ಶನಿವಾರ, ಜನವರಿ 25, 2020
29 °C
ಬೋರ್ಡ್ ರೂಮಿನ ಸುತ್ತ ಮುತ್ತ

ಮೊದಲ ಸುತ್ತಿನ ಪಡೆ

ಸತ್ಯೇಶ್ ಎನ್. ಬೆಳ್ಳೂರ್ Updated:

ಅಕ್ಷರ ಗಾತ್ರ : | |

ನಿನ್ನ ಸಿದ್ಧಾಂತದಲಿ ನಂಬಿಕೆಯನಿಟ್ಟವರ/

ಮುನ್ನ ಗುರುತಿಸಿಕೊಂಡು ಪಡೆಯೊಂದ ಕಟ್ಟಿ//

ಚಿನ್ನದಲಿ ಅವರೊಡನೆ ಒಮ್ಮತದಿ ದುಡಿದಾಗ/

ಇನ್ನೆಲ್ಲಿ ಸೋಲುಂಟು? – ನವ್ಯಜೀವಿ//
ಹಿಂದಿನ ಲೇಖನದಲ್ಲಿ ಓದಿದಂತೆ ಒಂದು ಸುಂದರ ವಾದ ಕತೆಯನ್ನು ಹೆಣೆದು ಅದನ್ನು ಕಂಪೆನಿಯ ಎಲ್ಲ ರಿಗೂ ಮನದಟ್ಟಾಗುವಂತೆ ತಿಳಿಹೇಳುವುದೇ ಬೃಹತ್‌ ಬದಲಾವಣೆಯನ್ನು ನಿಯಂತ್ರಿಸುತ್ತಿರುವ ಕಂಪೆನಿಯ ಮುಖ್ಯಸ್ಥನ ಮೊದಲ ಕರ್ತವ್ಯ.ಆ ಕತೆ ಸರಳವಾಗಿರಬೇಕು. ನೇರವಾಗಿರಬೇಕು. ಕೇಳುಗನ ಎದೆಗೆ ಲಗ್ಗೆ ಹಾಕಬೇಕು. ದಿನದಿಂದ ದಿನಕ್ಕೆ ಬದಲಾಗ ದಂತೆ ಆದಷ್ಟೂ ಏಕಮುಖವಾಗಿರಬೇಕು. ಇಂತಹ ಒಂದು ಕತೆಯನ್ನು ಹೆಣೆದು ಅದನ್ನು ಎಲ್ಲರೊ ಡನೆ ಪರಿಣಾಮಕಾರಿ ಯಾಗಿ ಹಂಚಿಕೊಳ್ಳುವು ದಿ­ದೆ ಯಲ್ಲ, ಅದು ಎಲ್ಲರೂ ತಿಳಿದಷ್ಟು ಸುಲಭವಲ್ಲ. ಏಕೆಂದರೆ, ಅಂತಹ ಕತೆಯನ್ನು ಹೇಳುವ ನಾಯಕನಲ್ಲಿ ಎಲ್ಲಕ್ಕಿಂತ ಮಿಗಿಲಾಗಿ ಪ್ರಾಮಾಣಿಕತೆ ಇರಬೇಕು. ತನ್ನ ಸ್ವಾರ್ಥವನ್ನು ಬದಿಗಿಟ್ಟು ಕಂಪೆನಿಯ ಉಳಿವು ಹಾಗೂ ಬೆಳವಣಿಗೆಯನ್ನು ಮಾತ್ರವೇ ಆಶಿಸುವ ವಿಶಾಲ ಮನೋಭಾವ ಬೇಕು. ತನ್ನ ತಪ್ಪುಗಳನ್ನು ಒಪ್ಪಿಕೊಳ್ಳ ಬಲ್ಲ ಹೃದಯ ಶ್ರೀಮಂತಿಕೆ ಬೇಕು. ಹಾಗೂ ಸಕಾಲದಲ್ಲಿ ಕಠಿಣವಾದ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲ ಎದೆಗಾರಿಕೆ ಬೇಕು.