ಬೇಲೂರು ವರದಿ:  ಪಟ್ಟಣದಲ್ಲಿ ಗುರುವಾರ ವರ್ಷದ ಮೊದಲ ಮಳೆ ಧಾರಾಕಾರವಾಗಿ ಸುರಿಯಿತು. ಭಾರಿ ಗಾಳಿ, ಗುಡುಗು, ಸಿಡಿಲಿನಿಂದ ಕೂಡಿದ್ದ ಉತ್ತರಾಬಾದ್ರ ಮಳೆ ಬಿದ್ದಿದ್ದರಿಂದ ಇಳೆ ತಂಪಾಗಿ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಮಧ್ಯಾಹ್ನ 3.30ರ ವೇಳೆಗೆ ಆರಂಭಗೊಂಡ ವರ್ಷಧಾರೆ ಒಂದು ಗಂಟೆಗೂ ಹೆಚ್ಚು ಕಾಲ ಸುರಿಯಿತು. ಅನಿರೀಕ್ಷಿತ ಮಳೆಯಿಂದಾಗಿ ಜನ ಬದಿ ಅಂಗಡಿಗಳು, ಮರಗಳ ಕೆಳಗೆ ಕೆಲ ಕಾಲ ಆಶ್ರಯಪಡೆಯುವಂತಾಯಿತು.

ಈ ಮಳೆ ಕಾಫಿ ತೋಟಗಳಿಗೆ ಅನುಕೂಲವಾಗಿದೆ. ಕೆಲ ದಿನ ಹಿಂದೆ ಕಾಫಿ ಬೆಳೆಯುವ ಪ್ರದೇಶದಲ್ಲಿ ಸ್ವಲ್ಪ ಮಳೆ ಬಿದ್ದಿದ್ದರಿಂದ ಕಾಫಿ ಗಿಡಗಳು ಹೂ ಬಿಟ್ಟಿದ್ದವು. ನಂತರ ಮಳೆ ಬೀಳದೆ ಕಾಫಿ ತೋಟಗಳಲ್ಲಿ ಉಷ್ಣಾಂಶ ಹೆಚ್ಚಾಗಿ ಕಾಫಿ ಬೀಜಗಳ ಬೆಳವಣಿಗೆ ಕುಂಠಿತಗೊಂಡಿತ್ತು. ಈ ಮಳೆ ಕಾಫಿ ತೋಟಗಳಿಗೆ ನೀರುಣಿಸಿ ತಕ್ಕಮಟ್ಟಿಗೆ ಉಷ್ಣಾಂಶ ಇಳಿಸಿದೆ ಜೊತೆಗೆ ಕಾಫಿ ಬೀಜಗಳ ಬೆಳವಣಿಗೆಗೂ ಅನುಕೂಲ ಮಾಡಿಕೊಟ್ಟು ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಹಳೇಬೀಡು ವರದಿ: ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಗುರುವಾರ ವರುಣನ ಆಗಮನದಿಂದ ಉಷ್ಣಾಂಶ ಕುಗ್ಗಿ ಭೂಮಿ ತಂಪಾಗಿದೆ. ಬಿಸಿಲಿನ ಝಳಕ್ಕೆ ತತ್ತರಿಸಿದ್ದ ಜನತೆಗೆ ಅನಿರೀಕ್ಷಿತ ಮಳೆಯಿಂದ ಸಂತಸ ಉಂಟಾಗಿದೆ. ವಿದ್ಯುತ್ ಅಭಾವ, ಸೂರ್ಯನ ಕೆಂಗಣ್ಣಿನ ನಡುವೆ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಈ ಮಳೆ ಬೆಳೆಗಳು ಚೇತರಿಸಿಕೊಳ್ಳಲು ಅನುಕೂಲ ಮಾಡಿಕೊಟ್ಟಿದೆ. ಮಳೆ ಬಂದಿರುವುದರಿಂದ ಮುಂದಿನ ದಿನದಲ್ಲಿ ಉಷ್ಣಾಂಶದ ತೀವ್ರತೆ ಹೆಚ್ಚಾಗಲಿದೆ. ಆಗಾಗ್ಗೆ ಮಳೆ ಬಂದರೆ ಮಾತ್ರ ಭೂಮಿ ತಣ್ಣಗಾಗುತ್ತದೆ. ಮುಂದಿನ ಮಳೆ ಕೈಕೊಟ್ಟರೆ ಸಮಸ್ಯೆ ಹೆಚ್ಚಾಗುತ್ತದೆ ಎಂಬುದು ರೈತರ ನುಡಿ.

ಹಳೇಬೀಡಿನ ಚರಂಡಿಗಳು ತಿರುವುಗಳಲ್ಲಿ ಪಾಸ್ಟಿಕ್, ತ್ಯಾಜ್ಯ ಕಟ್ಟಿದ್ದರಿಂದ ಮಳೆ ಕೊಳವೆ ನೀರು ಚರಂಡಿಗಳಲ್ಲಿ ಸರಾಗವಾಗಿ ಹರಿಯದೇ ರಸ್ತೆಯಲ್ಲಿ ಹರಿಯಿತು. ಮಳೆ ನಿಲ್ಲುವ ವೇಳೆಗೆ ಚರಂಡಿ ನೀರು ರಸ್ತೆಗೆ ನುಗ್ಗಿ, ರಸ್ತೆಯಲ್ಲಿ ಹರಿಯುತ್ತಿದ್ದ ಕಪ್ಪು ಬಣ್ಣದ ಕೊಚ್ಚೆ ನೀರು ವಾಹನ ಸಂಚರಿಸುವಾಗ ರಸ್ತೆ ಬದಿಯಲ್ಲಿ ಓಡಾಡುತ್ತಿದ್ದ ಜನರಿಗೆ ಚಿಮ್ಮುತ್ತಿತ್ತು.ರಸ್ತೆಯಲ್ಲಿ ಕಾಲಿಡಲು ಸ್ಥಳವಿಲ್ಲದೆ, ಜನರು ಅಸಹ್ಯಪಟ್ಟುಕೊಂಡು ಕೊಚ್ಚೆ ದಾಟಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.

ಅರಕಲಗೂಡು ವರದಿ: ತಾಲ್ಲೂಕಿನಲ್ಲಿ ಬುಧವಾರ ರಾತ್ರಿ ಗುಡುಗು ಸಿಡಿಲಿನಿಂದ ಕೂಡಿದ ಮಳೆ ಸುರಿಯಿತು. ಬಿಸಿಲ ಬೇಗೆಯಿಂದ ಬಳಲಿದ್ದ ಜನತೆಗೆ ವರ್ಷದ ಮೊದಲ ಮಳೆ ತಂಪೆರೆಯಿತು. ಅರಕಲಗೂಡು 11.3, ಮಲ್ಲಿಪಟ್ಟಣ 1, ದೊಡ್ಡಮಗ್ಗೆ 19.2, ಕೊಣನೂರು 11.8, ದೊಡ್ಡಬೆಮ್ಮತ್ತಿಯಲ್ಲಿ 12.2 ಮಿ.ಮೀ ಮಳೆಯಾಗಿದೆ.

ಚನ್ನರಾಯಪಟ್ಟಣ ವರದಿ: ಪಟ್ಟಣ ಸೇರಿ ತಾಲ್ಲೂಕಿನ ವಿವಿಧೆಡೆ ಗುರುವಾರ ಮುಂಜಾನೆ 45 ನಿಮಿಷ ಮಳೆ ಸುರಿಯಿತು. ಮಂಗಳವಾರ, ಬುಧ ವಾರ ಮಧ್ಯಾಹ್ನದಿಂದಲೇ ಮೋಡ ಮುಸುಕಿದ ವಾತವಾರಣವಿತ್ತಾದರೂ ಮಳೆಯಾಗಲಿಲ್ಲ. ಗುರುವಾರ ಮುಂಜಾನೆ 3 ಗಂಟೆಗೆ ಪಟ್ಟಣದಲ್ಲಿ ಆರಂಭವಾದ ಮಳೆ 45 ನಿಮಿಷ ಸುರಿಯಿತು. ಮಳೆಯ ಸಿಂಚನದಿಂದ ಮುಂಜಾನೆ ಬಿಸಿಲಿನ ಧಗೆ ಕಡಿಮೆಯಾಯಿತು. ನುಗ್ಗೇಹಳ್ಳಿ ಮಳೆಮಾಪನ ಕೇಂದ್ರದಲ್ಲಿ 32.4 ಮಿ.ಮೀ, ಶ್ರವಣಬೆಳಗೊಳ ಕೇಂದ್ರದಲ್ಲಿ 33.8 ಮಿಮೀ ಮಳೆ ಬಿದ್ದಿದೆ. ಮಳೆಯಿಂದ ಗುರುವಾರ ನಡೆಯಬೇಕಿದ್ದ ಭಗವಾನ್ ಬಾಹುಬಲಿ ತಾಂತ್ರಿಕ ಕಾಲೇಜಿನ ವಾರ್ಷಿಕ ಕ್ರೀಡಾಕೂಟವನ್ನು ಮುಂದೂಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.