ಬುಧವಾರ, ಏಪ್ರಿಲ್ 21, 2021
32 °C

ಮೊಬೈಲ್‌ಫೋನ್‌ನಲ್ಲಿ ನೇರ ಪ್ರಸಾರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ನಾಡಿನ ಕನ್ನಡಿಗರು ವಿಶ್ವ ಕನ್ನಡ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ ಎಂದು ಕೊರಗುವ ಅಗತ್ಯವಿಲ್ಲ. ಜಗತ್ತಿನ ಯಾವುದೇ ಮೂಲೆಯಲ್ಲೇ ಇದ್ದರೂ, ಸಮ್ಮೇಳನದ ಕ್ಷಣ, ಕ್ಷಣದ ಮಾಹಿತಿ ಒದಗಿಸುವ ಅತ್ಯಾಧುನಿಕ ವ್ಯವಸ್ಥೆಯೊಂದನ್ನು ಮಾಡಲಾಗಿದೆ.ಮೊಬೈಲ್‌ನಲ್ಲಿ ಎಸ್‌ಎಂಎಸ್ ರೂಪದಲ್ಲಿ ಸಕಲ ಮಾಹಿತಿ ದೊರೆಯಲಿದೆ, ಹಾಗೇನಾದರೂ ಮೊಬೈಲ್‌ಗೆ 3ಜಿ ಸೌಲಭ್ಯವಿದ್ದರೆ ಸಮ್ಮೇಳನದ ಕಾರ್ಯಕ್ರಮಗಳನ್ನು ನೇರವಾಗಿ ವೀಕ್ಷಿಸಬಹುದಾಗಿದೆ.ಬೆಂಗಳೂರಿನ ಇಂಡ್ಯಾ ಕಾಮಿಕ್ಸ್ ಸಂಸ್ಥೆಯವರು ಅಂತಹದ್ದೊಂದು ವ್ಯವಸ್ಥೆಗೆ ಚಾಲನೆ ನೀಡಿದ್ದಾರೆ. ಈ ಸೇವೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಮಾಡಬೇಕಿರುವುದು ಇಷ್ಟೇ: ವಿಶ್ವ ಕನ್ನಡ ಸಮ್ಮೇಳದನದ ಸಂಪೂರ್ಣ ಮಾಹಿತಿ ನಿಮ್ಮ ಮೊಬೈಲ್‌ನಲ್ಲಿ ಮೂಡಿ ಬರಬೇಕಿದ್ದರೆ ನೀವು ಮಾಡಬೇಕಿರುವುದು ಇಷ್ಟೇ, ಸಂದೇಶದ ಸ್ಥಳದಲ್ಲಿ ‘ವಿಕೆಎಸ್’ ಎಂದು ಬರೆದು ಒಂದು ಸ್ಪೇಸ್ ಕೊಟ್ಟು ನಿಮ್ಮ ಹೆಸರು ಬರೆದು, ಅದನ್ನು 92200 92200 ಸಂಖ್ಯೆಗೆ ಕಳುಹಿಸಬೇಕು. ತಕ್ಷಣ ನಿಮ್ಮ ಮೊಬೈಲ್‌ಗೆ ವೀಡಿಯೊ ಸಂಪರ್ಕ ಸಿಕ್ಕಿಬಿಡುತ್ತದೆ.ಮುಂದೆ ಸಮ್ಮೇಳನ ಕೊನೆಗೊಳ್ಳುವ ತನಕವೂ ನಿರಂತರ ಎಸ್‌ಎಂಎಸ್ ಅಥವಾ ವಿಡಿಯೋ ಲಿಂಕ್ ಮೂಲಕ ಕ್ಷಣ ಕ್ಷಣದ ಕಾರ್ಯಕ್ರಮದ ವಿವರಗಳೆಲ್ಲ ಮೊಬೈಲ್‌ಗೆ ನೇರವಾಗಿ ಲಭ್ಯವಾಗಲಿದೆ. ಹೈಸ್ಪೀಡ್ ಇಂಟರ್‌ನೆಟ್ ಸೌಲಭ್ಯವಿರುವ ಕಂಪ್ಯೂಟರ್‌ಗಳಲ್ಲೂ ಕ್ಷಣ ಕ್ಷಣದ ಕಾರ್ಯಕ್ರಮಗಳನ್ನು ನೋಡಬಹುದಾಗಿದೆ.ವಿಶ್ವ ಕನ್ನಡ ಸಮ್ಮೇಳನದ ಸಂದರ್ಭದಲ್ಲಿ ಇಂತಹ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಜಗತ್ತಿನ ಎಲ್ಲೆಡೆ ಇರುವ ಕನ್ನಡಿಗರಿಗೆ ಮಾಹಿತಿ ರವಾನಿಸಲು ನಮಗೆ ಖುಷಿಯಾಗುತ್ತದೆ. ಇದೊಂದು ಕನ್ನಡದ ಮಟ್ಟಿಗೆ ಮಹತ್ವದ ಮೈಲಿಗಲ್ಲು’ ಎಂದು ಅಂತಹ ಸೇವೆ ಒದಗಿಸಲು ಸಜ್ಜಾಗಿರುವ ಬಿ.ಎಸ್. ರಘುರಾಮ ಹೇಳುತ್ತಾರೆ.ವಿಶ್ವ ಕನ್ನಡ ಸಮ್ಮೇಳನಕ್ಕೆ ಲಕ್ಷಾಂತರ ಮಂದಿ ಆಗಮಿಸುವ ನಿರೀಕ್ಷೆ ಇದ್ದು, ಅವರಿಗೆಲ್ಲ ಸೂಕ್ತ ಮಾಹಿತಿ ನೀಡುವ ಹೊಣೆಯನ್ನು ಬೆಂಗಳೂರಿನ ಇಂಡ್ಯಾ ಕಾಮಿಕ್ಸ್ ಸಂಸ್ಥೆ ವಹಿಸಿಕೊಂಡು, ಅಗಮಿಸುವ ಗಣ್ಯರ ನೋಂದಣಿ ಹಾಗೂ ಇನ್ನಿತರ ಮಾಹಿತಿಯನ್ನೂ ಒದಗಿಸುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.