ಬೋರ್ಡ್‌ರೂಮಿನ ಸುತ್ತಮುತ್ತ ಈ ಎಲ್ಲ ಗುಣ ಗಳೂ ಸರ್ವಕಾಲದಲ್ಲೂ ಕಡಿಮೆ ಪ್ರಮಾಣದಲ್ಲೇ ಇರುವುದರಿಂದ ಕತೆಯೊಂದನ್ನು ಹೆಣೆದು ಅದನ್ನು ಸಮರ್ಪಕವಾಗಿ ನಿರೂಪಿಸಬಲ್ಲ ನಾಯಕತ್ವದ ಕೊರತೆಯೇ ಅನೇಕ ಸನ್ನಿವೇಶಗಳಲ್ಲಿ ಬದಲಾವಣೆಯ ಮೊದಲ ಅಡ್ಡಿಯಾಗಿ ಬಿಡುತ್ತದೆ.ಕತೆಯೊಂದನ್ನು ಹೆಣೆಯುವುದು ಅದೆಷ್ಟು ಕಷ್ಟವೋ, ಆ ಕತೆಯನ್ನು ಕಂಪೆನಿಯ ಎಲ್ಲರಿಗೂ ಮುಟ್ಟಿಸಿ ಅವ ರೆಲ್ಲರ ಸಮರ್ಥನೆಯನ್ನು ಗಳಿಸಿಕೊಳ್ಳುವುದೂ ಅಷ್ಟೇ ಕಷ್ಟ. ಅನೇಕರು ಈ ಹಂತದಲ್ಲೇ ಎಡವಿರುವುದನ್ನು ಕಂಡಿದ್ದೇನೆ. ಬದಲಾವಣೆಯ ಕಥನ ಚೆನ್ನಾಗಿದೆ. ಅದರ ಅನುಷ್ಠಾನ ಸರಳವಾಗಿದೆ ಹಾಗೂ ಅದರ ಯಶಸ್ಸಿನ ಸಾಧ್ಯತೆಗಳು ಸ್ಪಷ್ಟವಾಗಿವೆ. ಆದರೂ, ಕಂಪೆನಿಯ ಎಲ್ಲರೂ ಈ ಬದಲಾವಣೆಗೆ ಕೈಜೋಡಿಸುವುದಿಲ್ಲ. ಇನ್ನೇನು ದಕ್ಕಿತು ಎನ್ನುವಷ್ಟರಲ್ಲಿ ಸುಖಾಂತ್ಯ ಮರೀಚಿಕೆ ಯಾಗಿ ಬಿಡುತ್ತದೆ.ದೇಶದಲ್ಲಿ, ಅದರಲ್ಲೂ ದೆಹಲಿಯಲ್ಲಿ ನಡೆದ ಇತ್ತೀ ಚಿನ ವಿದ್ಯಮಾನಗಳನ್ನು ಒಮ್ಮೆ ಮೆಲಕು ಹಾಕೋಣ. ನನ್ನ ಯಾವುದೇ ಬೋರ್ಡ್‌ ರೂಮಿನ ಸುತ್ತಮುತ್ತಲಿನ ಲೇಖನಗಳಲ್ಲಿ ನಾನು ರಾಜಕೀಯದ ಬಗ್ಗೆ ಬರೆದವ ನಲ್ಲ. ಆದರೆ ಈ ಲೇಖನದಲ್ಲಿ ದೆಹಲಿಯ ರಾಜಕೀಯ ಬೆಳವಣಿಗೆಗಳತ್ತ ದೃಷ್ಟಿ ಹರಿಸಿದ್ದೇನೆ. ಏಕೆಂದರೆ ಆ ರಾಜ ಕೀಯದಾಟದಲ್ಲಿ ನನಗೆ ಬೃಹತ್‌ ಬದಲಾವಣೆ ಯೊಂದನ್ನು ಬೋರ್ಡ್‌ ರೂಮಿನ ಸುತ್ತಮುತ್ತ ಹೇಗೆ ತರಬೇಕೆಂಬುದರ ಸಮಸ್ಯೆಗೆ ಅತ್ಯಂತ ಕಾರ್ಯೋಪ ಯೋಗಿಯಾದ ಪರಿಹಾರ ಗೋಚರವಾಗಿದೆ. ಓದು ಗರು ಈ ಲೇಖನವನ್ನು ಅದೊಂದೇ ನಿಟ್ಟಿನಲ್ಲಿ ಅರ್ಥೈ ಸಿಕೊಳ್ಳುವುದು ಸಮಂಜಸವಾದೀತು.ದೇಶವನ್ನಾಳುವ ಪಕ್ಷಗಳು ಹಾಗೂ ಕೆಲ  ರಾಜ್ಯಗ ಳನ್ನು ತನ್ನ ತೆಕ್ಕೆಯೊಳ­ಗಿಟ್ಟುಕೊಂಡು ಪ್ರಾಂತೀಯ ಪಕ್ಷ ಗಳು ಭ್ರಷ್ಟಾಚಾರವನ್ನೇ ತಮ್ಮ ಆಹಾರವನ್ನಾಗಿಸಿ ಕೊಂಡು ದರ್ಬಾರು ನಡೆಸು­ತ್ತಿದ್ದುದು ಎಲ್ಲರಿಗೂ ವೇದ್ಯ ವಾದ ಸಂಗತಿ. ದೇಶದ ಬಹುತೇಕ ಜನತೆ ಈ ಪರಿಯ ರಾಜಕೀಯಕ್ಕೆ ವಿಧಿ ಇಲ್ಲದೇ ಒಗ್ಗಿಕೊಂಡಿದ್ದು ಒಂದು ವಿಷಾದದ ಸಂಗತಿ.ದೆಹಲಿಯಲ್ಲಿ ಅಣ್ಣಾ ಹಜಾರೆ ಲೋಕಪಾಲ ಮಸೂ ದೆಯನ್ನು ಜಾರಿಗೊಳಿಸುವಂತೆ ಉಪವಾಸಕ್ಕೆ ಕುಳಿತದ್ದೇ ತಡ, ಭ್ರಷ್ಟಾಚಾರದ ವಿರುದ್ಧ ತಮ್ಮ ತಮ್ಮಲ್ಲೇ ರೊಚ್ಚಿ ಗೆದ್ದಿದ್ದ ನಾಡಿನ ಜನತೆ ಒಂದಾಗಿ ಬೀದಿಗಿಳಿದರು. ತಮ್ಮೆಲ್ಲ ಸುಪ್ತ ನೋವುಗಳನ್ನು ಒಕ್ಕೊರಳಿನಿಂದ ಹೊರ ಚಿಮ್ಮಿದರು. ದೇಶದಾದ್ಯಂತ ಒಂದು ಬೃಹತ್‌ ಬದಲಾ ವಣೆಗೆ ಚಾಲನೆ ನೀಡಿಬಿಟ್ಟರು.ಸಮಸ್ಯೆಯನ್ನೆಂದೂ ಹೊರಗಿನಿಂದ ನಿಭಾಯಿಸಲಾ ಗು­ವುದಿಲ್ಲ ಎಂಬ ಸತ್ಯದ ಹಿನ್ನೆಲೆಯಲ್ಲೇ ಅರವಿಂದ ಕೇಜ್ರಿ ವಾಲರಂತಹ ಕೆಲವು ಸಂಭಾವಿತ ಧೈರ್ಯಶಾಲಿಗಳು ‘ಆಮ್‌ ಆದ್ಮಿ’ ಎಂಬ ಪಕ್ಷ ಕಟ್ಟಿ ವ್ಯವಸ್ಥೆಯ ಒಳಗಿದ್ದು ಸಮರ ನಡೆಸುವ ನಿರ್ಧಾರ ಮಾಡುತ್ತಾರೆ. ಭ್ರಷ್ಟ ರಾಜ ಕೀಯ ಸೃಷ್ಟಿಸುವ ಎಲ್ಲ ವಿವಾದ ಹಾಗೂ ಆತಂಕಗಳ ನಡುವೆ ಈ ಪಕ್ಷ ಮುನ್ನಡೆಯುತ್ತದೆ. ಜನರ ಆಶೋತ್ತರ ಗಳಿಗೆ ಉತ್ತರವಾಗಿ ಸಾಕಷ್ಟು ಮನ್ನಣೆಗಳಿಸುತ್ತದೆ. ಎಲ್ಲ ಕ್ಕಿಂತ ಮುಖ್ಯವಾಗಿ ದೇಶದ ಭ್ರಷ್ಟ ರಾಜಕಾರಣಿಗಳಿಗೆ– ‘ಇನ್ನು ನಿಮ್ಮ ಕಳ್ಳಾಟವನ್ನು ಜನ ನುಂಗಿಕೊಂಡು ಬದು ಕುವುದಿಲ್ಲ. ಕಡೇ ಪಕ್ಷ ನಿಮ್ಮದೇ ಆತ್ಮೋನ್ನತಿಗಾದರೂ ತೀವ್ರವಾಗಿ ಬದಲಾಗಿ’ ಎಂಬ ಸಂದೇಶ ಸಾರುತ್ತದೆ.ಈ ಬದಲಾವಣೆಯ ಹಾದಿಯಲ್ಲಿ ಅರವಿಂದ್‌ ಇಟ್ಟ ಕೆಲ ಹೆಜ್ಜೆಗಳು ನನಗೆ ಅತ್ಯಂತ ಅಪ್ಯಾಯನವೆನಿಸಿತು. ಮೊದಲಿಗೆ, ಪಕ್ಷಕ್ಕೆ ಇಟ್ಟ ಹೆಸರು. ‘ಆಮ್‌ ಆದ್ಮಿ’, ಎಂದರೆ ಜನ ಸಾಮಾನ್ಯ. ಇದರಲ್ಲಿ ಮಿಕ್ಕ ಪಕ್ಷಗಳಂತೆ ನಿಲುಕದ ಸಿದ್ಧಾಂತಗಳ ದೊಡ್ಡ ದೊಡ್ಡ ಪದಗಳಿಲ್ಲ. ಇದು ನಿಮ್ಮದೇ ಪಕ್ಷ ಎಂಬ ಕೂಗಿನಲ್ಲಿ ಸಮಾಜ ಪರ ವಾದ ಅದೆಷ್ಟು ಕಳಕಳಿ ಒಮ್ಮೆಗೇ ವ್ಯಕ್ತವಾಗಿ ಬಿಡುತ್ತದೆ.ಪಕ್ಷದ ಲಾಂಛನ ‘ಪೊರಕೆ’. ನಮ್ಮ ಮನೆಯ ಕಸವ ನ್ನೆಲ್ಲ ತೆಗೆದು ಸ್ವಚ್ಛವಾಗಿಡುವ ಈ ಸಾಧಾರಣ ಸಾಧನ ಸಮಾಜದಲ್ಲಿನ ಭ್ರಷ್ಟತೆಯನ್ನು ಹೋಗಲಾಡಿಸುವ ಸಂಕೇತ. ಪಕ್ಷದ ಗುರಿ ಪ್ರತಿಪಾದಿಸುವ ಮತ್ತೊಂದು ಚಿಹ್ನೆ ನನಗಂತೂ ಇದರ ಹೊರತು ಕಂಡು ಬರುತ್ತಿಲ್ಲ. ಈ ಎರಡರ ತಳಹದಿ ಮೇಲೆ ಅರವಿಂದ್ ಭ್ರಷ್ಟತೆಯನ್ನು ಮಾತ್ರವೇ ಕೇಂದ್ರವಾಗಿಟ್ಟುಕೊಂಡು ಒಂದು ಸುಂದರ ಕತೆ ಹೆಣೆಯುತ್ತಾರೆ. ಆ ಕತೆ ಜನಸಾಮಾನ್ಯರ ಸುತ್ತ ಆಶಯಗಳಿಗೆ ಬುನಾದಿಯಾಗುತ್ತದೆ. ಜನಸಾಮಾನ್ಯನ ಅಸಹಾಯಕತೆಗೆ ಸೂಕ್ತ ಬಿಡುಗಡೆಯ ಮಾರ್ಗವನ್ನು