸಮಿ ತಲಾ ಎರಡು ವಿಕೆಟ್ ಪಡೆದರು. ಮಾರ್ಲೊನ್ ಸ್ಯಾಮುಯೆಲ್ಸ್ 9 ಓವರ್‌ಗಳಲ್ಲಿ ಕೇವಲ 20 ರನ್ ನೀಡಿ ಒಂದು ವಿಕೆಟ್ ಕಿತ್ತರು.

ಬಳಿಕ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಕೀರನ್ ಪೊಲಾರ್ಡ್ ನಾಯಕತ್ವದ ವಿಂಡೀಸ್ ತಂಡವೂ ಭಾರತದ ಕರಾರುವಕ್ಕಾದ ದಾಳಿಗೆ ನಲುಗಿತು. ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ್ದ ಗೇಲ್ (11ರನ್) ನಿರ್ಗಮನ ತಂಡಕ್ಕೆ ಆಘಾತ ನೀಡಿತು. ಆದರೆ ಚಾರ್ಲ್ಸ್ (95 ರನ್ 100 ಎಸೆತ) ಮತ್ತು ಬ್ರಾವೋ (55ರನ್ 78ಎಸೆತ) ತಂಡಕ್ಕೆ ಆಸರೆಯಾದರು. ಕೊನೆಯಲ್ಲಿ ನರೇನ್ ಮತ್ತು ರೋಚ್ ತಂಡವನ್ನು ಗೆಲುವಿನ ದಡ ಸೇರಿಸಿದರು.

ಭಾರತದ ಪರ ಉತ್ತಮ ದಾಳಿ ನಡೆಸಿದ ವೇಗಿಗಳಾದ ಉಮೇಶ್ ಯಾದವ್ 3, ಇಶಾಂತ್ ಶರ್ಮಾ 2, ಭುವನೇಶ್ವರ್ ಕುಮಾರ್ 1 ವಿಕೆಟ್ ಪಡೆದರು. ಸ್ಪಿನ್ನರ್ ಗಳಾದ ಅಶ್ವಿನ್ 2, ರೈನಾ 1 ವಿಕೆಟ್ ಪಡೆದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.