ಶನಿವಾರ, ಜೂನ್ 12, 2021
28 °C

ಮೊಬೈಲ್‌ಗಳಿಗೆ ಶೀಘ್ರ ಮಾನದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಗುಣಮಟ್ಟದ ವಿಚಾರದಲ್ಲಿ ದೇಶದ ಗ್ರಾಹಕರ ಹಿತಾ­ಸಕ್ತಿ­ಯನ್ನು ಕಾಪಾಡುವುದಕ್ಕಾಗಿ ಭಾರತ­ದಲ್ಲಿ ಮಾರಾಟವಾಗುವ ಮೊಬೈಲ್‌ ಫೋನ್‌ಗಳಿಗೆ ಮಾನದಂಡಗಳನ್ನು ರೂಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯೋನ್ಮುಖವಾಗಿದೆ.



ಭಾರತದ ಸ್ಥಿತಿಗತಿಗಳಿಗೆ ಅನು­ಗುಣ­ವಾಗಿ ಮೊಬೈಲ್ ಫೋನ್‌ಗಳಿಗೆ ಮಾನ­ದಂಡ­ಗಳನ್ನು ರೂಪಿಸುವ ಕೆಲಸಕ್ಕೆ ದೂರ ಸಂಪರ್ಕ ಇಲಾಖೆ ಚಾಲನೆ ನೀಡಿದ್ದು, ಈ ಸಂಬಂಧ, ಟೆಲಿಕಾಂ ಎಂಜಿನಿಯರಿಂಗ್‌ ಕೇಂದ್ರ (ಟಿಇಸಿ) ಮತ್ತು ಭಾರತೀಯ ಮಾನಕ ಸಂಸ್ಥೆ (ಬಿಐಎಸ್‌) ಪ್ರತಿನಿಧಿ­ಗಳೊಂದಿಗೆ ಕಳೆದ ತಿಂಗಳು ಸಭೆ ನಡೆಸಿದೆ.



‘ದೂರಸಂಪರ್ಕ ಇಲಾಖೆಯು ಎರಡು ಆಯ್ಕೆಗಳ ಬಗ್ಗೆ ಯೋಚಿಸುತ್ತಿದೆ.  ಮೊಬೈಲ್‌ ಫೋನ್‌ಗಳಂತಹ ಟೆಲಿಕಾಂ ಉತ್ಪನ್ನಗಳನ್ನು ಇಲಾಖೆಯ ವ್ಯಾಪ್ತಿಗೆ ತರುವುದಕ್ಕಾಗಿ  ಭಾರತೀಯ ಟೆಲಿ­ಗ್ರಾಫ್‌ ಕಾಯ್ದೆಗೆ ತಿದ್ದುಪಡಿ ತರುವುದು ಇಲ್ಲವೇ, ಬಿಐಎಸ್‌ ಮೂಲಕ ಮಾನ­ದಂಡ­ಗಳನ್ನು ಜಾರಿಗೊಳಿಸು­ವುದು’ ಎಂದು ಅಧಿಕೃತ ಮೂಲಗಳು ಹೇಳಿವೆ.



ಎರಡನೇ ಆಯ್ಕೆಯೇ ಹೆಚ್ಚು ಸೂಕ್ತ ಎಂಬ ಅಭಿಪ್ರಾಯ­ವನ್ನು ಸಭೆಯಲ್ಲಿ ಭಾಗವಹಿಸಿದ್ದ ಪ್ರತಿನಿಧಿಗಳು ವ್ಯಕ್ತ­ಪಡಿ­ಸಿದ್ದಾರೆ ಎಂದೂ ಮೂಲಗಳು ಹೇಳಿವೆ.



‘ಗ್ರಾಹಕರ ಹಿತಾಸಕ್ತಿ ರಕ್ಷಣೆಗಾಗಿ ನಾವು ಈಗಾಗಲೇ ಮಾನದಂಡ­ಗಳನ್ನು ರೂಪಿ­ಸುವ ಪ್ರಕ್ರಿಯೆಯಲ್ಲಿ ನಿರತ­ರಾ­ಗಿ­ದ್ದೇವೆ. ದೂರ ಸಂಪರ್ಕ ಇಲಾಖೆ ಮತ್ತು ಟಿಇಸಿ ಸಲಹೆ ಮಾಡುವ ಮಾರ್ಗ­ದರ್ಶಿ ಸೂತ್ರಗಳನ್ನು ಪರಿಗಣಿಸು­ತ್ತೇವೆ’ ಎಂದು ಬಿಐಎಸ್‌ ವಿಜ್ಞಾನಿಗಳು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.