ತೋರಿಬಿಡುತ್ತದೆ. ಬೋರ್ಡ್‌ ರೂಮಿನ ಸುತ್ತಮುತ್ತ ಲಿನ ನಾಯಕರು ನೇರ ಹೃದಯಕ್ಕೇ ಲಗ್ಗೆ ಇಡಬಲ್ಲ ಈ ಪರಿಯ ಸಂವೇದನಾತ್ಮಕವಾದ ಕತೆಯನ್ನು ಹೆಣೆಯುವು ದಾದರೆ ಕಂಪೆನಿ ಕೈಗೊಳ್ಳುವ ಎಲ್ಲ ಬದಲಾವಣೆಗಳು ಶುರುವಿನಲ್ಲೇ ಜಯದ ಸರಿ ಹಾದಿಯಲ್ಲಿ ಚಲಿಸುವುದು ಖಂಡಿತ.ಭ್ರಷ್ಟಾಚಾರದ ವಿರುದ್ಧದ ದನಿ ಪಕ್ಷದ ಎಲ್ಲ ಹೇಳಿಕೆ ಗಳಲ್ಲಿ, ಸಿದ್ಧಾಂತಗಳಲ್ಲಿ ಹಾಗೂ ಚುನಾವಣೆಯ ಪ್ರಣಾಳಿಕೆಗಳಲ್ಲಿ ಒಮ್ಮೆಯೂ ಬದಲಾಗದಂತೆ ಹಾಗೂ ಕ್ಷೀಣಗೊಳ್ಳದಂತೆ ಸ್ಪಷ್ಟವಾಗಿ ಮೂಡಿಬರುತ್ತದೆ. ಹಾಗಾಗಿಯೇ ಈ ಕಹಳೆ ದಿನದಿಂದ ದಿನಕ್ಕೆ ವೃದ್ಧಿಯಾ ಗುತ್ತದೆಯೇ ವಿನಃ ದಿನದಿಂದ ದಿನಕ್ಕೆ ಬದಲಾಗುತ್ತ ಅನುಕೂಲ ಸಿಂಧುವಾಗಿ ಬಿಡುವುದಿಲ್ಲ.ಅರವಿಂದ್‌ ದೆಹಲಿಯ ಯಾವುದೇ ಕ್ಷೇತ್ರದಿಂದ ಚುನಾವಣೆಗೆ ನಿಲ್ಲಬಹುದಿತ್ತು. ನಮ್ಮ ದೇಶದ ಪ್ರಧಾನಿ ಯವರು ಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ ಸ್ವಾರ್ಥದ ಒಂದೇ ಒಂದು ಗುರಿಯಿಂದ ತಮ್ಮ ಕ್ಷೇತ್ರಗಳ ನ್ನೆಲ್ಲ ತೊರೆದು ದೂರದ ಚಿಕ್ಕಮಗಳೂರಿಗೆ ವಲಸೆ ಬಂದಂತಹ ಅಸಹಜ ರಾಜಕೀಯದ ಉದಾಹರಣೆಗಳು ನಮ್ಮಲ್ಲಿರುವಾಗ, ಈತ ದೆಹಲಿಯ ಮುಖ್ಯಮಂತ್ರಿಯ ಎದುರೇ ಕಣಕ್ಕಿಳಿದುಬಿಟ್ಟನಲ್ಲ! ಗೂಳಿಯನ್ನು ಅದರ ಕೊಂಬುಗಳನ್ನು ಹಿಡಿದೇ ಎದುರಿಸಬಲ್ಲ ಧೀರ ನಾಯಕ ತ್ವದ ಒಂದು ಉತ್ಕೃಷ್ಟ ಉದಾಹರಣೆ ಇದು. ಬೋರ್ಡ್‌ ರೂಮಿನ ಸುತ್ತಮುತ್ತ ಹಿರಿಯ ಅಧಿಕಾರಿವರ್ಗ ಸಮಸ್ಯೆ ಯೊಂದನ್ನು ತಾವೇ ಮುಂದೆ ನಿಂತು ಎದುರಿಸುವ ಹೊಣೆ ಹೊತ್ತಿದೆ. ಏನೇನೆಲ್ಲ ಸಾಧಿಸಬಹುದು ಎಂಬು ದಕ್ಕೆ ಇದೊಂದು ಒಳ್ಳೆಯ ದೃಷ್ಟಾಂತವೇ ಸರಿ.ಇವೆಲ್ಲಕ್ಕಿಂತ ಮಿಗಿಲಾಗಿ, ಆತ ತನ್ನ ಸಿದ್ಧಾಂತದಲ್ಲಿ ಪೂರ್ಣ ನಂಬಿಕೆ ಇಟ್ಟ ಕೆಲವೇ ಕೆಲವರನ್ನು ಆಯ್ದು ಕೊಂಡು ತನ್ನ ಮೊದಲ ಸುತ್ತಿನ ಪಡೆ ಕಟ್ಟುತ್ತಾರೆ. ಅವ ರೆಲ್ಲ ತಮ್ಮ ತಮ್ಮ ಗುಂಪುಗಳಲ್ಲಿ ಪಕ್ಷದ ಸಿದ್ಧಾಂತವನ್ನು ಬಲಿಷ್ಠಗೊಳಿಸುತ್ತ ಸಾಗುತ್ತಾರೆ. ಅವರವರ ಗುಂಪುಗಳ ಲ್ಲಿನ ಅವರವರ ಅನುಯಾಯಿಗಳು ತಮ್ಮ ತಮ್ಮ ಸಮ ಮನಸ್ಕರನ್ನು ಗುರುತಿಸಿಕೊಂಡು ಮುನ್ನಡೆಯುತ್ತಾರೆ. ಆದಿಯಲ್ಲೆಲ್ಲೋ ಹನಿಯಾದ ಒಂದು ಜಲಬಿಂದು ಸಾಗುತ್ತಾ ಸಾಗುತ್ತ ಭೋರ್ಗರೆವ ನದಿಯಾಗಿ ಬಿಡುತ್ತದೆ.ಈ ಲೇಖನದಲ್ಲಿ ಮೊದಲೇ ಹೇಳಿದಂತೆ, ಕತೆ ಹೆಣೆ ಯುವುದಕ್ಕಿಂತ ಅಂತಹ ಕತೆಯಲ್ಲಿ ನಂಬಿಕೆ ಇಡುವ ಮೂಲ ಗುಂಪೊಂದನ್ನು ಕಂಪೆನಿಯಲ್ಲಿ ನಾಯಕನಾದ ವನು ಕಟ್ಟಬೇಕು. ಎಲ್ಲವನ್ನು ತಾನೇ ಮಾಡಬಲ್ಲೆ ಅಥವಾ ತಾನೇ ಮಾಡಬೇಕು ಎಂಬ ಸಂಕುಚಿತ ಭಾವ ವನ್ನು ತೊರೆದು, ಬದಲಾವಣೆಯ ಚುಕ್ಕಾಣಿಯನ್ನು ಕಂಪೆನಿಯ ಎಲ್ಲ ಸ್ತರಗಳಲ್ಲಿಯೂ ಯೋಗ್ಯರಲ್ಲಿ ಹಂಚು ವುದಿದೆಯಲ್ಲ, ಅದು ಬದಲಾವಣೆಯೊಂದರ ಮಾರ್ಗ ದಲ್ಲಿ ಬಹಳ ಮುಖ್ಯವಾದ ಘಟ್ಟ.‘ಆಮ್‌ ಆದ್ಮಿ’ ಪಕ್ಷ ಮುಂಬರುವ ದಿನಗಳಲ್ಲಿ ಎತ್ತ ಸಾಗುತ್ತದೆ? ಕಾಂಗ್ರೆಸ್‌ ಹುಲ್ಲಿನಂತೆ ಬೆಳೆದಿರುವ ಭ್ರಷ್ಟ ತೆಯ ದೇಶದ ರಾಜಕಾರಣವನ್ನು ಸಮಗ್ರವಾಗಿ ಬದ ಲಾಯಿಸಬಲ್ಲದೆ? ರಾಜಕೀಯ ದುಷ್ಟಶಕ್ತಿಗಳು ಇದಕ್ಕೆ ಅನುವು ಮಾಡಿಕೊಟ್ಟೀತೆ? ಪ್ರಶ್ನೆಗಳು ಅಗಣಿತ. ಆದರೆ ಒಂದು ಮಾತು ಸತ್ಯ. ರಾಜಕಾರಣದ ಸುಮಾರು ಕಸ ವನ್ನು ಈ ಪೊರಕೆ ಗುಡಿಸುತ್ತದೆ. ದೆಹಲಿಯಲ್ಲಿ ಕೇವಲ ನಾಲ್ಕಾರು ಸೀಟುಗಳನ್ನು ಹೊಂದಿಸಿಕೊಂಡು ಸರ್ಕಾರ ರಚಿಸುವುದಕ್ಕೆ ಅಂತಹ ಕೆಟ್ಟ ರಾಜಕೀಯದಲ್ಲೇ ಹಿಂಗೆಲ್ಲ ಸಾಗಿ ಬಂದು ಅರಳಿ ನಿಂತಿರುವ ಪಕ್ಷವೊಂದು ದಿಢೀರನೆ ಹಿಂದು ಮುಂದು ನೋಡುತ್ತಿರುವುದೇ ಜನಸಾಮಾನ್ಯನ ಭುಗಿಲೆದ್ದ ಆಂತರಿಕ ಶಕ್ತಿಯೆ ಒಳಕೂಗಿನ ದ್ಯೊತಕ.ಮುಂದಿನ ದಿನಗಳಲ್ಲಿ ‘ಆಮ್‌ ಆದ್ಮಿ’ ಪಕ್ಷ ಗೆಲ್ಲು ತ್ತದೋ ಅಥವಾ ಸೋಲುತ್ತದೋ ನನಗಂತೂ ಗೊತ್ತಿಲ್ಲ. ಅದನ್ನು ಕಾಲವೇ ನಿರ್ಧರಿಸುತ್ತದೆ. ಅದರೆ, ಅದರ ಸಿದ್ಧಾಂತ ಗೆದ್ದರೆ ಅದರ ಗೆಲುವಿನ ಹಾದಿಯಲ್ಲಿ ಬೋರ್ಡ್‌ ರೂಮಿನ ಸುತ್ತಮುತ್ತಲಿನ ಅನೇಕ ಸಮಸ್ಯೆ ಗಳಿಗೆ ಪರಿಹಾರ ಮಾರ್ಗ ದೊರೆತು, ಮ್ಯಾನೇಜ್‌ ಮೆಂಟಿನ ಕಲಿಕೆ ಮತ್ತಷ್ಟು ಶ್ರೀಮಂತವಾಗುವುದರ ಲ್ಲಂತೂ ನನಗೆ ಎಳ್ಳಷ್ಟೂ ಸಂಶಯವಿಲ್ಲ.ನಮ್ಮ, ನಿಮ್ಮ ಈ ದೇಶದ ಹಾಗೂ ನಮ್ಮೆಲ್ಲರ ಮುಂದಿನ ಪೀಳಿಗೆಗಳ ಉನ್ನತಿಗೆ, ಭ್ರಷ್ಟಾಚಾರದ ವಿರು ದ್ಧದ ಇಂತಹ ಎಲ್ಲ ಕೂಗುಗಳು ಸರ್ವದಾ ನಮ್ಮ ಕಿವಿ ಗಳಲ್ಲಿ ಮೊಳಗುತ್ತಿರಲಿ ಎಂಬುದೇ ನನ್ನ ಅನಿಸಿಕೆ. ಹಾಗಾಗಲೆಂದೇ ಆಶಿಸುತ್ತೇನೆ...

ಲೇಖಕರನ್ನು : satyesh.bellur@gmail.com  ಇ-ಮೇಲ್ ವಿಳಾಸದಲ್ಲಿ ಸಂಪರ್ಕಿಸಬಹುದು.

ಪ್ರತಿಕ್ರಿಯಿಸಿ (+)